ಬೆಳ್ತಂಗಡಿ: ಕಡಿರುದ್ಯಾವರ ಗ್ರಾಮದ ಕಾನರ್ಪದ ಕೌಡಂಗೆ ನಿವಾಸಿ ನೇಮಿರಾಜ ಗೌಡ(56ವ)ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಆ. 18ರಂದು ನಿಧನ ಹೊಂದಿದರು.

ಕಾಂಗ್ರೆಸ್ ಧುರೀಣರಾಗಿದ್ದ ಅವರು ಮಿತ್ತಬಾಗಿಲು ಗ್ರಾಮ ಪಂಚಾಯಿತಿಯಲ್ಲಿ ಮೂರು ಅವಧಿ, ಮಿತ್ತಬಾಗಿಲು ಗ್ರಾಮ ಪಂಚಾಯಿತಿಯಿಂದ ಕಡಿರುದ್ಯಾವರ ಪ್ರತ್ಯೇಕ ಪಂಚಾಯಿತಿಯಾದ ಬಳಿಕ ಒಂದು ಅವಧಿಗೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸೇವೆ ಸಲ್ಲಿಸಿದರು.

ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಅವರು ಯುವ ಕಾಂಗ್ರೆಸ್ ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳನ್ನು ನಿವ೯ಹಿಸಿದ್ದರು.ಅವಿವಾಹಿತರಾಗಿದ್ದ ಅವರಿಗೆ ಸಹೋದರ ಇದ್ದಾರೆ.