ಉಜಿರೆ : ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ(ರಿ.)ಗ್ರಾಮ ಸಮಿತಿ ಉಜಿರೆ ಇದರ ವಾರ್ಷಿಕ ಮಹಾಸಭೆಯು ಉಜಿರೆ ಶಾರದ ಮಂಟಪದಲ್ಲಿ ಉಜಿರೆ ಗ್ರಾಮ ಸಮಿತಿ ಅಧ್ಯಕ್ಷ ಧರ್ಣಪ್ಪ ಗೌಡ ಧರಣಿ, ಕಿರಿಯಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮವನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಸುಳ್ಯದ ಉಪನ್ಯಾಸಕಿ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರೆ ಡಾ. ಅನುರಾಧ ಕುರಿಂಜಿ ಭಾಗವಹಿಸಿದ್ದರು. ಉಜಿರೆ ಗ್ರಾಮ ಸಮಿತಿಯ ಉಸ್ತುವಾರಿ ಹಾಗೂ ತಾಲೂಕು ಸಂಘದ ಉಪಾಧ್ಯಕ್ಷ ಕೃಷ್ಣಪ್ಪ ಗೌಡ,ಉಜಿರೆ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಗೌಡ’ಅಪ್ರಮೇಯ’ ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಸಾಧಕರಾದ ನಿವೃತ್ತ ಸೈನಿಕ ಡಿ. ಎಂ. ಗೌಡ, ನಿವೃತ್ತ ಶುತ್ತೂಷಕಿ ದೇವಮ್ಮ ನಿವೃತ್ತ ಭೂಸೇನೆ ಯೋಧ ತಿಮ್ಮಪ್ಪ ಗೌಡ ಇ. ಕೆ. ಹೀರ್ಯ ಇವರನ್ನು ಸನ್ಮಾನ ಮಾಡಲಾಯಿತು. ಗ್ರಾಮ ಸಮಿತಿಯ ರಮೇಶ್ ಪೈಲಾರ್,ಉಪಾಧ್ಯಕ್ಷ ಗೋಪಾಲಕೃಷ್ಣ ಜಿ. ಕೆ., ಕೋಶಾಧಿಕಾರಿ ಬಾಲಕೃಷ್ಣ ಗೌಡ ಕೋರಮೇರು, ಜೊತೆ ಕಾರ್ಯದರ್ಶಿ ಲಕ್ಷ್ಮಣ ಗೌಡ, ಯುವ ವೇದಿಕೆಯ ಅಧ್ಯಕ್ಷ ಸೋಮಶೇಖರ್ ಕೆ., ಕಾರ್ಯದರ್ಶಿ ಭರತ್, ಸಮಿತಿಯ ಪದಾಧಿಕಾರಿಗಳು, ಸದಸ್ಯರು,ತಾಲೂಕು ಸಮಿತಿಯ ಮಾಜಿ ಕಾರ್ಯದರ್ಶಿ ಉಪನ್ಯಾಸಕ ಮೋಹನ ಗೌಡ, ತಾಲೂಕು ವಾಣಿ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಸುರೇಶ ಗೌಡ ಕೌಡಂಗೆ ಸ್ವಜಾತಿ ಭಾಂದವರು ಉಪಸ್ಥಿತರಿದ್ದರು.
ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ ವರದಿ ವಾಚಿಸಿದರು. ಉಪಾಧ್ಯಕ್ಷ ರಮೇಶ್ ಪೈಲಾರ್ ಲೆಕ್ಕ ಪತ್ರ ಮಂಡಿಸಿದರು
ಶ್ರೀ ಧ. ಮ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಧರ್ಮೇ೦ದ್ರ ಕುಮಾರ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು