29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ ಬಿಷಪ್ ರಿಗೆ ಲಯನ್ಸ್ ಕ್ಲಬ್ ನಿಂದ ಬೆಳ್ಳಿಹಬ್ಬ ವರ್ಷದ “ಗೌರವಾಭಿನಂದನೆ”

ಬೆಳ್ತಂಗಡಿ; ಇಲ್ಲಿನ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಬೆಳ್ಳಿಹಬ್ಬ ವರ್ಷ ಆಚರಿಸಿಕೊಳ್ಳುತ್ತಿರುವ ಧರ್ಮಾಧ್ಯಕ್ಷ ಹಾಗೂ ಬೆಳ್ತಂಗಡಿ ತಾಲೂಕು ಸೌಹಾರ್ದ ವೇದಿಕೆ ಸಂಸ್ಥಾಪಕ ಅಧ್ಯಕ್ಷರು ಆಗಿರುವ ಬಿಷಪ್ ಲಾರೆನ್ಸ್ ಮುಕ್ಕುಝಿ ಅವರಿಗೆ ಆ.11 ರಂದು ಬೆಳ್ತಂಗಡಿ ಲಯನ್ಸ್ ಕ್ಲಬ್ ವತಿಯಿಂದ ಗೌರವಾಭಿನಂದನೆ ಸಲ್ಲಿಸಲಾಯಿತು.

ಅವರ ಅಧಿಕೃತ ನಿವಾಸಕ್ಕೆ ತೆರಳಿದ ಲಯನ್ಸ್ ಸದಸ್ಯರನ್ನು ಪರಿಚಯಿಸಿಕೊಂಡ ಬಿಷಪ್ ಅವರು ವಿಶೇಷ ಪ್ರಾರ್ಥನೆ ಮೂಲಕ ಆಶೀರ್ವದಿಸಿದರು. ಭೇಟಿ ಮಾಡಿದ ಎಲ್ಲರಿಗೂ ಸಿಹಿತಿಂಡಿ ನೀಡಿ ಪುರಸ್ಕರಿಸಿದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಕಾರ್ಯದರ್ಶಿ ಅನಂತಕೃಷ್ಣ, ಕೋಶಾಧಿಕಾರಿ ಸುಭಾಷಿಣಿ, ಲಯನ್ಸ್ ಸದಸ್ಯರುಗಳಾದ ಬಿ.ಪಿ ಅಶೋಕ್ ಕುಮಾರ್, ಧರಣೇಂದ್ರ ಕೆ ಜೈನ್, ಧತ್ತಾತ್ರೇಯ ಗೊಲ್ಲ, ವಿನ್ಸೆಂಟ್ ಟಿ ಡಿಸೋಜಾ ಉಪಸ್ಥಿತರಿದ್ದರು. ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು.

Related posts

ಅರುವ ಭಜನಾ ಕಮ್ಮಟೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜ.4: ಮರೋಡಿ ಯಂಗ್‌ ಸ್ಟಾರ್‌ ಫ್ರೆಂಡ್ಸ್‌ನ ದಶಮಾನೋತ್ಸವ, ಶನೀಶ್ವರ ಪೂಜೆ

Suddi Udaya

ತೋಟತ್ತಾಡಿ : ಈಶ್ವರ್ ಗೌಡ ಪಿ. ಎಚ್. ನಿಧನ

Suddi Udaya

ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 40 ಫಲಾನುಭವಿಗಳಿಗೆ ಸಂಪೂರ್ಣ ಸುರಕ್ಷಾ ಆರೋಗ್ಯ ಚಿಕಿತ್ಸಾ ನೆರವು

Suddi Udaya

ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷರಾಗಿ ವಿನಯಚಂದ್ರ , ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೆ. ಆಯ್ಕೆ

Suddi Udaya
error: Content is protected !!