ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಮಜ್ದೂರ್ ಸಂಘದಿಂದ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಿರಿಯ ಅಧಿಕಾರಿಯವರಿಗೆ ಮನವಿ

Suddi Udaya

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಭಾರತೀಯ ಮಜ್ದೂರ್ ಸಂಘದ ಕಟ್ಟಡ ಕಾರ್ಮಿಕ ವಿಭಾಗದ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ವಿಸ್ಕೃತ ಚರ್ಚೆ ನಡೆಸಿ ಮನವಿಯನ್ನು ನೀಡಲಾಯಿತು.

ಪ್ರಾಮುಖ್ಯವಾದ ಬೇಡಿಕೆಗಳಾದ: 1. 2021- 22ನೇ ಸಾಲಿನ ಸ್ಕಾಲರ್ ಶಿಪ್ ಅರ್ಜಿ ಮಾಡಿ ತಾಂತ್ರಿಕ ಕಾರಣಗಳಿಂದ ವಿದ್ಯಾರ್ಥಿವೇತನ ಬರದ ಕಾರ್ಮಿಕರ ಮಕ್ಕಳಿಗೆ ಶೀಘ್ರವಾಗಿ ಹಣವನ್ನು ಪಾವತಿ ಮಾಡಬೇಕು.2. 2022-23 ಸಾಲಿನ ಸ್ಕಾಲರ್ ಶಿಪ್ ಅರ್ಜಿ ಹಾಕಿದ ಕಾರ್ಮಿಕರ ಮಕ್ಕಳಿಗೆ ಶೀಘ್ರ ಹಣ ಪಾವತಿ ಮಾಡುವಂತೆ 3 .ವೃದ್ಧಾಪ್ಯ ಪಿಂಚಣಿಯ ಅರ್ಜಿಯ ಕಾಲ ಮಿತಿ ಕೈಬಿಡುವಂತೆ ಹಾಗೂ ಪ್ರತಿ ವರ್ಷ ಜೀವಿತ ಪ್ರಮಾಣ ಪತ್ರ ಪಡೆಯುವ ಬದಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿಗೊಳಿಸುವಂತೆ 4. ಕಾರ್ಮಿಕರಿಗೆ ಗೃಹ ಸಹಾಯಧನವನ್ನು ನೀಡುವಂತೆ ಹಾಗೂ ಅದರ ನಿಯಮವನ್ನು ಸರಳೀಕರಣ ಗೊಳಿಸುವಂತೆ, 5.ಕಾರ್ಮಿಕರ ಸಹಜ ಮರಣಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ 6.ಕಾರ್ಮಿಕನಿಗೆ ಕೆಲಸದ ಅಥವಾ ಇತರ ಸಂದರ್ಭದಲ್ಲಿ ಅಪಘಾತ ವಿಶ್ರಾಂತಿಯ ಅವಶ್ಯಕತೆ ಇದ್ದಾಗ ವಿಶ್ರಾಂತಿ ಭತ್ಯೆ ಅಥವಾ ಪರಿಹಾರವನ್ನು ನೀಡುವಂತೆ 7.ನೊಂದಾಯಿತರಲ್ಲದ ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಮಿಕರು ಅಪಘಾತ ಮರಣ ಹೊಂದಿದಲ್ಲಿ ಅವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ಪರಿಹಾರವನ್ನು ನೀಡುವಂತೆ., 8. ಕಾರ್ಮಿಕರ ಮತ್ತು ಅವಲಂಬಿತರ ಆಸ್ಪತ್ರೆ ಚಿಕಿತ್ಸೆ ಮರುಪಾವತಿಗೆ ಅರ್ಜಿ ಹಾಕಿದಾಗ ಅಲ್ಪ ಮೊತ್ತ ದೊರಕುತ್ತಿದೆ. ಚಿಕಿತ್ಸೆಗೆ ವ್ಯಯಿಸಿದ ಪೂರ್ಣ ಮೊತ್ತ ಸಿಗಬೇಕು ಅಥವಾ ಅಸ್ಪತ್ರೆಗಳಲ್ಲಿ‌ ನಗದು ರಹಿತ ಅರೋಗ್ಯ ಸೇವೆ ಲಭಿಸಬೇಕು ಹಾಗೂ ಒಟ್ಟು ಇತರ ಕಾರ್ಮಿಕರ 16 ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿ
ಮನವಿ ಸಲ್ಲಿಸಲಾಯಿತು.

Leave a Comment

error: Content is protected !!