ಅಪರಾಧ ಸುದ್ದಿ

ಸೋಮಂತ್ತಡ್ಕ:ಅಂಗಡಿಯ ಶಟರ್ ತೆರೆದು ಅಂಗಡಿಯ ಒಳಗೆ ಡ್ರವರ್ ನಲ್ಲಿ ಇದ್ದ ರೂ.50 ಸಾವಿರ ನಗದು ಕಳವು

ಬೆಳ್ತಂಗಡಿ: ಮುಂಡಾಜೆ ಗ್ರಾಮದ ನಿವಾಸಿ ಪದ್ಮೇಶ್ ಕೆ ಎಸ್ ಎಂಬವರ ಸೋಮಂತ್ತಡ್ಕದ ಅಂಗಡಿಯ ಶಟರ್ ತೆಗೆದು ಅಂಗಡಿಯ ಒಳಗೆ ಡ್ರವರ್ ನಲ್ಲಿ ಇದ್ದ ರೂ.50 ಸಾವಿರ ನಗದನ್ನು ಕಳ್ಳರು ಕಳವು ಗೈದಿರುವುದಾಗಿ ಆ.10ರಂದು ಧಮ೯ಸ್ಥಳ ಪೊಲೀಸರಿಗೆ ದೂರು ನೀಡಲಾಗಿದೆ.
ಪದ್ಮೇಶ್ ಅವರು ಮುಂಡಾಜೆ ಗ್ರಾಮದ ಸೊಮಂತ್ತಡ್ಕ ಎಂಬಲ್ಲಿ ದಿನಸಿ ಅಂಗಡಿಯನ್ನು ನಡೆಸಿಕೊಂಡಿದ್ದು, ಆ.9 ರಂದು ತನ್ನ ವ್ಯವಹಾರದ ಬಾಬ್ತು 50 ಸಾವಿರ ರೂ ಹಣವನ್ನು ತನ್ನ ಅಂಗಡಿಯ ಡ್ರಾವರನ್ನಲ್ಲಿಟ್ಟು ಬೀಗ ಹಾಕಿ ರಾತ್ರಿ 10 ಗಂಟೆ ಸಮಯಕ್ಕೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು, ಮರುದಿನ ಆ.10 ರಂದು ಎಂದಿನಂತೆ ಬೆಳಗ್ಗೆ 6.30ಕ್ಕೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಅಂಗಡಿಯ ಅರ್ಧ ಶೆಟರ್ ತೆರೆದಿರುವುದನ್ನು ಕಡು ಅಂಗಡಿಯನ್ನು ಪರಿಶೀಲಿಸಿದಾಗ ಡ್ರಾವರ್ ಬೀಗವನ್ನು ಕಳ್ಳರು ಯಾವುದೋ ಆಯುಧದಿಂದ ಮೀಟಿ ಅದರಲ್ಲಿದ್ದ ನಗದು ರೂ 50ಸಾವಿರವನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ.
. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 55/2023 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.

Related posts

ಗುರುವಾಯನಕೆರೆ ಪೊಟ್ಟುಕೆರೆ ನಿಷೇಧಿತ ಮಾದಕ ವಸ್ತು ಸೇವಿಸಿದ ವ್ಯಕ್ತಿ ಮೇಲೆ ಪ್ರಕರಣ ದಾಖಲು

Suddi Udaya

ಕುತ್ಯಾರು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ಬೆಳ್ತಂಗಡಿ ಪೊಲೀಸ್ ರಿಂದ ತನಿಖೆ

Suddi Udaya

ಧರ್ಮಸ್ಥಳ: ಪಾಂಗಳದಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

Suddi Udaya

ವೇಣೂರು: ಮನೆಯಲ್ಲಿ ಇಟ್ಟಿದ್ದ ರೂ 2.25 ಲಕ್ಷ ನಗದು ಹಣ ಕಳವು

Suddi Udaya

ಕುತ್ಲೂರು ಪ್ರಕರಣ ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya

ವೃದ್ಧನಿಂದ ಮಕ್ಕಳಿಗೆ ಲೈಂಗಿಕ ದೌರ್ಜನ್ಯ; ಪೋಕ್ಸೋ ಕೇಸ್ ದಾಖಲು

Suddi Udaya
error: Content is protected !!