25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕೆಂದು ಮೀಸಲಾಗಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ: ಸರಕಾರವನ್ನು ತರಾಟೆಗೆ ತೆಗೆದುಕೊಂಡ ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌

ಬೆಳ್ತಂಗಡಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಕಲ್ಯಾಣಕ್ಕೆಂದು ಮೀಸಲಾಗಿಟ್ಟ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಬಳಕೆ ಮಾಡುವುದರ ಮೂಲಕ ಕಾಂಗ್ರೇಸ್‌ ಪಕ್ಷ ರಾಜಕೀಯ ಹಿತಾಸಕ್ತಿಗಳಿಗೋಸ್ಕರ ಇನ್ನೊಬ್ಬರನ್ನು ಬಲಿತೆಗೆದುಕೊಳ್ಳಲು ಹಿಂದೆ ಮುಂದೆ ನೋಡುವುದಿಲ್ಲ ಎಂದು ಮತ್ತೊಮ್ಮೆ ಸಾಬೀತುಮಾಡಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರತಾಪಸಿಂಹ ನಾಯಕ್‌ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅವರು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿ, ಸಿದ್ಧರಾಮಯ್ಯ ನೇತೃತ್ವದ ಸರಕಾರ ಪ.ಜಾ.ಮತ್ತು ಪಂಗಡಗಳ ಏಳಿಗೆಂದೇ ಇಡಲಾಗಿದ್ದ ರೂ. 11,000 ಕೋಟಿ ರೂ.ಗಳನ್ನು ಅವರ ಉನ್ನತಿಗೆ ಬಳಸದೆ ರಾಜಕೀಯ ಹಿತಾಸಕ್ತಿಗಳಿಗಾಗಿ ಗ್ಯಾರಂಟಿ ಪೂರ್ತಿಗಾಗಿ ವಿನಿಯೋಗಿಸುತ್ತಿರುವುದು ದುರಂತ. 11000 ರೂ. ಕೋಟಿ ಹಣ ದಲಿತರಿಗೆಂದೇ ಇರುವ ಹಣ. ಇದರಲ್ಲಿ ಎಸ್‌.ಸಿ.ಯವರಿಗೆಂದು ಮೀಸಲಿಟ್ಟಿದ್ದ 7,570 ಕೋಟಿ ರೂ. ಮತ್ತು ಎಸ್‌.ಟಿ.ಯವರಿಗೆಂದು ತೆಗೆದಿರಿಸಿದ್ದ 3,430 ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗೆಳಿಗೆ ನೀಡಲಾಗಿದೆ. ಇದನ್ನು ಸಮಾಜ ಕಲ್ಯಾಣ ಸಚಿವ ಡಾ| ಎಚ್.ಸಿ. ಮಹದೇವಪ್ಪನವರೇ ಒಪ್ಪಿಕೊಂಡಿದ್ದಾರೆ. ಇದನ್ನು ಬೇರೆಯದಕ್ಕೆ ಬಳಸುವಂತಿಲ್ಲ. ಆದರೂ ಸರಕಾರ ಅದಕ್ಕೂ ಕತ್ತರಿ ಹಾಕುವುದರ ಮೂಲಕ ಅನ್ಯಾಯವೆಸಗುತ್ತಿದೆ. ಇದು ದಲಿತರ ಅಭಿವೃದ್ಧಿಯನ್ನು ಕಡೆಗೆಣಿಸಿದಂತೆ. ಇತ್ತ ಉಪಮುಖ್ಯಮಂತ್ರಿಗಳು, ಈ ವರ್ಷ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುವುದು ಕಷ್ಟ ಎಂದು ಸಾರ್ವಜನಿಕವಾಗಿಯೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಒಟ್ಟಾರೆ ಕಾಂಗ್ರೇಸ್‌ ಪಕ್ಷ ರಾಜಕೀಯ ಲಾಭಕ್ಕೊಸ್ಕರ ಇನ್ನೊಬ್ಬರ ಹಿತಾಸಕ್ತಿಗಳನ್ನು ಬಲಿಗೊಡುವುದಕ್ಕೆ ಹಿಂದೆ ಮುಂದೆ ನೋಡುವುದಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
ಇನ್ನೊಂದೆಡೆ ಹಾಲು, ವಿದ್ಯುತ್‌ ಇತ್ಯಾದಿಗಳ ಬೆಲೆ ಏರಿಕೆ ಮಾಡಿರುವ ಪರಿಣಾಮ ಹೋಟೇಲ್‌ಗಳಲ್ಲಿ ತಿಂಡಿ ತಿನಸುಗಳ ಬೆಲೆ ಅಧಿಕವಾಗಿದೆ. ಇದು ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದನ್ನು ನಿಯಂತ್ರಿಸಿದಿದ್ದಲ್ಲಿ ಜನರೇ ಬೀದಿಗಿಳಿಯುವ ದಿನಗಳು ದೂರವಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Related posts

ಡಿ.ಕೆ.ಆರ್. ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಕಾರ್ಯಕ್ರಮ ಹಾಗೂ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ತುಮಕೂರುನಲ್ಲಿ ಬೆಳ್ತಂಗಡಿಯ ಮೂವರನ್ನು ಹತ್ಯೆ ಪ್ರಕರಣ: ಗೃಹ ಸಚಿವರನ್ನು ಬೇಟಿ ಮಾಡಿದ ರಕ್ಷಿತ್ ಶಿವರಾಂ

Suddi Udaya

ಕಡಿರುದ್ಯಾವರ: ಪಣಿಕಲ್ಲು ಎಂಬಲ್ಲಿ ತೋಟಕ್ಕೆ ಕಾಡಾನೆ ದಾಳಿ: ಅಪಾರ ಕೃಷಿ ಹಾನಿ

Suddi Udaya

ರೆಖ್ಯ: ಬೋರ್‌ವೆಲ್ ವಿಷಯದಲ್ಲಿ ಮಾತುಕತೆ ,: ಹಲ್ಲೆ ಆರೋಪ ಪೊಲೀಸ್ ಠಾಣೆಗೆ ದೂರು

Suddi Udaya

ಬೆಳ್ತಂಗಡಿ: ಜೈ ಕರ್ನಾಟಕ ಗಾಯಕರ ಬಳಗದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ: ಗೌರವ ಅಧ್ಯಕ್ಷರಾಗಿ ಮನೋಹರ ಪ್ರಸಾದ್, ಜಿಲ್ಲಾ ಅಧ್ಯಕ್ಷರಾಗಿ ಇಸ್ಮಾಯಿಲ್ ಬಂಗಾಡಿ

Suddi Udaya

ಕು.ಸೌಜನ್ಯಳ ಮನೆಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರ ಭೇಟಿ

Suddi Udaya
error: Content is protected !!