April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಪುಂಜಾಲಕಟ್ಟೆ: ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಲಯನ್ಸ್ ಕ್ಲಬ್ ನ ಸುವರ್ಣ ಸೇವಾ ಸಂಭ್ರಮ

ನಮ್ಮೆಲ್ಲರ ಬದುಕು ಪಾವನವಾಗಬೇಕಾದರೆ ಪ್ರತಿಯೊಬ್ಬರೂ ಕೂಡ ತಮ್ಮ ತಮ್ಮ ಬದುಕಿನಲ್ಲಿ ಒಂದಂಶವಾದರೂ ಸೇವೆಯನ್ನು ಮಾಡಬೇಕು. ಆಗ ಮಾತ್ರ ಮನುಷ್ಯರಾಗಿ ನಾವು ಹುಟ್ಟಿರುವುದಕ್ಕೆ ಸಾರ್ಥಕವಾಗುತ್ತದೆ. ಸೇವೆ ಮಾಡಲು ನಮಗೆ ನೂರಾರು ದಾರಿಗಳಿವೆ. ಅದನ್ನು ಅರಿತು ನಡೆಯಬೇಕಾಗಿದೆ. ವಿದ್ಯಾರ್ಥಿಗಳಾದ ತಾವು

ಕಲಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಜೊತೆಗೆ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ಅಂತಹ ಕಾರ್ಯಕ್ಕೆ ತಮ್ಮ ಶಾಲೆಯು ಸದಾವಕಾಶವನ್ನು ನೀಡುತ್ತಿದೆ. ಇದರ ಜೊತೆ ಜೊತೆಗೆ ತಮ್ಮ ಹೆತ್ತವರ

ಋಣವನ್ನು ತೀರಿಸುವ ಕಾರ್ಯವನ್ನು ಕೂಡ ತಾವು ಮಾಡಲೇಬೇಕು. ಇಂದು ಖಂಡಿತವಾಗಿಯೂ ತಮ್ಮನ್ನೆಲ್ಲ ಕಂಡಾಗ ನನಗೆ ಮನತುಂಬಿ ಬಂದಿದೆ. ತಮ್ಮ ವರ್ತನೆಗಳು, ಪ್ರೀತಿ ನೀತಿಗಳು, ಸರ್ವರಿಗೂ ಮಾದರಿಯಂತೆ ತಾವು ನಡೆದುಕೊಳ್ಳುವುದನ್ನು ಕಂಡಾಗ ತುಂಬಾ ಸಂತೋಷವಾಗುತ್ತಿದೆ. ಇದೇ ರೀತಿ ತಮ್ಮ ಬದುಕನ್ನು ಹಸನಾಗಿಸುವ ಕಾರ್ಯವನ್ನು ಸದಾ ಮಾಡುತ್ತಿರಿ. ತಮ್ಮಂತಹ ಸಂಸ್ಥೆಯ ಜೊತೆಗೆ ನಮ್ಮ ಬೆಳ್ತಂಗಡಿ ಲಯನ್ಸ್ ಕ್ಲಬ್ ಸದಾ ಇರುತ್ತದೆ”- ಎಂದು ಲಯನ್ ಉಮೇಶ್ ಶೆಟ್ಟಿ ಹೇಳಿದರು.

