38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಂಜೊಟ್ಟಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ, ರಝಾ ಗಾರ್ಡನ್ ಇಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಸ್ವಾತಂತ್ರ್ಯ ದಿನಾಚರಣೆಯ ಈ ಸಂಭ್ರಮದಲ್ಲಿ ಪಾಲ್ಗೊಂಡು ಧ್ವಜಾರೋಹಣವನ್ನು ಮಾಡಿದ ಗುರವಾಯನಕೆರೆಯ ಖ್ಯಾತ ವೈದ್ಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ| ವೇಣುಗೋಪಾಲ ಶರ್ಮ ಅವರು ಮಾತನಾಡಿ” ಹಿರಿಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಕಿರಿಯರು ತಮ್ಮ ಜೀವನದಲ್ಲಿ ಅರ್ಥವತ್ತಾಗಿ ಅಳವಡಿಸಿಕೊಂಡು ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕರಾದ ಜನಾಬ್ ಸೈಯದ್ ಹಬೀಬ್ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಕಾರ್ಯದರ್ಶಿಯಾದ ಸೈಯದ್ ಅಯ್ಯುಬ್, ಕೋಶಾಧಿಕಾರಿಯಾದ ಸೈಯದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಹಾಗೂ ಸ್ಟಾರ್ ಲೈನ್ ಅರೇಬಿಕ್ ಶಿಕ್ಷಣ ವಿಭಾಗದ ಮುಖ್ಯ ಗುರುಗಳಾದ ಅಬ್ದುಲ್ ರಜಾಕ್ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಿಂದ ನಡೆದ ಸುಂದರವಾದ ಪಥ ಸಂಚಲನದಲ್ಲಿ ಭಾರತದ ಸಂಸ್ಕೃತಿ, ಭಾವೈಕ್ಯತೆ ಹಾಗೂ ಗಡಿ ಕಾಯುವ ವೀರಯೋಧರ ವೇಷ ಭೂಷಣಗಳ ಅಣಕು ಪ್ರದರ್ಶನ ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜನಾಬ್ ಸೈಯದ್ ಹಬೀಬ್ ರವರು ” ವಿದ್ಯಾರ್ಥಿಗಳು ಸ್ವತಂತ್ರ ದೇಶದ ಆದರ್ಶ ಪ್ರಜೆಗಳಾಗಿ ಬಾಳಬೇಕು “ಎಂದರು. ಸಮಾಜದಲ್ಲಿ ಬಡಜನರ ತನ್ನ ಜೀವನವನ್ನು ಮುಡಿಪಾಗಿಟ್ಟ ವೈದ್ಯ ಲೋಕದಲ್ಲಿ ವಿಶೇಷ ಹೆಸರು ಗಳಿಸಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಕಾರ್ಯಕ್ರಮದ ಮುಖ್ಯ ಅತಿಥಿಯಾದ ವೇಣುಗೋಪಾಲ ಶರ್ಮ ಇವರಿಗೆ ಸಂಸ್ಥೆಯ ವತಿಯಿಂದ ವಿಶೇಷ ಅಭಿನಂದನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಭಾಷಣ ಸಾಂಸ್ಕೃತಿಕ ಕಾರ್ಯಕ್ರಮಗಳು, ಚದ್ಮ ವೇಷ ಸ್ಪರ್ಧೆಗಳು ಹಾಗೂ ನಾಟಕ ಪ್ರದರ್ಶನಗಳು ನಡೆದವು. ಶಾಲಾ ಸಹ ಶಿಕ್ಷಕಿ ಶ್ರೀಮತಿ ಅಶ್ವಿನಿ ಅಥಿತಿಗಳನ್ನು ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕ ಶ್ರೀಯುತ ನೋರ್ಬರ್ಟ್ ಧನ್ಯವಾದ ಕಾರ್ಯಕ್ರಮವನ್ನು ನೆರವೇರಿಸಿದರು. ಹಾಗೂ ಸಹ ಶಿಕ್ಷಕಿ ಶ್ರೀಮತಿ ಸುಶ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

Related posts

ಹಾಜಿ ಅಬ್ದುಲ್ ಲತೀಫ್ ಸಾಹೇಬ್ ಅವರಿಗೆ ಯುಎಇ 10 ವರ್ಷದ ಗೋಲ್ಡನ್ ವೀಸಾ

Suddi Udaya

ಬೆಳ್ತಂಗಡಿಯ ‘ಆಲ್ಫಾ ಕೋಟ್’ ನಿವಾಸಿ ಮೇರಿ ಮಾಡ್ತಾ ನಿಧನ

Suddi Udaya

ರಾಷ್ಟ್ರೀಯ ಕಬಡ್ಡಿ ಪಂದ್ಯಾಟಕ್ಕೆ ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿ ಆಯ್ಕೆ

Suddi Udaya

ಜು. 13: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ “ಶ್ರೀ ಗುರುಸಾನಿಧ್ಯ” ವಾಣಿಜ್ಯ ಸಂಕೀರ್ಣ ಲೋಕಾರ್ಪಣೆ ಹಾಗೂ ಆಡಳಿತ ಕಚೇರಿಯ ಉದ್ಘಾಟನೆ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್‌ನಿಂದ ಹಲವಾರು ಜನೋಪಯೋಗಿ ಕಾರ್ಯಕ್ರಮ

Suddi Udaya

ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಚುನಾವಣಾ ಅರಿವು ಸ್ಪರ್ಧೆಗಳ ಉದ್ಘಾಟನೆ

Suddi Udaya
error: Content is protected !!