23.3 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ: ಹತ್ಯಡ್ಕ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ

ಅರಸಿನಮಕ್ಕಿ : ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅರಸಿನಮಕ್ಕಿ ಇದರ 2022- 2023ನೇ ಸಾಲಿನ ವಾರ್ಷಿಕ ಮಹಾಸಭೆಯು ಶ್ರೀ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಅರಸಿನಮಕ್ಕಿ ಯಲ್ಲಿ ಜು.30 ರಂದು ಜರುಗಿತು.

ಅಧ್ಯಕ್ಷತೆಯನ್ನು ಸಹಕಾರಿ ಸಂಘದ ಅಧ್ಯಕ್ಷ ರಾಘವೇಂದ್ರ ನಾಯಕ್ ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಸಂಘದ ಉಪಾಧ್ಯಕ್ಷ ರಾಜು ಕೆ., ನಿರ್ದೇಶಕರು ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್ ವರದಿ ಓದಿದರು.

ಮೊದಲಿಗೆ ನಿಧನರಾದ ಸಂಘದ ಸದಸ್ಯರಿಗೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಕಳೆದ ವರ್ಷ ಎಸ್. ಎಸ್. ಎಲ್. ಸಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳನ್ನು ಗೌರವಿಸಲಾಯಿತು. ನಿವೃತ್ತ ಯೋಧ ಮಹಾಬಲ ಕೆ. ಮುದ್ದಿಗೆ ಇವರನ್ನು ಸನ್ಮಾನಿಸಲಾಯಿತು.

ಶಾಶ್ವತ ಪ್ರಾರ್ಥಿಸಿದರು. ನಿರ್ದೇಶಕ ರತೀಶ್ ಬಿ. ಸ್ವಾಗತಿಸಿದರು. ಗುಮಾಸ್ತೆ ಹರಿಣಾಕ್ಷಿ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಮುರಳೀಧರ ಶೆಟ್ಟಿಗಾರ್ ಧನ್ಯವಾದವಿತ್ತರು.

Related posts

ನಾರಾವಿ ಸಿಎ ಬ್ಯಾಂಕ್ ಮತ್ತೊಮ್ಮೆ ಬಿಜೆಪಿ ತೆಕ್ಕೆಗೆ, ಬಿಜೆಪಿ ಕಾರ್ಯಕರ್ತರಿಂದ ಹರ್ಷೋದ್ಗಾರ, ಅಭಿನಂದನೆ ಸಲ್ಲಿಕೆ

Suddi Udaya

ನಾಳೆ(ಮೇ25): ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ತಂಗಡಿಗೆ ಆಗಮನ

Suddi Udaya

ಅಪ್ಸರಾ ಫ್ಯಾಶನ್ ಸೆಂಟರ್ ನಲ್ಲಿ ಆಷಾಡ ಹಾಗೂ ಮಾನ್ಸೂನ್ ಆಫರ್ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಯ ಮೇಲೆ ಶೇ.20 ಡಿಸ್ಕೌಂಟ್

Suddi Udaya

ವೇಣೂರು ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ವೇಣೂರು ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

Suddi Udaya

ಭಾರತೀಯ ಸೇನೆಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಸುಬೇದಾರ್ ಮೇಜರ್ ಶಿವಕುಮಾರ್ ರವರಿಗೆ ಬೆಳ್ತಂಗಡಿಯಲ್ಲಿ ಭವ್ಯ ಸ್ವಾಗತ

Suddi Udaya

ಅಂಡಿಂಜೆ ಗ್ರಾ.ಪಂ ಮಾಜಿ ಅಧ್ಯಕ್ಷ ರಾಘವ ಪುತ್ರನ್ ನಿಧನ

Suddi Udaya
error: Content is protected !!