ಅವರು ಕರ್ನಾಟಕ ಪಬ್ಲಿಕ್ ಸ್ಕೂಲ್, ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದಲ್ಲಿ ಸ್ವಾತಂತ್ರ್ಯ ಸಂಭ್ರಮಾಚರಣೆಯ ಅಮೃತ ಮಹೋತ್ಸವದ ಶುಭ ಸಂದರ್ಭದ ಪೂರ್ವಭಾವಿಯಾಗಿ ಬೆಳ್ತಂಗಡಿ ಲಯನ್ಸ್ ಕ್ಲಬ್ ನ ಈ ವರ್ಷದ ಸುವರ್ಣ ಸೇವಾ ಸಂಭ್ರಮದ ನೆನಪಿಗೋಸ್ಕರ ಹಮ್ಮಿಕೊಂಡಿರುವ ವಿಶೇಷ ಕಾರ್ಯಕ್ರಮವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ ಆಗಸ್ಟ್ 5ರಂದು ಮಾತನಾಡಿದರು. ಈ ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆಯ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಬಿ ಉದಯಕುಮಾರ್ ವಹಿಸಿಕೊಂಡು ಸಭೆಯನ್ನು ಮುನ್ನಡೆಸಿ ಸಂದರ್ಭೋಚಿತವಾಗಿ ಅಧ್ಯಕ್ಷೀಯ ಮಾತುಗಳೊಂದಿಗೆ ವಿದ್ಯಾರ್ಥಿಗಳಿಗೆ ಹಿತವಚನಗಳನ್ನು ಹೇಳಿದರು.ವೇದಿಕೆಯಲ್ಲಿ ಸಂಸ್ಥೆಯ ಎಲ್ಲಾ ಶಿಕ್ಷಕ ಬಂಧುಗಳು ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ವಿಜ್ಞಾನ ಶಿಕ್ಷಕರಾದ ನಿರಂಜನ್ ಜೈನ್ ಐ ನಿರೂಪಿಸಿ, ಇಂಗ್ಲಿಷ್ ಶಿಕ್ಷಕರಾದ ಹರಿಪ್ರಸಾದ್ ಸ್ವಾಗತಿಸಿ, ಕನ್ನಡ ಶಿಕ್ಷಕಿಯಾದ ಶಾಂತ ಎಸ್ ಧನ್ಯವಾದ ಸಲ್ಲಿಸಿದರೆ ಕಾರ್ಯಕ್ರಮದ ಸಂಯೋಜನೆಯನ್ನು ಸಮಾಜ ವಿಜ್ಞಾನ ಶಿಕ್ಷಕರಾದ ಧರಣೇಂದ್ರ ಕೆ ರವರು ಸರ್ವರ ಸಹಕಾರದೊಂದಿಗೆ ಸಂಘಟಿಸಿದ್ದರು.ವಿದ್ಯಾರ್ಥಿಗಳಿಗಾಗಿ ಸಮೂಹ ದೇಶಭಕ್ತಿ ಗೀತೆ, ರಾಷ್ಟ್ರ ನಾಯಕರ ಚಿತ್ರ ಬಿಡಿಸುವ ಸ್ಪರ್ಧೆ, ನನ್ನ ಜೀವನದಲ್ಲಿ ನವ ಭಾರತ ಹೇಗಿರಬೇಕೆಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು.

Related posts

ಜಿಲ್ಲಾ ಮಟ್ಟದ ಇನ್ಸ್ ಪೈಯರ್ ಸ್ಪರ್ಧೆಗೆ ಉರುವಾಲು ಶ್ರೀ ಭಾರತೀ ವಿದ್ಯಾರ್ಥಿಗಳು ಆಯ್ಕೆ

Suddi Udaya

ಉಜಿರೆ: ಕಾರು ಡಿಕ್ಕಿ; ಸೈಕಲ್ ಸವಾರನಿಗೆ ಗಂಭೀರವಾಗಿ ಗಾಯ

Suddi Udaya

ಭಗವಾನ್ ಶ್ರೀ ಮಹಾವೀರ ಸ್ವಾಮಿಯ ಜನ್ಮಕಲ್ಯಾಣೋತ್ಸವ ಕಾರ್ಯಕ್ರಮ

Suddi Udaya

ಸಮಾಜಸೇವಕ ಚಾಂಡಿ ರವರಿಗೆ ವಿನ್ಸೆಂಟ್ ಡಿ’ಪೌಲ್ ದಿನದಲ್ಲಿ ಸನ್ಮಾನ

Suddi Udaya

ಉರುವಾಲು: ಹಲೇಜಿ ನಿವಾಸಿ ಲಲಿತಾ ನಿಧನ

Suddi Udaya

ವೇಣೂರು: ಫೆ.22 ರಿಂದ ಮಾರ್ಚ್ 1ರ ವರೆಗೆ ವೇಣೂರು ಬಾಹುಬಲಿಗೆ ಮಹಾಮಸ್ತಕಾಭಿಷೇಕ: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಮಹಾಮಸ್ತಕಾಭಿಷೇಕದ ದಿನ ಘೋಷಣೆ

Suddi Udaya
error: Content is protected !!