ಬೆಳ್ತಂಗಡಿ :ಮಾಜಿ ಶಾಸಕ ಕೆ.ವಸಂತ ಬಂಗೇರ ವಿರುದ್ದ ವಸಂತ ಗಿಳಿಯಾರ್ ಎಂಬ ಪೇಸ್ ಬುಕ್ ಖಾತೆಯಲ್ಲಿ ಯಾವುದೇ ಆಧಾರಗಳಿಲ್ಲದೆ ಅವಹೇಳನಕಾರಿಯಾಗಿ ಲೈವ್ ಪೋಸ್ಟ್ ಮಾಡಿದ್ದನ್ನು ವಸಂತ ಬಂಗೇರ ಅಭಿಮಾನಿಗಳು ಖಂಡಿಸಿದ್ದು,ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಕೋಮು ಸೌಹಾರ್ದತೆಗೆ ಭಂಗವನ್ನು ತರಲು ಸಾಮಾಜಿಕ ಜಾಲತಾಣವನ್ನು ದುರುಪಯೋಗ ಪಡಿಸಿಕೊಳ್ಳುವವರ ವಿರುದ್ದ ಕಾನೂಕು ಕ್ರಮ ಕೈಗೊಳ್ಳುವಂತೆ ವಸಂತ ಬಂಗೇರ ಅಭಿಮಾನಿಗಳು ಒತ್ತಾಯಿಸಿದರು.
ಅವರು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಸಭಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಹಂದಿಯನ್ನು ಹೊಡಿಯೋಣ ಎಂಬ ಹೇಳಿಕೆಯನ್ನು ಬಂಗೇರರವರು ನೀಡಿಲ್ಲ.ಒಡನಾಡಿ ಸ್ಟ್ಯಾಲಿಗೆ ಮತ್ತು ತಿಮರೋಡಿಯವರಿಗೂ ಕಾಲ್ ಮಾಡಿಲ್ಲ. ಶ್ರೀ ಕೇತ್ರದ ಬಗ್ಗೆ ವಸಂತ ಬಂಗೇರರವರಿಗೆ ಅಪಾರ ಭಕ್ತಿಯಿದ್ದು ಪುಣ್ಯಕ್ಷೇತ್ರದ ವಿರುದ್ದ ಅವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಸಂತ ಬಂಗೇರ ಅಭಿಮಾನಿಗಳು ತಿಳಿಸಿದರು.
ಪತ್ರಿಗೋಷ್ಟಿಯಲ್ಲಿ ಮನೋಹರ್ ಕುಮಾರ್ ಇಳಂತಿಲ,ಚಿದಾನಂದ ಪೂಜಾರಿ ಎಲ್ದಕ್ಕ, ಮಾಹಿಲ್ತೋಡಿ ಈಶ್ವರ ಭಟ್,ಧರಣೇಂದ್ರ ಕುಮಾರ್ ಹೊಸಂಗಡಿ, ಶೇಖರ್ ಕುಕ್ಕೇಡಿ, ಸಂತೋಷ್ ಕುಮಾರ್ ಲಾಯಿಲ, ಲೋಕೇಶ್ ಗೌಡ,ನಿತೇಶ್ ಕೋಟ್ಯಾನ್ ವೇಣೂರು, ಜಯವಿಕ್ರಮ್ ಕಲ್ಲಾಪು,ಬೊಮ್ಮಣ ಗೌಡ,ಆಯೂಬ್ ಡಿ.ಕೆ, ಪ್ರಭಾಕರ ಹೆಗ್ಡೆ ಹಟ್ಟಾಜೆ,ರಾಜಶೇಖರ ಶೆಟ್ಟಿ,ವಸಂತಿ ಸಿ ಪೂಜಾರಿ,ಪ್ರವೀಣ್ ಗೌಡ ಕೊಯ್ಯುರು ಉಪಸ್ಥಿತರಿದ್ದರು.