ಕೊಕ್ಕಡ: ನಿವೃತ್ತ ಶಿಕ್ಷಕರ ಬೀಳ್ಕೊಡುಗೆ ಸಮಾರಂಭ ಹಾಗೂ ನಿವೃತ್ತ ಸೈನಿಕ ಕೆ. ಮಹಾಬಲರವರಿಗೆ ಅಭಿನಂದನೆ

Suddi Udaya

ಕೊಕ್ಕಡ: ಕಳೆದ 39 ವರ್ಷಗಳ ಸುದೀರ್ಘ ಕಾಲ ಶಿಕ್ಷಕಿಯಾಗಿ, ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ಸೇವಾ ನಿವೃತ್ತರಾದ ಜೆಸಿಂತಾ ಡಿ ಸೋಜ ಅವರಿಗೆ ಬೀಳ್ಕೊಡುಗೆ ಸಮಾರಂಭವು ಜು.19 ರಂದು ಸಂತ ಜಾನರ ಶಾಲಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕ ವಂ. ಜಗದೀಶ್ ಪಿಂಟೋ ಅಧ್ಯಕ್ಷತೆ ವಹಿಸಿದ್ದರು.

ಭಾರತೀಯ ರಕ್ಷಣಾ ಇಲಾಖೆಯಲ್ಲಿ 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾ ನಿವ್ರತ್ತರಾದ ಇದೇ ಶಾಲಾ ಹಳೆ ವಿದ್ಯಾರ್ಥಿ ಹಾಗೂ ಭಾರತೀಯ ಸೈನ್ಯದಲ್ಲಿ ಜೂನಿಯರ್ ಕಮಿಷನಂಡ್ ಆಫೀಸರ್ (ಸುಬೇದಾರ್ ) ಕೆ. ಮಹಾಬಲ ಅವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಧರ್ಮ ಗುರುಗಳಾದ ವಂ. ಅಶೋಕ್ ಡಿ ಸೋಜ, ಶಿಕ್ಷಕ ಸಂಘದ ಜಿಲ್ಲಾ ಕಾರ್ಯದರ್ಶಿ ವಿಮಲ್ ಕುಮಾರ್, ಜೋಸೆಫ್ ಪಿರೇರಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಪ್ರವೀಣ್ ನೋಯೆಲ್ ಮೊಂತೆರೊ, ಕಾರ್ಯದರ್ಶಿ ವೀಣಾ ಮಾಡ್ತಾ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ಹೆರಾಲ್ಡ್ ಗಲ್ಭಾಂವೋ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಜೆನೆವಿವ್ ಫೆರ್ನಾಂಡಿಸ್, ಗೌರವ ಶಿಕ್ಷಕಿಯಾದ ಚಿತ್ರಾ ಅವರು ಸನ್ಮಾನ ಪತ್ರ ವಾಚಿಸಿದರು.

ಹಳೆಯ ವಿದ್ಯಾರ್ಥಿ ಸಂಘದ ನಾಯಕರಾದ ಸ್ವರೂಪ ಶೆಟ್ಟಿ , ಪೋಷಕರಾದ ಗೀತಾ ಕುಟಿನ್ಹಾ ಸನ್ಮಾನಿತರ ಪರವಾಗಿ
ಅನಿಸಿಕೆಗಳನ್ನು ತಿಳಿಸಿದರು.

ಶಿಕ್ಷಕಿ ಚೈತ್ರಾ ಅಭಿನಂದನಾ ಭಾಷಣ ಮಾಡಿದರು.

ಶಾಲಾ ವಿದ್ಯಾರ್ಥಿ ನಾಯಕಿ ಪ್ರೆಸಿಲ್ಲಾ ಗಲ್ಭಾಂವೋ, ಕೊಕ್ಕಡ ಕಪಿಲಾ ಜೇಸಿ ಸಂಸ್ಥೆಯ ಅಧ್ಯಕ್ಷರಾದ ಜಿತೇಶ್ ಎಲ್. ಪಿರೇರಾ, ಜಸ್ವಂತ್ ಪಿರೇರಾ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿ ಗಳು, ಪೋಷಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಶಿಕ್ಷಕಿಯಾದ ಅಂಬಿಕಾ ಸಭಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಚೈತ್ರಾ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಅನಿಶಾ ವಾಸ್ ವಂದಿಸಿದರು.

Leave a Comment

error: Content is protected !!