24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ನಿಡ್ಲೆ : ಸರಕಾರಿ ಪ್ರೌಢ ಶಾಲೆ ನಿಡ್ಲೆಯಲ್ಲಿ ಕೊಕ್ಕಡ ವಲಯದ ವತಿಯಿಂದ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೊರಗಪ್ಪ ಗೌಡ ತಾಲೂಕು ಜನಜಾಗೃತಿ ಸದಸ್ಯರು ನೆರವೇರಿಸಿ ಶುಭಹಾರೈಸಿದರು.


ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕರಾದ ಶಾಂತಶೆಟ್ಟಿ ಯವರು ವಹಿಸಿದ್ದು ಮಕ್ಕಳಿಗೆ ಬೇಕಾದ ಉತ್ತಮ ಮಾಹಿತಿ ನೀಡುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಗ್ಗೆ ಶ್ಲಾಘನೇ ವ್ಯಕ್ತಪಡಿಸಿದರು.
ಸಂಪನ್ಮೂಲ ವ್ಯಕ್ತಿ ಯಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಶಿಬಿರಾಧಿಕಾರಿ ದೇವಿಪ್ರಸಾದ್ ರವರು ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿಯೊಂದಿಗೆ ಪ್ರತಿಜ್ಞೆ ಮಾಡಿಸಿದರು.

ಶಾಲಾ ಸಹಶಿಕ್ಷಕಿ ಸುಚಿತ್ರ ಸ್ವಾಗತಿಸಿದರು. ವಲಯ ಮೇಲ್ವಿಚಾರಕರಾದ ಶ್ರೀಮತಿ ಭಾಗೀರಥಿ ಕಾರ್ಯಕ್ರಮದ ನಿರೂಪಣೆ ಮಾಡಿ ಧನ್ಯವಾದವಿತ್ತರು. ಸೇವಾಪ್ರತಿನಿಧಿ ಸೇಸಪ್ಪ ಗೌಡ ಉಪಸ್ಥಿತರಿದ್ದರು.

Related posts

ಶೇ.100 ತೆರಿಗೆ ವಸೂಲಾತಿ: ನಾವೂರು ಗ್ರಾ.ಪಂ. ಗೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಯವರಿಂದ ಅಭಿನಂದನೆ

Suddi Udaya

ಕುವೆಟ್ಟು ಸ.ಉ.ಪ್ರಾ. ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳ ಪ್ರಾರಂಭೋತ್ಸವ

Suddi Udaya

ಓಡಿಲ್ನಾಳ : ಭದ್ರಕಜೆ ಯುವಶಕ್ತಿ ಫ್ರೆಂಡ್ಸ್ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ: ಪದ್ಮನಾಭ ಕುಂಜತ್ತಾಯ ಹೃದಯಾಘಾತದಿಂದ ನಿಧನ

Suddi Udaya

ಬಂದಾರು: ಬಟ್ಲಡ್ಕ, ಬೀಬಿ ಮಜಲು ಪರಿಸರದಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

Suddi Udaya

ಉಜಿರೆಯ ರವೀಂದ್ರ ನಾಯಕ್ ನಿಧನ

Suddi Udaya
error: Content is protected !!