28 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವೇಣೂರು: ಶ್ರೀ ಧ. ಮಂ. ಕೈಗಾರಿಕಾ ತರಬೇತಿ ಸಂಸ್ಥೆಯ ಶಿಕ್ಷಕ ಸನತ್ ಕುಮಾರ್ ಬೀಳ್ಕೊಡುಗೆ ಸಮಾರಂಭ

ವೇಣೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ ವೇಣೂರು ಇಲ್ಲಿ ಸುದೀರ್ಘ 37 ವರ್ಷಗಳ ಕಾಲ ಸಾರ್ಥಕ ಸೇವೆಯನ್ನು ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಸನತ್ ಕುಮಾರ್ ಕೆ ಇವರ ಬೀಳ್ಕೊಡುಗೆ ಸಮಾರಂಭ ಐಟಿಐಯಲ್ಲಿ ಜು.31 ರಂದು ಜರುಗಿತು.


ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ವಿಶ್ವೇಶ್ವರ ಪ್ರಸಾದ್ ಕೆ ಆರ್ ವಹಿಸಿ ನಿವೃತ್ತಿ ಹೊಂದುತ್ತಿರುವ ಸನತ್ ಕುಮಾರ್ ರವರ ಕಾರ್ಯ ವೈಖರಿಯನ್ನು ಕೊಂಡಾಡಿದರು. ಮುಖ್ಯ ಅತಿಥಿಗಳಾಗಿ ಸಂಸ್ಥೆಯ ನಿವೃತ್ತ ಪ್ರಾಚಾರ್ಯರಾದ ಸದಾನಂದ ಪೂಜಾರಿ ಯವರು ಮಾತನಾಡಿ ಸನತ್ ಕುಮಾರ್ ರವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಶುಭ ಹಾರೈಸಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜಿನರಾಜ್ ಜೈನ್ ಶುಭ ಹಾರೈಸುತ್ತಾ ಹಳೆ ವಿದ್ಯಾರ್ಥಿ ಸಂಘಕ್ಕೆ ಶ್ರೀಯುತರ ಕೊಡುಗೆಯನ್ನು ಸ್ಮರಿಸಿ ಅವರ ಗುಣಗಾನಗೈದರು.
ವೇದಿಕೆಯಲ್ಲಿ ತರಬೇತಿ ಅಧಿಕಾರಿಗಳಾದ ಪೀಟರ್ ಸಿಕ್ವೆರಾ ಹಾಗೂ ಕಚೇರಿ ಅಧೀಕ್ಷಕರಾದ ಉಮೇಶ್ ಕೆ ಉಪಸ್ಥಿತರಿದ್ದರು.


ಸಂಸ್ಥೆಯ ವತಿಯಿಂದ ಸನತ್ ಕುಮಾರ್ ದಂಪತಿಗಳಿಗೆ ಶಾಲು, ಫಲ ಪುಷ್ಪ ದೊಂದಿಗೆ ಬಂಗಾರದ ಉಂಗುರ ಹಾಗೂ ಸನ್ಮಾನ ಪತ್ರವನ್ನು ನೀಡಿ ಅಭಿನಂದಿಸಲಾಯಿತು, ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ಸಂಸ್ಥೆಯ ಹಿತೈಷಿ ಹಾಗೂ ಭಾರತೀಯ ಜೀವ ವಿಮಾನ ನಿಗಮದ ಚೇಯರ್ ಮೆನ್ ಕ್ಲಬ್ ಮೆಂಬರ್ ಶ್ರೀ ಜಗನ್ನಾಥ ದೇವಾಡಿಗ ರವರು ಸನತ್ ಕುಮಾರ್ ರವರ ಪೆನ್ಸಿಲ್ ಆರ್ಟ್ ಭಾವಚಿತ್ರವನ್ನು ನೀಡಿ ಅಭಿನಂದಿಸಿದರು.
ಸಿಬ್ಬಂದಿಗಳ ಪರವಾಗಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿಗಳಾದ ರತ್ನಾಕರ ರಾವ್ ರವರು ಅಭಿನಂದನಾ ಭಾಷಣಗೈದು ಸಂಸ್ಥೆ ಪ್ರಾರಂಭ ಆದಾಗಿನಿಂದ ಈವರೆಗೆ ನಿಷ್ಠಾವಂತರಾಗಿ ಸೇವೆ ಸಲ್ಲಿಸಿ ಸಂಸ್ಥೆಯ ಹಿರಿಮೆಯನ್ನು ಸನತ್ ಕುಮಾರ್ ರವರು ಹೆಚ್ಚಿಸಿದ್ದಾರೆ ಎಂದರು . ಕಚೇರಿ ಸಿಬ್ಬಂದಿಗಳ ಪರವಾಗಿ ಫಣಿರಾಜ್ ಜೈನ್ ರವರು ಮಾತನಾಡಿ ಕಚೇರಿಯಲ್ಲಿ ತಮ್ಮ ಜೊತೆಗಿನ ಒಡನಾಟವನ್ನು ಸ್ಮರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ನಿವೃತ್ತ ತರಬೇತಿ ಅಧಿಕಾರಿ ಶಿವರಾವ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮಾಣಿಕ್ಯ ರಾಜ್ ಜೈನ್ ಉಪಸ್ಥಿತರಿದ್ದರು.


ಕಿರಿಯ ತರಬೇತಿ ಅಧಿಕಾರಿ ನಾಗೇಶ್ ಉಡುಪ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರೀಧರ ಡಿ ಸ್ವಾಗತಿಸಿದರು. ಪದ್ಮಪ್ರಸಾದ್ ಬಸ್ತಿ ಕಾರ್ಯಕ್ರಮ ನಿರೂಪಿಸಿ, ರಾಮ ಚಂದ್ರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.

Related posts

ಕಾಜೂರು ದರ್ಗಾಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

Suddi Udaya

ಉಜಿರೆಯಲ್ಲಿ ಕೇರಳ ಸಂಪ್ರದಾಯ ವಿಷು ಕಣಿ ಉತ್ಸವ, ಸಾವಿರಾರು ಮಂದಿ ಭಾಗಿ

Suddi Udaya

ಉಜಿರೆ: ಶ್ರೀ ಧ. ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ಬಳಂಜ: ಬೋಂಟ್ರೊಟ್ಟುಗುತ್ತು ದೈವಸ್ಥಾನ ಕ್ಷೇತ್ರದಲ್ಲಿ ಚಾವಡಿಯಲ್ಲಿ ದೈವಗಳ ಪ್ರತಿಷ್ಠೆ ,ಕಲಶಾಭಿಷೇಕ: ಸಂಜೆ ಬಳಂಜದಿಂದ ಬೊಂಟ್ರೋಟ್ಟು ಕ್ಷೇತ್ರಕ್ಕೆ ಹಸಿರುವಾಣಿ ಮೆರವಣಿಗೆ

Suddi Udaya

ಅಳದಂಗಡಿ: ಶ್ರೀ ಬ್ರಹ್ಮ ಮೊಗೇರ್ಕಳ ಗರಡಿ ನೇಮೊತ್ಸವ ಸಮಿತಿ ರಚನೆ

Suddi Udaya

ಗೇರುಕಟ್ಟೆ ಹಾ.ಉ.ಸ. ಸಂಘ ಹಾಗೂ ಬಿ.ಎಮ್.ಸಿ.ಗೆ ಕರ್ನಾಟಕ ಹಾ.ಮ. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ಭೇಟಿ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