ಬೆಳ್ತಂಗಡಿ: ಅಧಿಕಾರಿಗಳಿಂದ ಬಡ ಕುಟುಂಬದವರಾದ ನಮಗೆ ಮಾನಸಿಕ ಹಿಂಸೆ ನೀಡಲಾಗುತ್ತಿದೆ ಎಂದು ಆ.4 ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಗಿರಿಯಪ್ಪ ಗೌಡ ನಾಗನಡ್ಕ ಹೇಳಿದರು.
ನಾವು ಶಿಶಿಲ ಗ್ರಾಮದ ನಾಗನಡ್ಕ ಎಂಬಲ್ಲಿ ಸಣ್ಣ ಮನೆ ಕಟ್ಟಿ ವಾಸಿಸುತ್ತಿದ್ದು, ನಮಗೆ ಯಾವುದೇ ಕೃಷಿ ಭೂಮಿಯಾಗಲಿ ಯಾವುದೇ ಆಸ್ತಿಯಾಗಲಿ ಇರುವುದಿಲ್ಲ, ನಮಗೆ ಒಂದು ಮನೆ ಬಿಟ್ಟರೆ ಬೇರೆ ಏನು ಇಲ್ಲ, ನಮಗಿಬ್ಬರಿಗೂ ಕೂಲಿ ಕೆಲಸ ಮಾಡಲು ಆರೋಗ್ಯ ಸಮಸ್ಯೆ ಇರುವ ಕಾರಣ ಮನೆಯ ಪಕ್ಕದಲ್ಲಿ ಜಾಗದಲ್ಲಿ ಕೋಳಿ ಅಂಗಡಿ ನಡೆಸುತ್ತಿದ್ದು, ಇದನ್ನು ಸಹಿಸಲಾಗದ ಕಾಂಗ್ರೆಸ್ ಕಾಯ೯ಕತ೯ ದ್ವೇಷದಿಂದ ನಮ್ಮ ಕೋಳಿ ಮಾಂಸದ ಅಂಗಡಿಯಿಂದ ಯಾವುದೇ ಸಮಸ್ಯೆಯಿಲ್ಲದಿದ್ದರೂ ಅಧಿಕಾರಿಗಳಿಗೆ ದೂರು ನೀಡಿ, ಅಧಿಕಾರಿಗಳು ನಮ್ಮ ಮನೆಗೆ ಪದೇ ಪದೇ ಬಂದು ನಮ್ಮ ಅಂಗಡಿಯನ್ನು ಬಂದ್ ಮಾಡಿ ಇಲ್ಲದಿದ್ದರೆ ನಿಮ್ಮ ಮೇಲೆ ಕೇಸು ಹಾಕುತ್ತೇವೆ ಎಂದು ನೋಟಿಸ್ ನೀಡುತ್ತಿದ್ದು, ಇದನ್ನು ಸಹಿಸಲಾಗದೆ ನಾವು ನಮ್ಮ ಅಂಗಡಿಯನ್ನು ಬಂದ್ ಮಾಡಿದೆವು. ಮುಂದೆ ನಮ್ಮ ಮನೆಯ ಪಕ್ಕದಲ್ಲಿ ಜೋಸ್ ಅಬ್ರಹಾಂ ಎಂಬುವವರು ತಮ್ಮ ಪಟ್ಟಾ ಜಮೀನಿನಲ್ಲಿ ಹೊಸ ಕೋಳಿ ಅಂಗಡಿ ಮಾಡಿಕೊಟ್ಟು ನನ್ನನ್ನು ಕೆಲಸಕ್ಕೆ ನಿಲ್ಲಿಸಿದರು ಇದನ್ನೂ ಸಹಿಸಲಾಗದ ಕಾಂಗ್ರೆಸ್ ಕಾರ್ಯಕರ್ತ ಅಂಗಡಿ ಕೂಡ ರಸ್ತೆ ಮಾರ್ಜಿನಲ್ಲಿದೆ. ಇದನ್ನು ತೆರವುಗೊಳಿಸಬೇಕೆಂದು ಒತ್ತಡ ತರುತ್ತಿದ್ದಾರೆ.
ಸಂಬಂಧ ಪಟ್ಟ ಇಲಾಖೆಯವರು ಭೇಟಿ ನೀಡಿ ಸ್ಥಳ ಪರಿಶೀಲಿಸಿ ಎಲ್ಲ ಕಟ್ಟಡ ದಾಖಲಾತಿ ಸರಿಯಾಗಿದೆ ಎಂದು ತಿಳಿಸಿದ್ದಾರೆ. ಆದರೂ ಅಧಿಕಾರಿಗಳ ಮೂಲಕ ನಮಗೆ ಮಾನಸಿಕ ಒತ್ತಡ ನೀಡಲಾಗುತ್ತಿದೆ . ಎರಡು ದಿನದ ಹಿಂದೆ ಪೋಲಿಸ್ ಠಾಣೆಯಲ್ಲಿ ನಾನು ಕೋಳಿ ಅಂಗಡಿಯ ತ್ಯಾಜ್ಯವನ್ನು ಸರಿಯಾಗಿ ನಿರ್ವಾಹಿಸುತ್ತಿಲ್ಲ. ದೂರು ನೀಡಲಾಗಿದ್ದು , ನನಗೆ ಪೊಲೀಸ್ ನವರ ಮೂಲಕ ಒತ್ತಡ ತರಿಸುವ ಕೆಲಸ ಮಾಡಿದ್ದಾರೆ,
ಆದರೆ ಈ ರೀತಿ ಕಿರುಕುಳ ನೀಡಿ ನಮ್ಮ ಜೀವನ ನಡೆಸದಂತೆ ಮಾಡುತ್ತಿರುವುದ ತುಂಬಾ ಬೇಸರವಾಗಿ ಎಂದರು.
ಪ್ರತಿಕಾಗೋಷ್ಠಿಯಲ್ಲಿ ಕರುಣಾಕರ ಶಿಶಿಲ, ಲಲಿತಾ, ಆನಂದ ಪೂಜಾರಿ, ಜಗದೀಶ ಪೂಜಾರಿ ಉಪಸ್ಥಿತರಿದ್ದರು.