24.6 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೆ.ಎಸ್.ಟಿ.ಎ ವೇಣೂರು ಟೈಲರ್ಸ್ ವಲಯದ ಮಹಾಸಭೆ

ಕೆ.ಎಸ್.ಟಿ.ಎ ವೇಣೂರು ಟೈಲರ್ಸ್ ವಲಯದ ಮಹಾಸಭೆಯು ಗಾರ್ಡನ್ ವ್ಯೂ ಸಭಾ ಭವನದ ಕಾಂಪ್ಲೆಕ್ಸ್ ನಲ್ಲಿ ವಲಯ ಸಮಿತಿಯ ಅಧ್ಯಕ್ಷರಾದ ಆನಂದ ಕುಲಾಲ್ ರವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಗೆ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕುಶಾಲಪ್ಪ ಗೌಡ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ರಾಜು ಪೂಜಾರಿಯವರು ಹಾಗೂ ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಆಗಮಿಸಿದ್ದರು . ಈ ಸಭೆಯಲ್ಲಿ ಹಿರಿಯ ವೃತ್ತಿ ಭಾಂದವರಾದ ಶಾಂತಿರಾಜ ಟೈಲರ್ ಕುಂಡದಬೆಟ್ಟು, ಶ್ರೀನಿವಾಸ ಟೈಲರ್ ಪಡ್ಡಂದಡ್ಕ, ಸದಾನಂದ ಟೈಲರ್ ಮೂಡುಕೋಡಿ, ಶೀನ ನಾಯ್ಕ ಕರಿಮಣೇಲು, ಇವರುಗಳನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಶಾಂತಿರಾಜ ಟೈಲರ್ ಇವರು ತಮ್ಮ ಅನಿಸಿಕೆಯನ್ನು ಹೇಳಿದರು ಹಾಗೂ ಈ ಸಂದರ್ಭದಲ್ಲಿ ಡಿಜಿಟಲ್ ಐಡಿ ಕಾರ್ಡ್ ಗಳನ್ನು ವಿತರಿಸಲಾಯಿತು ಮತ್ತು ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಉಮೇಶ್ ಕಾರ್ಯದರ್ಶಿಯಾಗಿ ಸುನಿತಾ ಕೋಶಾಧಿಕಾರಿಯಾಗಿ ಸುಪ್ರೀತ ಇವರು ಆಯ್ಕೆಯಾದರು ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನ ಹೊಂದಿದ ನಮ್ಮ ಕೆ.ಎಸ್.ಟಿ.ಎ ಕ್ಷೇತ್ರ ಸಮಿತಿ ಸದಸ್ಯರಾದ ಸಂಜೀವ ಟೈಲರ್ ಪಾಣೂರು, ಶಿಲ್ಪಾ ಆಚಾರ್ಯ ಗೋಳಿಯಂಗಡಿ ರಮೇಶ್ ಆಚಾರ್ಯ ಅಂಡಿಂಜೆ ಇವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು ಹಾಗೂ ಶಿಲ್ಪ ಆಚಾರ್ಯ ಇವರ ಕುಟುಂಬಕ್ಕೆ ದೇಣಿಗೆ ಸಂಗ್ರಹಿಸಲಾಯಿತು ಮುಖ್ಯ ಅತಿಥಿಯಾದ ಕುಶಾಲಪ್ಪ ಗೌಡ ಇವರು ಶುಭ ಹಾರೈಸಿದರು.

ನಿರ್ಗಮನ ಅಧ್ಯಕ್ಷರಾದ ಆನಂದ ಟೈಲರ್ ಇವರು ಅನಿಸಿಕೆ ವ್ಯಕ್ತಪಡಿಸಿದರು ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.

ವಲಯದ ಕಾರ್ಯದರ್ಶಿ ಸಹನಾ ಶಾಸ್ತ್ರಿ ಅವರು ವರದಿ ಮಂಡನೆ ಮಾಡಿದರು ಪ್ರಮೀಳಾರವರು ಲೆಕ್ಕ ಪತ್ರ ಮಂಡನೆ ಮಾಡಿದರು ವಲಯದ ಅಧ್ಯಕ್ಷರಾದ ಆನಂದ ಟೈಲರ್ ಇವರು ಸ್ವಾಗತ ಭಾಷಣ ಮಾಡಿದರು ವಲಯದ ಕೋಶಾಧಿಕಾರಿ ಪ್ರಮೀಳ ಅವರು ಧನ್ಯವಾದವಿತ್ತರು ಸುನಿತಾ ರವರು ಕಾರ್ಯಕ್ರಮ ನಿರೂಪಿಸಿದರು ಕಾರ್ಯಕ್ರಮದ ನಂತರ ನಮ್ಮ ಕ್ಷೇತ್ರ ಸಮಿತಿಯ ಮಾಜಿ ಅಧ್ಯಕ್ಷರು ರಾಘವ ಪುತ್ರನ್ ತೀರ ಅನಾರೋಗ್ಯ ಸ್ಥಿತಿಯಲ್ಲಿ ಇರುವುದರಿಂದ ವಲಯ ಸಮಿತಿಯ ಪದಾಧಿಕಾರಿಗಳು ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಇವರ ಮನೆಗೆ ಹೋಗಿ ಇವರನ್ನು ಸನ್ಮಾನಿಸಲಾಯಿತು ಹಾಗೂ ಆನಂದ ಟೈಲರ್ ಸಾವ್ಯ ಇವರನ್ನು ಕೂಡ ಮನೆಗೆ ಹೋಗಿ ಸನ್ಮಾನಿಸಲಾಯಿತು.

Related posts

ಕರಂಬಾರು ಗುತ್ತು ಸುಮಿತ್ರ ಹೆಗ್ಡೆಯವರ ಅಡಿಕೆ ತೋಟಕ್ಕೆ ಸಿಡಿಲು ಬಡಿದು ಹಾನಿ

Suddi Udaya

ಎಸ್ ಎಸ್ ಎಲ್ ಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ಚಿನ್ಮಯ್ ಗೆ ಮಂಜುಶ್ರೀ ಸೀನಿಯರ್ ಚೇಂಬರಿಂದ ಸನ್ಮಾನ

Suddi Udaya

ಲಾಯಿಲ: ಕುಂಟಿನಿ ಅಲ್ ಬುಖಾರಿ ಜುಮ್ಮಾ ಮಸೀದಿಯಲ್ಲಿ ಈದುಲ್ – ಹದಾ ಆಚರಣೆ

Suddi Udaya

ಆಡಳಿತ ಪಕ್ಷ ರಾಜ್ಯಪಾಲರಿಂದ ಮಾಡಿಸಿರುವ ಭಾಷಣ ಕೇವಲ ಸಾಹಿತ್ಯಿಕವಾಗಿ ರಂಜನೀಯವಾಗಿತ್ತೇ ಹೊರತು ಅಭಿವೃದ್ಧಿಯ ಚಿಂತನೆ ಇಲ್ಲದೆ ನೀರಸವಾಗಿತ್ತು: ಎಂ.ಎಲ್‌.ಸಿ ಪ್ರತಾಪಸಿಂಹ ನಾಯಕ್

Suddi Udaya

ಲಾಯಿಲ ಸಂಗಾತಿ ನಗರದಲ್ಲಿ ವಿದ್ಯುತ್ ಕಂಬದ ಮೇಲೆ ಬಿದ್ದು ರಸ್ತೆಗೆ ಅಡ್ಡಲಾಗಿ ಉರುಳಿದ 3 ಮರಗಳು

Suddi Udaya

ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟ: ಉಜಿರೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!