24.1 C
ಪುತ್ತೂರು, ಬೆಳ್ತಂಗಡಿ
September 6, 2026
ಜಿಲ್ಲಾ ಸುದ್ದಿತಾಲೂಕು ಸುದ್ದಿಪುತ್ತೂರುಪ್ರಮುಖ ಸುದ್ದಿ

ರೈತರಿಗೆ ಬೆಳೆ ವಿಮೆ ಪಾವತಿಸಲು ಜು.31 ಅಂತಿಮ ದಿನ

2023 -24 ನೇ ಸಾಲಿನ ಮರುವಿನ್ಯಾಸ ಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಹಾಗೂ ಕಾಳುಮೆಣಸು, ಬೆಳೆಗಳಿಗೆ ಬೆಳೆ ವಿಮೆ ಪಾವತಿಸಲು ದಕ್ಷಿಣ ಕನ್ನಡ ರೈತರಿಗೆ ಜು.31 ಪ್ರೀಮಿಯಂ ಪಾವತಿಸಲು ಅಂತಿಮ ದಿನವಾಗಿದೆ. ಈ ಕುರಿತ ಆದೇಶವನ್ನು ರಾಜ್ಯ ಸರಕಾರ ಜು.19 ರಂದು ಹೊರಡಿಸಿದೆ.

ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಕಾರ್ಯ ರೂಪಕ್ಕೆ ಬಂದು 5 ವರ್ಷಗಳು ಸಂದಿದ್ದು, ಇಷ್ಟೂ ವರ್ಷಗಳಲ್ಲಿ ಜೂನ್‌ ತಿಂಗಳ ಆರಂಭದ ದಿನದಿಂದ ಜೂನ್‌ ತಿಂಗಳ ಅಂತ್ಯದವರೆಗೆ ಪ್ರೀಮಿಯಂ ಪಾವತಿಗೆ ಕಲ್ಪಿಸಿ ಸರಕಾರ ಅಧಿಸೂಚನೆ ಹೊರಡಿಸಿತ್ತು. ಆದರೆ ಈ ಬಾರಿ ಜುಲೈ ತಿಂಗಳ ಮಧ್ಯ ಭಾಗದವರೆಗೆ ಸರಕಾರ ಯಾವುದೇ ಅಧಿಸೂಚನೆ ಹೊರಡಿಸಿರಲಿಲ್ಲ . ಆದರೆ ಜೂನ್‌ ತಿಂಗಳಿನಲ್ಲಿ ಭತ್ತದ ಬೆಳೆ ಫಸಲ್‌ ಭಿಮಾ ಯೋಜನೆಯಡಿ ವಿಮಾ ಕಂತು ಪಾವತಿಸಲು ಸರಕಾರ ಆದೇಶ ಹೊರಡಿಸಿತ್ತು. ಇದರಿಂದ ಸಹಜವಾಗಿಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗರಿಷ್ಟ ಪ್ರಮಾಣದಲ್ಲಿರುವ ಅಡಿಕೆ ಬೆಳೆಗಾರರು ಆತಂಕಗೊಂಡಿದ್ದರು.

ನಿನ್ನೆ ಸರಕಾರ ದಕ್ಷಿಣ ಕನ್ನಡ ಜಿಲ್ಲೆ ಸಂಬಂಧಿಸಿದಂತೆ ಅಡಿಕೆ ಮತ್ತು ಕಾಳು ಮೆಣಸನ್ನು ಬೆಳೆ ವಿಮೆ ಯೋಜನೆಯಡಿ ಸೇರಿಸಿ ಆದೇಶಿಸಿದೆ.

ಅಡಿಕೆಗೆ ಗರಿಷ್ಟ ವಿಮಾ ಮೊತ್ತ ಹೆಕ್ಟರಿಗೆ 128000 ಎಂದು ನಿಗದಿ ಪಡಿಸಲಾಗಿದ್ದು ಇದರಲ್ಲಿ ರೈತ ಪಾವತಿಸಬೇಕಾದ ಮೊತ್ತ ರೂ 6400 ಇನ್ನೂ ಕಾಳು ಮೆಣಸಿಗೆ ಹೆಕ್ಟರ್‌ ವೊಂದಕ್ಕೆ ಗರಿಷ್ಟ ಪ್ರೀಮಿಯಂ ಮೊತ್ತ 47000 ರೂಪಾಯಿ ಎಂದು ನಿಗದಿಪಡಿಸಲಾಗಿದ್ದು, ಅದರಲ್ಲಿ ರೈತ ಪಾವತಿಸಬೇಕಾದ ಮೊತ್ತ ರೂ 2350 ಆಗಿರುತ್ತದೆ.

Related posts

ಮೇ 20: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ: ಅಳದಂಗಡಿಯಲ್ಲಿ ರೋಡ್ ಶೋ, ವಿಜಯೋತ್ಸವ- ಸಂದೀಪ್ ನೀರಲ್ಕೆ

Suddi Udaya

ಕರಾಟೆ ಚಾಂಪಿಯನ್ ಶಿಪ್: ಕೀರ್ತೇಶ್ ಗೌಡ ಕುಮಿಟೆ ವಿಭಾಗದಲ್ಲಿ ಚಿನ್ನ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ

Suddi Udaya

ಬಿ. ವೋಕ್ ಡಿಜಿಟಲ್ ಮೀಡಿಯಾ ಫಿಲ್ಮ್ ಮೇಕಿಂಗ್ ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಗರ್ಡಾಡಿ: ಗಾಳಿ ಮಳೆಗೆ ಮಣ್ಣು ಕುಸಿತ, ಮನೆಗೆ ಹಾನಿ

Suddi Udaya

ಧರ್ಮಸ್ಥಳ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಗೆ ಬೆಳಾಲು ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದ ಜಾತ್ರಾಮಹೋತ್ಸವದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ

Suddi Udaya

ಉಜಿರೆ: ಆಟೋ ಚಾಲಕ ಮಂಜುನಾಥ ನಿಧನ

Suddi Udaya
error: Content is protected !!