September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ವೇಣೂರಿನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ: ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬೆಳ್ತಂಗಡಿ: ಮೂಡುಕೋಡಿ ವೈನ್ ಶಾಪ್ ನಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ ನಡೆದು ಎರಡೂ ಕಡೆಯವರು ಪೊಲೀಸರಿಗೆ ದೂರು ನೀಡಿದ ಘಟನೆ ನಡೆದಿದೆ.

ನಿಟ್ಟಡೆ ಗ್ರಾಮದ ನಿವಾಸಿ ಪ್ರಸಾದ ಯಾನೆ ಬಾಡು ಪ್ರಸಾದ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ತಾನು ಮೋಹನ್ ಎಂಬವರೊಂದಿಗೆ ಮೂಡುಕೋಡಿ ಗ್ರಾಮದ ವೈನ್ ಶಾಪಿಗೆ ಬಂದಿದ್ದ ವೇಳೆ ಆರೋಪಿಗಳಾದ ವಸಂತ ಕೋಟ್ಯಾನ್ ಹಾಗೂ ಸಂತೋಷ್ ನಾರ್ಲ ಎಂಬವರು ಪ್ರಸಾದ್ ನನ್ನು ತಡೆದು ನಿಲ್ಲಿಸಿ ಬೈದು ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿದ್ದಾರೆ. ಹಲ್ಲೆಗೆ ಒಳಗಾದ ಪ್ರಸಾದ್ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರು ನೀಡಿದ್ದು ಅದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ಘಟನೆಗೆ ಸಂಬಂಧಿಸಿಸಿದಂತೆ ವಸಂತ ಕೋಟ್ಯಾನ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು ತನ್ನ ಮೇಲೆ ಹಾಗೂ ಸಂತೋಷ್ ಎಂಬವರ ಮೇಲೆ ಪ್ರಸಾದ್ ಯಾನೆ ಬಾಡು ಪ್ರಸಾದ್ ಎಂಬಾತ ಅವಾಚ್ಯ ಶಬ್ದಗಳಿಂದ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಿರುವುದಾಗಿ ದೂರು ನೀಡಿದ್ದು ಅದರಂತೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Related posts

ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಮುಂಭಾಗದ ಡಾಮರೀಕರಣಕ್ಕೆ ಶಾಸಕರಿಂದ ರೂ.5ಲಕ್ಷ ಅನುದಾನ

Suddi Udaya

ದೊಂಪದಪಲ್ಕೆ ಸ.ಹಿ.ಪ್ರಾ. ಶಾಲೆಯಲ್ಲಿ ವಲಯ ಮಟ್ಟದ ಪ್ರತಿಭಾ ಕಾರಂಜಿ

Suddi Udaya

ಶ್ರೀ ಧ.ಮಂ. ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್ ವತಿಯಿಂದ ನಡೆಯುವ ಯೋಗ ರತ್ನ ಪ್ರಶಸ್ತಿಗೆ ಕು| ಚಿನ್ಮಯಿ. ಹೆಚ್, ಆಯ್ಕೆ

Suddi Udaya

ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಅರಣ್ಯ ಅಧಿಕಾರಿಗಳಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡ ನಾಟಿ ಕಾರ್ಯಕ್ರಮ

Suddi Udaya

ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ & ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆಯವರು ಸಿರಿ ಸಂಸ್ಥೆಗೆ ಭೇಟಿ

Suddi Udaya

ಗುರುವಾಯನಕೆರೆ: ಸೆಲೆಕ್ಷನ್ ವೇರ್ ನಲ್ಲಿ ಆಷಾಢ & ಮಾನ್ಸೂನ್ ಸ್ಪೆಷಲ್ ಆಫರ್: ಪ್ರತಿ ಖರೀದಿಯ ಮೇಲೆ ಶೇ.50 ರಷ್ಟು ರಿಯಾಯಿತಿ

Suddi Udaya
error: Content is protected !!