24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಸಪ್ತಾಹ ಸಂಪನ್ನ

ಬಳಂಜ: ಜೆಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ಬಳಂಜ ಇದರ ಸಹಯೋಗದಲ್ಲಿ ಧಾನ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದೊಂದಿಗೆ ಜೂನಿಯರ್ ಜೆಸಿ ಸಪ್ತಾಹ ಸಮಾರೋಪಗೊಂಡಿತು.

ಜು.24 ರಂದು ಸರಕಾರಿ ಪದವಿ ಪೂರ್ವ ಕಾಲೇಜು ನಡ ಇಲ್ಲಿ ಉದ್ಘಾಟನೆಗೊಂಡು , ವ್ಯಕ್ತಿತ್ವ ವಿಕಸನ ತರಬೇತಿ, ಅಶಕ್ತರಿಗೆ ಧಾನ್ ನೆರವು, ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ, ಸ್ವಚ್ಛತಾ ಕಾರ್ಯಕ್ರಮ, ನೇತ್ರದಾನದ ಬಗ್ಗೆ ಅರಿವು ಕಾರ್ಯಕ್ರಮ, ಹೊನೆಸ್ಟ್ ಶಾಪ್, ಮುಖಾಂತರ ಜು. 30 ರಂದು ನಾರಾಯಣ ಗುರು ಸಮುದಾಯದ ಭವನ ಬಳಂಜ ಇಲ್ಲಿ ಶಿಕ್ಷಕರಿಗೆ ಗೌರವ ಸಲ್ಲಿಸುವುದರೊಂದಿಗೆ ಸಮಾರೋಪಗೊಂಡಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಅಧ್ಯಕ್ಷರಾದ ರಾಮಕೃಷ್ಣ ಶರ್ಮಾ ವಹಿಸಿದ್ದರು,

ವೇದಿಕೆಯಲ್ಲಿ ನಾರಾಯಣ ಗುರು ಸೇವಾ ಸಮಿತಿ ಬಳಂಜ ಇದರ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಎಚ್. ಎಸ್ ಕಾರ್ಯಕ್ರಮ ಉದ್ಘಾಟಿಸಿ ಶುಭಕೋರಿದರು. ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷರಾದ ಶಂಕರ್ ರಾವ್, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಪೂರ್ವಧ್ಯಕ್ಷರಾದ ಸಂತೋಷ್ ಪಿ ಕೋಟ್ಯಾನ್ ಬಳಂಜ, ವಿಜಯವಾಣಿ ಪತ್ರಿಕೆಯ ವರದಿಗಾರರಾದ ಮನೋಹರ್ ಬಳಂಜ, ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಸಂಚಾಲಕರಾದ ಹರೀಶ್ ವೈ ಚಂದ್ರಮ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಕಾರ್ಯದರ್ಶಿ ಸುಧೀರ್ ಕೆ.ಎನ್ ಪಾಲ್ಗೊಂಡಿದ್ದರು

ಘಟಕದ ಉಪಾಧ್ಯಕ್ಷರಾದ ರಂಜಿತ್ ಎಚ್ ಡಿ, ಮಹಿಳಾ ಸಂಯೋಜಕಿ ಮಮಿತ ಸುಧೀರ್ ಸದಸ್ಯ ಶೈಲೇಶ್, ಚಂದ್ರಹಾಸ ಬಳಂಜ ಉಪಸ್ಥಿತರಿದ್ದರು.

Related posts

ನಾವೂರುನಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಕೆ: ಸ್ಥಳಕ್ಕೆ ಅಧಿಕಾರಿಗಳ ಭೇಟಿ

Suddi Udaya

ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ : ಜಿ.ಎ.ಎಸ್. ಕಂಬದಲ್ಲಿ ಢಮರ್ ಶಬ್ದ

Suddi Udaya

ಫೆ.7 : ಅಳದಂಗಡಿ ಸುಂಕದಕಟ್ಟೆ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ವರ್ಧಂತಿ ಉತ್ಸವ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಭಿತ್ತಿ ಪತ್ರಿಕೆ ಅನಾವರಣ

Suddi Udaya

ಪಟ್ರಮೆ ನಿವಾಸಿ ಕೊರಗಪ್ಪ ನಾಯ್ಕ ಡೆಂಗ್ಯೂ ಜ್ವರದಿಂದ ನಿಧನ

Suddi Udaya

ಪುದುವೆಟ್ಟು: ಹಿರಿಯ ಪ್ರಗತಿಪರ ಕೃಷಿಕ ಮಾಂಜೀಲು ರಾಧಾಕೃಷ್ಣ ಹೆಬ್ಬಾರ್ ನಿಧನ

Suddi Udaya
error: Content is protected !!