September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಮಹಿಳಾ ಐಟಿಐಗೆ ಶೇಕಡಾ ನೂರು ಫಲಿತಾಂಶ

ಉಜಿರೆ: 2022-23ನೇ ಸಾಲಿನ ವಿದ್ಯಾರ್ಥಿನಿಯರಿಗೆ ಜುಲೈ ತಿಂಗಳಿನಲ್ಲಿ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆಯ ಫಲಿತಾಂಶ ಆ.17ರಂದು ಪ್ರಕಟವಾಗಿದ್ದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಗೆ ಶೇಕಡಾ ನೂರು ಫಲಿತಾಂಶ ಬಂದಿರುತ್ತದೆ.

ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಯಲ್ಲಿ ದಾಖಲಾತಿ ಪಡೆದುಕೊಂಡ 19 ವಿದ್ಯಾರ್ಥಿನಿಯರು ಹಾಗೂ ಸೀವೀಂಗ್ ಟೆಕ್ನಾಲಜಿ ವೃತ್ತಿಯಲ್ಲಿ ದಾಖಲಾತಿ ಪಡೆದುಕೊಂಡ 18 ವಿದ್ಯಾರ್ಥಿನಿಯರು ಎಲ್ಲರೂ ತೇರ್ಗಡೆ ಹೊಂದಿದ್ದು, ಈ ಪೈಕಿ ಸೀವೀಂಗ್ ಟೆಕ್ನಾಲಜಿ ವೃತ್ತಿಯ ಅಫ್ರೀನ್ ತಾಜ್ 91% ಹಾಗೂ ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವೃತ್ತಿಯ ಸಮೀಕ್ಷಾ ರೈ 87% ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ 19 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಹಾಗೂ 18 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

ಸಂಸ್ಥೆಯ ಫಲಿತಾಂಶ ಕುರಿತು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ತಿಳಿಸಿದ್ದಾರೆ.

Related posts

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಿಂದ ವಾಣಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ವಿ.ಹಿಂ.ಪ. ಬಜರಂಗದಳ ಗ್ರಾಮ ಸಮಿತಿ ಕಾಯರ್ತಡ್ಕ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನ ಹಾಗೂ ಪಂಜಿನ ಮೆರವಣಿಗೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಯಕ್ಷಗಾನ ಭಾಗವತ ರವಿಚಂದ್ರ ಕನ್ನಡಿಕಟ್ಟೆಗೆ ಮಾತೃ ವಿಯೋಗ

Suddi Udaya

ರಾಜ್ಯ ಮಟ್ಟದ ಮಹಿಳೆಯರ ನೆಟ್ ಬಾಲ್ ಪಂದ್ಯಾಟ : ಎಸ್.ಡಿ.ಎಂ ತಂಡ ಪ್ರಥಮ

Suddi Udaya

ಸುರ್ಯ ಸ.ಕಿ. ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮುಳಿಯ ಜುವೆಲ್ಲರ್ಸ್ ವತಿಯಿಂದ ಬ್ಯಾಗ್ ವಿತರಣೆ

Suddi Udaya

ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಪನ್ಯಾಸ ಕಾರ್ಯಕ್ರಮ

Suddi Udaya
error: Content is protected !!