33.4 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪಡಂಗಡಿ: ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಭವ್ಯ ಚಾತುರ್ಮಾಸ

ಪಡಂಗಡಿ: ಪರಮ ಪೂಜ್ಯ “ಧಾನ್ಯ ದಿವಾಕರ ಮುನಿಶ್ರೀ 108 ಜೈಕೀರ್ತಿ ಮಹಾರಾಜರ ಪರಮ ಶಿಷ್ಯ ಪರಮ ಪೂಜ್ಯ ಮುನಿಶ್ರೀ 108 ದಿವ್ಯಸಾಗರ ಮಹಾರಾಜರು.ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಪಡಂಗಡಿಯಲ್ಲಿ ಜು.9 ರಿಂದ ನ.12 ಭವ್ಯ ಚಾತುರ್ಮಾಸ ವರ್ಷಯೋಗ ನಡೆಸಲಿದ್ದಾರೆ.

ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜೈನ ಮುನಿಗಳು ಈ ವರ್ಷ ಪಡಂಗಡಿ ಬಸದಿಯಲ್ಲಿ ಚಾತುರ್ಮಾಸ ವೃತವನ್ನು ಆಚರಿಸುತ್ತಿದ್ದಾರೆ.ಈ ವೇಳೆ ಆಶೀರ್ವಚನ ನೀಡಿ ಸ್ವಾಮಿಗಳು ಜೈನ ಮುನಿ ಹತ್ಯೆಖಂಡಿಸಿ ದೇಶವೇ ಕಂಬನಿ ಮಿಡಿದಿದೆ.ಜೈನ ಧರ್ಮಕ್ಕೆ ಸಂಕಟವಾಗಿದೆ. ಚಾತುರ್ಮಾಸ ದಲ್ಲಿ ನಮಗೆ ಜೀವನದಲ್ಲಿ ಪರಿವರ್ತನೆಯಾಗುತ್ತದೆ. ಪಡಂಗಡಿಯಲ್ಲಿ ಧರ್ಮ ನೆಲೆಯಾಗಿದೆ. ಇಲ್ಲಿ ಶಾಂತಿ ನೆಮ್ಮದಿ ನೆಲೆ ನಿಂತಿದೆ ಇಲ್ಲಿನ ಜನ ಭಕ್ತಿ ಹೆಚ್ಚಾಗಿದೆ ಅದ್ದರಿಂದ ಧರ್ಮ ಸಂಚಯನ ಹೆಚ್ಚಿದೆ, ಆಕರ್ಷಣೆ ಇದೆ ಎಂದು ಹೇಳಿದರು.

ಇನ್ನೂ 4 ತಿಂಗಳ ಕಾಲ ಪಡಂಗಡಿಯಲ್ಲಿ ಚಾತುರ್ಮಾಸ ವೃತವನ್ನು ಕೈಗೊಳ್ಳಲಿದ್ದಾರೆ.ಈ ಸಂದರ್ಭದಲ್ಲಿ ಬಸದಿಯ ಪ್ರಮುಖರು ಜೈನ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

Related posts

ಕಾಶಿಪಟ್ಣ: ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಅಭಿನಂದನೆ

Suddi Udaya

ಕನ್ನಡ, ತುಳು ಸಾರಸ್ವತ ಲೋಕದ ಖ್ಯಾತ ಸಾಹಿತಿ, ಯಕ್ಷಗಾನ ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದ ಡಾ. ಅಮೃತ ಸೋಮೇಶ್ವರ ರವರ ನಿಧನಕ್ಕೆ ಡಾ. ಡಿ ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya

ಮಾತೃ ವೇದಿಕೆ ಉದನೆ ವಲಯ ಸಾಂಸ್ಕೃತಿಕ ಮತ್ತು ಕ್ರೀಡಾ ಕೂಟ: ನೆಲ್ಯಾಡಿ ಸಂತ ಅಲ್ಫೋನ್ಸ ಚರ್ಚ್ ಗೆ ಸಮಗ್ರ ಪ್ರಶಸ್ತಿ

Suddi Udaya

ಪುಂಜಾಲಕಟ್ಟೆ : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ: ಅಧ್ಯಕ್ಷರಾಗಿ ಚಿದಾನಂದ ಮಾಣಿಂಜ ಆಯ್ಕೆ

Suddi Udaya

ಮಚ್ಚಿನ: ಎ.30-ಮೇ.03, ತರವಾಡು ಮನೆಯ ಗೃಹಪ್ರವೇಶ ಹಾಗೂ ದೈವ ದೇವರುಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Suddi Udaya

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya
error: Content is protected !!