September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದೇಯಿಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ

ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಕರ್ನಾಟಕ ಸರ್ಕಾರದ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ರವರು ಆಗಮಿಸಿ ಶ್ರೀ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಈ ಸಂಧರ್ಭದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಮತ್ತು ಪುತ್ತೂರಿನ ಶಾಸಕರಾದ ಅಶೋಕ್ ರೈ ಯವರನ್ನು ಅಭಿನಂದಿಸಲಾಯಿತು.

 ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಧು ಬಂಗಾರಪ್ಪ ನವರು  ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಶಿಲಾನ್ಯಾಸ ಸಂಧರ್ಭದಲ್ಲಿ ಬಂದಿದ್ದೆ ಬ್ರಹ್ಮಕಲಶ ಸಂದರ್ಭದಲ್ಲಿ ಬರಲಾಗಲಿಲ್ಲ ನನಗೆ ಶ್ರೀ ಕ್ಷೇತ್ರಕ್ಕೆ ಬರಬೇಕೆಂಬ ಬಹುದಿನಗಳ ಆಸೆ ಇತ್ತು ಮಂತ್ರಿಯಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿದ ಪ್ರಥಮ ದಿನವೇ ಕ್ಷೇತ್ರಕ್ಕೆ ತೆರಳ ಬೇಕೆಂಬ ಪ್ರೇರಣೆ ನನ್ನಲಿ ಮಹಾ ಮಾತೆ ದೇಯಿ ಬೈದೆತಿ ಉಂಟುಮಾಡುವ  ಮೂಲಕ ಕ್ಷೇತ್ರಕ್ಕೆ ಭೇಟಿ ಕೊಡುವ ಭಾಗ್ಯ ನನಗೆ ಒದಗಿ ಬಂತು ಇದು ಇಲ್ಲಿಯ ಮಹಾನ್ ಶಕ್ತಿಯ ಕೃಪೆ ಎಂದು ಭಾವುಕರಾದರು. ಶ್ರೀ ಕ್ಷೇತ್ರಕ್ಕೆ ಸರ್ಕಾರದಿಂದ ಸಮುದಾಯ ಭವನ ಮತ್ತು ಪ್ರವಾಸೋದ್ಯಮದ ಪ್ರಯೋಜನಗಳನ್ನು ಒದಗಿಸಿಕೊಡುವ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.

ಸ್ಥಳೀಯ  ಶಾಸಕರಾದ ಅಶೋಕ್ ರೈ ಯವರು ಕ್ಷೇತ್ರದ ಅಭಿವೃದ್ಧಿಗೆ ಅವಶ್ಯಕವಾದ ಮೂಲಭೂತ ಅವಶ್ಯಕತೆಗಳನ್ನು ಸರ್ಕಾರದ ಮೂಲಕ ಒದಗಿಸಿ ಕೊಡುವುದಾಗಿ ತಿಳಿಸಿದರು. ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೆರಾಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
 ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್ ಸ್ವಾಗತಿಸಿ ಉಪಾಧ್ಯಕ್ಷ ರಾದ ರವಿಪೂಜಾರಿ ಚಿಲಿಂಬಿ ಧನ್ಯವಾದವಿತ್ತರು. ಕಾರ್ಯಕ್ರಮದಲ್ಲಿ ಗೌರವ ಅಧ್ಯಕ್ಷರಾದ ಜಯಂತ ನಡುಬೈಲ್, ಅನುವಂಶಿಕ ಮುಕ್ತೇಸರ ಶ್ರೀಧರ ಪೂಜಾರಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕಾವು ಹೇಮನಾಥ ಶೆಟ್ಟಿ, ಅನಿತಾ ಶೆಟ್ಟಿ, ಡಾ.ರಾಜಾರಾಮ್, ಅಕ್ಷಿತ್ ಸುವರ್ಣ, ಇಫ್ತಿಕಾರ್, ಸತೀಶ್ ಕೆಡಿಂಜೆ ನವನೀತ್ ಹಿಂಗಾಣಿ, ಶೇಖರ್ ಬಂಗೇರ, ರಾಜೇಂದ್ರ ಚಿಲಿಂಬಿ, ನಾರಾಯಣ ಮಚ್ಚಿನ, ಪ್ರಕಾಶ್ ಪೂಜಾರಿ ನಾರವಿ ಮುಂತಾದವರು ಉಪಸ್ಥಿತರಿದ್ದರು.

Related posts

ಕೀ ರಂದ್ರ ಶಸ್ತ್ರ ಚಿಕಿತ್ಸೆ ಯಶಸ್ವಿ

Suddi Udaya

ಸುಲ್ಕೇರಿಮೊಗ್ರು ಸದಾನಂದ ಆಚಾರ್ಯರಿಗೆ ಸನ್ಮಾನ

Suddi Udaya

ಬೆಳಾಲು ಹಾ.ಉ.ಸ. ಸಂಘದ ಚುನಾವಣೆ: ಬಿಜೆಪಿ ಬೆಂಬಲಿತ ನಿರ್ದೇಶಕರಿಗೆ ಗೆಲುವು

Suddi Udaya

ಮುಂಡಾಜೆ :ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ

Suddi Udaya

ಮುಂಡಾಜೆ ಸೀಟು ಬಳಿ ಧರೆಗುರುಳಲು ಸಿದ್ಧಗೊಂಡ ಮರಗಳು

Suddi Udaya

ಭಾರೀ ಮಳೆ; ಮದ್ದಡ್ಕ ಹೋಟೆಲ್ ಗೆ ನುಗ್ಗಿದ ಮಳೆ ನೀರು

Suddi Udaya
error: Content is protected !!