27.5 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕೊಲ್ಲಿ ಶ್ರೀ ದುರ್ಗಾದೇವಿ ದೇವಸ್ಥಾನದ ಜೀರ್ಣೋದ್ಧಾರ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.10 ಲಕ್ಷ ದೇಣಿಗೆ

ಮಿತ್ತಬಾಗಿಲು : ಇತಿಹಾಸ ಪ್ರಸಿದ್ಧ ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವು ಭಕ್ತರ ಹಾಗೂ ಊರ ಹಾಗೂ ಪರವೂರ ದಾನಿಗಳ ಸಹಕಾರದಲ್ಲಿ ನಡೆಯುತ್ತಿದ್ದು, ದೇವಸ್ಥಾನದ ಈ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ರೂ. 10 ಲಕ್ಷ ದೇಣಿಗೆಯನ್ನು ನೀಡಿ ಆಶೀರ್ವದಿಸಿದರು.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಮಹಾವೀರ ಅಜ್ರಿ ಅವರು ರೂ.೧೦ ಲಕ್ಷದ ಚೆಕ್‌ನ್ನು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ವಾಸುದೇವ ರಾವ್ ಕಕ್ಕೇನೇಜಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಯೋಜನಾಧಿಕಾರಿ ಸುರೇಂದ್ರ ಕುಮಾರ್ ಸೇವಾ ಪ್ರತಿನಿಧಿ ಲತಾ ಹಾಗೂ ಇತರರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾದ ವಿನಯಚಂದ್ರ, ಕೇಶವ ಎಂ.ಕೆ, ಶ್ರೀಮತಿ ವನಿತಾ, ಶ್ರೀಮತಿ ಜ್ಯೋತಿ ಲಕ್ಷ್ಮೀ, ವಿನಯಚಂದ್ರ, ದಾಸಪ್ಪ ಗೌಡ, ದಿನೇಶ್ ಗೌಡ, ಚಂದ್ರಶೇಖರ್, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷ ಬಿ.ಕೆ.ರಾಜಶೇಖರ ರಾವ್, ಸಲಹೆಗಾರ ಬಿ.ಕೆ. ಧನಂಜಯ ರಾವ್, ಅಶೋಕ್ ಕಡಿರುದ್ಯಾವರ, ಶೀನಪ್ಪ ಗೌಡ ದಿಡುಪೆ, ಗೋಪಾಲ ಕೊಲ್ಲಿ, ಸುಧಾಕರ ಕೊಲ್ಲಿ, ಸಿದ್ಧಪ್ಪ ಪೂಜಾರಿ, ರಾಮಣ್ಣ ಕುಂಬಾರ, ಕೃಷ್ಣ ಗೌಡ, ಶೇಖರ ಪೂಜಾರಿ, ಡಿ. ವಿಜಯ ಪೂಜಾರಿ, ಶ್ರೀಧರ ಪೂಜಾರಿ, ದೇವಸ್ಥಾನದ ಸಿಬ್ಬಂದಿ ಬಾಲಕೃಷ್ಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Related posts

ಜ.6: ಮಿತ್ತಬಾಗಿಲು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಬಳಂಜ: ಪುಣ್ಕೆದೊಟ್ಟು ನಿವಾಸಿ ಚಂದ್ರು ನಿಧನ

Suddi Udaya

ರೆಂಕೆದಗುತ್ತು ನಿವಾಸಿ ಜನಾರ್ಧನ ನಿಧನ

Suddi Udaya

ಚಾರ್ಮಾಡಿ ಗ್ರಾ.ಪಂ. ಗೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ರಘು ಎಇ ಭೇಟಿ

Suddi Udaya

ಕಾಂಗ್ರೆಸ್ ಸರಕಾರ ರಚನೆ ಹಿನ್ನೆಲೆ: ಕೊಕ್ಕಡದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮೋತ್ಸವ

Suddi Udaya

ಪ್ರಕೃತಿಯ ವಿಸ್ಮಯ: ನಾಳದಲ್ಲಿ ಮಾನವನಂತೆ ಹೋಲುವ ಸೋನೆ(ಣೆ) ಗೆಣಸು

Suddi Udaya
error: Content is protected !!