September 6, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿವರದಿ

ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣ ಪತ್ತೆ: ಪಿಕಪ್ ಸಹಿತ ವಾಹನದಲ್ಲಿದ್ದ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರು ವಶ

ಧರ್ಮಸ್ಥಳ: ಮೂರು ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟದ ಪ್ರಕರಣವನ್ನು ಪತ್ತೆ ಹಚ್ಚಿದ ಧಮ೯ಸ್ಥಳ ಪೊಲೀಸರು ಮೂರು ಪಿಕಪ್ ನಲ್ಲಿದ್ದ ಜಾನುವಾರು ಸಹಿತ ನಾಲ್ವರನ್ನು ಬಂಧಿಸಿದ ಘಟನೆ ಜು.12 ರಂದು ವರದಿಯಾಗಿದೆ.


ಚೆನ್ನಕೇಶವ (33 ವ)ಮರವಳಲು, ಕಸಬಾ ಹೋಬಳಿ, ಅರಕಲಗೂಡು ಹಾಸನ, ಪುಪ್ಷರಾಜ್‌ ಒಳಗದ್ದೆ ಮನೆ, ನಾವೂರು ಗ್ರಾಮ, ಪ್ರಮೋದ್‌ ಸಾಲ್ಯಾನ್‌ ಮೋರ್ತಾಜೆ ಮನೆ, ನಾವೂರು ಗ್ರಾಮ, ಸಂದೀಪ್‌ ಹಿರೇಬೆಳಗುಳಿ, ಹಳೇಕೋಟೆ ಹೋಬಳಿ, ಹೊಳೆನರಸೀಪುರ ಇವರನ್ನು ಪೊಲೀಸರು ಬಂಧಿಸಿದ್ದಾರೆ.


ಘಟನೆ ಹಿನ್ನೆಲೆ: ಧಮ೯ಸ್ದಳ ಠಾಣೆಯ ಎಸ್.ಐ ಅನೀಲಕುಮಾರ್‌ ತಂಡದವರು ಜು. 12 ರಂದು ಖಚಿತ ಮಾಹಿತಿಯಂತೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮ ಮಂದಿರದ ಬಳಿ ಸಿಬ್ಬಂದಿರವರುಗಳೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದ ಸಮಯ ರಾತ್ರಿ 8.45 ಗಂಟೆಗೆ ಉಜಿರೆ ಕಡೆಯಿಂದ ಧರ್ಮಸ್ಥಳ ಕಡೆಗೆ ಬರುತ್ತಿದ್ದ ಮೂರು ಪಿಕಪ್‌ ವಾಹನಗಳಾದ ಕೆಎ-21ಬಿ-7389 ಕೆಎ-70-0312 ಮತ್ತು ಕೆಎ670209 ನೇ ನೋಂದಣಿ ಸಂಖ್ಯೆಯ ವಾಹನಗಳನ್ನು ನಿಲ್ಲಿಸಿ ತಪಾಸಣೆ ನಡೆಸಿದಾಗ ಅಕ್ರಮವಾಗಿ ಜಾನುವಾರು ಸಾಗಾಟದ ಪ್ರಕರಣ ಬೆಳಕಿಗೆ ಬಂದಿತ್ತು.

ವಾಹನದಲ್ಲಿ 6 ದನ, 2 ಗಂಡು ಕರುಗಳು ಸೇರಿ ಒಟ್ಟು 8 ಜಾನುವಾರುಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿತ್ತು. ವಾಹನದಲ್ಲಿದ್ದ ಚೆನ್ನಕೇಶವ ಎಂಬಾತನನ್ನು ಪೊಲೀಸರು ವಿಚಾರಿಸಿದಾಗ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ವಾಹನ ಸಹಿತ ಜಾನುವಾರುಗಳನ್ನು ಸ್ವಾದೀನಪಡಿಸಿಕೊಂಡ ಪೊಲೀಸರು ನಾಲ್ವರು ಆಪಾದಿತರುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.


ಸ್ವಾಧೀನಪಡಿಸಿಕೊಂಡ ಜಾನುವಾರುಗಳ ಅಂದಾಜು ಮೌಲ್ಯ ರೂ. 65 ಸಾವಿರ ಹಾಗೂ ವಾಹನದ ಅಂದಾಜು ಮೌಲ್ಯ ರೂ.7 ಲಕ್ಷ ಒಟ್ಟು ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ರೂ 7.65 ಲಕ್ಷ ಎಂದು ಅಂದಾಜಿಸಲಾಗಿದೆ. ಧಮ೯ಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಸುಲ್ಕೇರಿ ಗ್ರಾ. ಪಂ. ವ್ಯಾಪ್ತಿಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಕುಣಿತಾ ಭಜನೆಯಲ್ಲಿ ಶ್ರೀ ವಿದ್ಯಾ ಸರಸ್ವತಿ ಭಜನಾ ಮಂಡಳಿ ಪಾರೆಂಕಿ ತಂಡಕ್ಕೆ ಪ್ರಥಮ ಸ್ಥಾನ

Suddi Udaya

ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ: ಧ್ವಜಾರೋಹಣ, ಹಸಿರು ಹೊರೆಕಾಣಿಕೆ ಸಮರ್ಪಣೆ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢ ಶಾಲೆಯಲ್ಲಿ ಪೋಷಕರ ಸಭೆ

Suddi Udaya

ಉಜಿರೆಯಲ್ಲಿ ಗೌತಮ್ ಬಿ.ಆರ್ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಶುಭಾರಂಭ

Suddi Udaya

ಮುಂಬಯಿಯಲ್ಲಿ ಟೀಮ್ ಯುವ ಬ್ರಿಗೇಡ್ ನಿಂದ ಶಾಸಕ‌ ಹರೀಶ್ ಪೂಂಜರವರಿಗೆ ಸನ್ಮಾನ

Suddi Udaya
error: Content is protected !!