
ಪೆರಿಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಕೆ ರವರಿಗೆ ಬೀಳ್ಕೊಡುಗೆ ಸಮಾರಂಭವು ಆ.11ರಂದು ಶಾಲೆಯಲ್ಲಿ ನೆರವೇರಿತು.

ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮುಖ್ಯ ಶಿಕ್ಷಕರ ಬಗ್ಗೆ ಅಭಿನಂದನಾ ನುಡಿಗಳನ್ನಾಡಿದರು. ಮುಖ್ಯ ಶಿಕ್ಷಕರ ಅಭಿನಂದನೆಗಾಗಿ ಶಾಲೆಯ ಹಿಂದಿನ ಮುಖ್ಯ ಗುರುಗಳಾದ ಜಯಲಕ್ಷ್ಮಿ ,ಬೂಬ ಮಾಸ್ಟರ್, ವೆಂಕಟೇಶ್ ಇವರು ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಸಜ್ಜನ, ಮೃದು ಸ್ವಭಾವದ ಮುಖ್ಯ ಗುರುಗಳಾದ ವಸಂತಿ ಕೆ ಇವರ ಸರಳ ವ್ಯಕ್ತಿತ್ವವನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ತಮ್ಮ ಮಾತುಗಳಲ್ಲಿ ಕೊಂಡಾಡಿದರು.

ಈ ಸಂದರ್ಭದಲ್ಲಿ ಹೊಸಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ಶಾಂತ, ಸದಸ್ಯರುಗಳಾದ ಪ್ರಕಾಶ್ ದೇವಾಡಿಗ, ಹರಿಪ್ರಸಾದ್ , ಪಡ್ಡಂದಡ್ಕ ಕ್ಲಸ್ಟರ್ ಸಿ.ಆರ್.ಪಿ ಆರತಿ, ನಿಕಟಪೂರ್ವ ಎಸ್.ಡಿ.ಎಂ.ಸಿ ಅಧ್ಯಕ್ಷ ಆಲಿಯಬ್ಬ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಪ್ರಶಾಂತ್ ಆಚಾರ್ಯ, ಉಪಾಧ್ಯಕ್ಷೆ ಸುಗಂಧಿ, ವಲಯ ಜನ ಜಾಗೃತಿ ವೇದಿಕೆ ಅಧ್ಯಕ್ಷ ವಿಠಲ ಸಿ ಪೂಜಾರಿ, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಪೋಷಕರು, ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಗುರುಗಳಾದ ನೀನಾ ಕುವೆಲ್ಲೋ ಸ್ವಾಗತಿಸಿ, ದೈಹಿಕ ಶಿಕ್ಷಣ ಶಿಕ್ಷಕಿ ಪುಷ್ಪ ವಂದಿಸಿದರು. ಹಿರಿಯ ಶಿಕ್ಷಕಿ ಶಶಿಪ್ರಭ ಸನ್ಮಾನ ಪತ್ರ ವಾಚಿಸಿದರು, ಶಿಕ್ಷಕರಾದ ವಿಶ್ವನಾಥ್ ಪ್ರಸ್ತಾವನೆಗೈದು, ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.