24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿ

ಆ.15: ನಾಲ್ಕೂರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ಹಾಗೂ ವಿವಿಧ ಆಟೋಟ ಸ್ಪರ್ಧೆಗಳು

ನಾಲ್ಕೂರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ವತಿಯಿಂದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವು ಹಾಗೂ ವಿವಿಧ ಆಟೋಟ ಸ್ಪರ್ಧೆಗಳು ಆ.15ರಂದು ನಾಲ್ಕೂರು ಶ್ರೀ ಪಂಚಲಿಂಗೇಶ್ವರ ಭಜನಾ ಮಂಡಳಿ ವಠಾರದಲ್ಲಿ ಜರಗಲಿರುವುದು.


ನಾಲ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ ನಾಲ್ಕೂರು ಬಳಂಜ ಗ್ರಾಮಗಳ ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆಗಳ ನಡೆಯಲಿರುವುದು. ಪುರುಷರಿಗೆ: ಹಗ್ಗಜಗ್ಗಾಟ, ಗುಂಡೆಸೆತ, ಮಡಕೆ ಒಡೆಯುವುದು, ನಿಧಿ ಅನ್ವೇಷಣೆ, ತೆಂಗಿನಕಾಯಿಗೆ ಕಲ್ಲು ಎಸೆಯುವುದು, ವಾಲಿಬಾಲ್, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಕೆ ಒಡೆಯುವುದು, ಗುಂಡೆಸೆತ, ಹಗ್ಗಜಗ್ಗಾಟ, ತ್ರೋಬಾಲ್ ಹಾಗೂ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳ ನಡೆಯಲಿರುವುದು.


ಅಪರಾಹ್ನ ಸಮಾರೋಪ ಸಮಾರಂಭ ಜರುಗಲಿದ್ದು, ಮುಖ್ಯ ಅತಿಥಿಗಳಾಗಿ ಬಳಂಜ ಗ್ರಾ.ಪಂ. ಅಧ್ಯಕ್ಷ ಹೇಮಂತ್ ಕುಮಾರ್, ಪಡಂಗಡಿ ಗ್ರಾ.ಪಂ. ಸದಸ್ಯ ಸಂತೋಷ್ ಕುಮಾರ್ ಜೈನ್, ವಿದ್ವಾನ್ ಶಶಾಂಕ್ ಭಟ್ ನಾಲ್ಕೂರು ಕೋಡಿಮನೆ, ನಾಲ್ಕೂರು ಗುರುನಾರಾಯಣ ಸಂಘದ ಅಧ್ಯಕ್ಷ ಹೆಚ್.ಎಸ್. ಪ್ರವೀಣ್, ಬಳಂಜ ಗಣೇಶೋತ್ಸವ ಸಮಿತಿ ಅಧ್ಯಕ್ಷ ರಾಕೇಶ್ ಹೆಗ್ಡೆ ಭಾಗವಹಿಸಲಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿರುವುದು.

Related posts

ಸೆ.1-3: ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ 352ನೇ ಆರಾಧನಾ ಮಹೋತ್ಸವ

Suddi Udaya

ಕೊಯ್ಯೂರು ಸರಕಾರಿ ಪ್ರೌಢ ಶಾಲಾ ಪ್ರಾರಂಭೋತ್ಸವ

Suddi Udaya

ಸುಲ್ಕೇರಿಮೊಗ್ರು ಪುರುಷರ ಬಳಗ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಸಂದೀಪ್ ಪಟ್ಲ, ಕಾರ್ಯದರ್ಶಿಯಾಗಿ ಅಶೋಕ್ ಕಾಡಂಗೆ

Suddi Udaya

ನೆರಿಯ: ಕಡವೆ ಬೇಟೆ, ಬಂದೂಕು ಸಹಿತ ಆರೋಪಿ ವಶಕ್ಕೆ

Suddi Udaya

ಚಿಬಿದ್ರೆ: ಶತಾಯುಷಿ ಸೇಸು ನಿಧನ

Suddi Udaya

ಕಣಿಯೂರು ಶ್ರೀ ಮಹಮ್ಮಾಯಿ ಪುರ್ಸಾದ ತುಳು ಭಕ್ತಿ ಗೀತೆ ಬಿಡುಗಡೆ

Suddi Udaya
error: Content is protected !!