ಬೆಳ್ತಂಗಡಿ: ರಿಕ್ಷಾ ಚಾಲಕರ ಹಾಗೂ ಸಾರಿಗೆ ನೌಕರರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಬಿಎಂಎಸ್ ನ ಸಂಯೋಜಿತ ವೆಹಿಕಲ್ ಯೂನಿಯನ್ ಗಳು ಸಾರಿಗೆ ಮಂತ್ರಿಗಳಾದ ರಾಮಲಿಂಗ ರೆಡ್ಡಿ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಆಗ್ರಹಿಸಲಾಗಿತ್ತು. ರಾಜ್ಯದಾದ್ಯಂತ ಚಾಲಕ ಸಂಘಟನೆಗಳು ಕೂಡ ಚಾಲಕರ ಸಮಸ್ಯೆಗಳನ್ನು ಸರ್ಕಾರ ಪರಿಹರಿಸುವಂತೆ ಅಗ್ರಹಿಸಿದ್ದವು.
ಈ ಪ್ರಯುಕ್ತ ಸಾರಿಗೆ ಆಯುಕ್ತರು ಬೆಂಗಳೂರು ಕಚೇರಿಯಲ್ಲಿ ಸಾರಿಗೆ ಒಕ್ಕೂಟದ ಸಂಘಟನೆಗಳ ಸಭೆಯನ್ನು ಕರೆದಿದ್ದು ಬೆಳ್ತಂಗಡಿ ತಾಲೂಕಿನ ರಿಕ್ಷಾ ಚಾಲಕ ಸಂಘದ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದರು.
ಸಭೆಯಲ್ಲಿ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿಯವರು ಹಾಗೂ ಸಾರಿಗೆ ಅಯುಕ್ತರು ಉಪಸ್ಥಿತರಿದ್ದರು. ರಿಕ್ಷಾ ಚಾಲಕರ ಸಮಸ್ಯೆಗಳನ್ನು ಬಗೆಹರಿಸುವಂತೆ ಬಿಎಂಎಸ್ ವೆಹಿಕಲ್ ಯೂನಿಯನ್ ಪ್ರಮುಖರು .ಮುಖ್ಯವಾಗಿ ರಿಕ್ಷಾ ಹಾಗೂ ಸಾರಿಗೆ ನೌಕರರ ಭವಿಷ್ಯದ ಭದ್ರತೆಗೆ ಕಲ್ಯಾಣ ಮಂಡಳಿಯನ್ನು ರಚಿಸುವಂತೆ ಹಾಗೂ ಉಚಿತ ಆಸ್ಪತ್ರೆ ಚಿಕಿತ್ಸಾ ವೆಚ್ಚ, ಚಾಲಕರ ಮಕ್ಕಳಿಗೆ ಸ್ಕಾಲರ್ ಶಿಪ್ ,ಗೃಹ ನಿರ್ಮಾಣಕ್ಕೆ ಸಹಾಯಧನವನ್ನು ನೀಡುವಂತೆ, ವ್ರದ್ದಾಪ್ಯ ಪಿಂಚಣಿಯನ್ನು ನೀಡುವಂತೆ ಸಭೆಯಲ್ಲಿ ಅಗ್ರಹಿಸಲಾಯಿತು.
ಬೆಳ್ತಂಗಡಿ ತಾಲೂಕು ರಿಕ್ಷಾ ಚಾಲಕ ಸಂಘದ ಅಧ್ಯಕ್ಷರಾದ ಕೃಷ್ಣಬೆಳಾಲು, ಪ್ರಧಾನ ಕಾರ್ಯದರ್ಶಿ ರಮೇಶ್ ಕೆ ಕುದ್ರಡ್ಕ, ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಗರ್ಡಾಡಿ ಅವರು ಸಭೆಯಲ್ಲಿ ಭಾಗವಹಿಸಿದ್ದರು.