23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಹೊಸಪಟ್ಣ ಹಾಲು ಉ.ಸ. ಸಂಘ: ಮಹಾಸಭೆ

ವೇಣೂರು: ಹೊಸಪಟ್ಣ ಹಾಲು ಉತ್ಪಾದಕರ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.14ರಂದು ಸಂಘದ ವಠಾರದಲ್ಲಿ ಜರಗಿತು.

ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಗಳ ನಡವಳಿಗಳನ್ನು ಓದಿ ಸ್ವೀಕರಿಸಲಾಯಿತು. ಪ್ರಸಕ್ತ ಸಾಲಿನ ವಾರ್ಷಿಕ ವರದಿಯನ್ನು ಓದಿ ಮಂಜೂರು ಮಾಡಲಾಯಿತು. ಲೆಕ್ಕ ಪರಿಶೋಧನ ವರದಿಯ ಪರಿಶೀಲನೆ, ಮಂಜೂರಾತಿ ಹಾಗೂ ವಿವಿಧ ಕಾರ್ಯಚಟುವಟಿಕೆಗಳ ಅನುಮೋದನೆ ಸಭೆಯಲ್ಲಿ ಪಡೆಯಲಾಯಿತು.

ದ.ಕ. ಹಾಲು ಒಕ್ಕೂಟದ ಅಧಿಕಾರಿ ಶ್ರೀಮತಿ ಸುಚಿತ್ರ , ಸಂಘದ ಉಪಾಧ್ಯಕ್ಷ ಶಿವಣ್ಣ ಪೂಜಾರಿ, ನಿರ್ದೇಶಕರಾದ ಸುರೇಶ್ ಪೂಜಾರಿ, ಪ್ರವೀಣ್ ಪೂಜಾರಿ, ವಸಂತ ಪೂಜಾರಿ, ಮೋಹನಂದ ಪೂಜಾರಿ, ರವಿ ಪೂಜಾರಿ,ಸಂತೋಷ್,ರೇವತಿ, ಹೇಮಾವತಿ, ಎಮಿಲ್ಡಾ ಡಿಸೋಜ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷರು ಅಶೋಕ್ ಪೂಜಾರಿ ಕಜಿಪಟ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ವಿ.ಎಸ್. ವಂದಿಸಿದರು.

Related posts

ಕಡಿರುದ್ಯಾವರ : ವಿದ್ಯುತ್ ಪರಿವರ್ತಕದಿಂದ ಕಿಡಿ ಸಿಡಿದು ವ್ಯಾಪಿಸಿದ ಬೆಂಕಿ

Suddi Udaya

ರಾಜ್ಯ ಮಟ್ಟದ ಜಿನಭಜನಾ ಸ್ಪರ್ಧೆ – 8: ನಿರಂಜನ್ ಜೈನ್ ಕುದ್ಯಾಡಿ ಅವರ ರಚನೆಯ ಬೆಳಗಾವಿಯ ವಿಶಾರದಾ ನೃತ್ಯ ತಂಡ ಪ್ರಥಮ ಸ್ಥಾನ

Suddi Udaya

ದ.ಕ. ಜಿಲ್ಲಾ ಸಂಸದ ಕ್ಯಾ. ಬ್ರಿಜೇಶ್ ಚೌಟ ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿ

Suddi Udaya

ಹತ್ಯಡ್ಕ: ನೆಕ್ಕರಡ್ಕ ನಿವಾಸಿ ಅನಸೂಯ ನಿಧನ

Suddi Udaya

ಆ.23: ವೇಣೂರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ದೀಪಾವಳಿ ಹಬ್ಬದ ಪ್ರಯುಕ್ತ ಪ್ರಕಾಶ್ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್‍ಸ್‌ನಲ್ಲಿ ವಿಶೇಷ ಆಫರ್ ಹಾಗೂ ಆಕರ್ಷಕ ಉಡುಗೊರೆ

Suddi Udaya
error: Content is protected !!