September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿಯ ಗೌರವ

ಬಂಗಾಡಿ: ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು 2022-23 ಸಾಲಿನಲ್ಲಿ ಶೇ.100 ಪೂರ್ಣ ಪ್ರಮಾಣದಲ್ಲಿ ಸಾಲ ವಸೂಲಾತಿ ಮಾಡಿದ ಸಾಧನೆ ಮಾಡಿದ್ದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಕೊಡಮಾಡುವ ಸಾಧನಾ ಪ್ರಶಸ್ತಿಯ ಗೌರವಕ್ಕೆ ಪಾತ್ರವಾಗಿದೆ.

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘವು ಕಡಿರುದ್ಯಾವರ, ನಾವೂರು, ದಿಡುಪೆ,ಕಿಲ್ಲೂರು,ವಿತ್ತಬಾಗಿಲು, ಕನ್ಯಾಡಿ, ಇಂದಬೆಟ್ಟುವಿನಲ್ಲಿ ಶಾಖೆ ಹೊಂದಿದೆ

ಮಂಗಳೂರು ಎಸ್.ಸಿ. ಡಿ.ಸಿ.ಸಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ. ಎಮ್.ಎನ್ ರಾಜೇಂದ್ರ ಕುಮಾರ್ ರವರು ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಹರೀಶ್ ಸಾಲಿಯಾನ್ ಮೋರ್ತಾಜೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ದಯಾನಂದ ಶೆಟ್ಟಿಗಾರ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಮಂಗಳೂರು ಕೇಂದ್ರ ಬ್ಯಾಂಕಿನ ನಿರ್ದೇಶಕರುಗಳು,ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರುಗಳು,ಇತರರು ಉಪಸ್ಥಿತರಿದ್ದರು.

Related posts

ನಡ: ಮನೆಯ ಕೊಟ್ಟಿಗೆ ನುಗ್ಗಿದ ಬೃಹತ್ ಗಾತ್ರದ ಹೆಬ್ಬಾವು: ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಪ್ರತಿನಿಧಿ ಮಂಜುನಾಥ್

Suddi Udaya

ಬೆಳ್ತಂಗಡಿ : ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನದ ಅರ್ಜಿ ಕಾಲಾವಕಾಶ ವಿಸ್ತರಣೆ

Suddi Udaya

ಉಜಿರೆ ಶ್ರೀ ಎಸ್.ಡಿ.ಎಂ ಪದವಿ ಪೂರ್ವ ಕಾಲೇಜಿನಲ್ಲಿ ಮಸ್ಟರಿಂಗ್: ದ.ಕ ಜಿಲ್ಲಾಧಿಕಾರಿ ಮುಲೈ ಮುಹಿಲನ್ ಭೇಟಿ ಪರಿಶೀಲನೆ: 241 ಮತಗಟ್ಟೆಗಳಿಗೆ ಮತ ಪೆಟ್ಟಿಗೆ ಹಾಗೂ ಪರಿಕರಗಳ ವಿತರಣೆ ಆರಂಭ

Suddi Udaya

ಉಜಿರೆ: ಬ್ರಹ್ಮೋಪದೇಶದಲ್ಲಿ ಶರಸೇತು ಬಂಧನ ತಾಳಮದ್ದಳೆ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ‌ ವಿದ್ಯಾರ್ಥಿಗಳಿಂದ ಅದ್ವಿತೀಯ ಸಾಧನೆ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಕಾರ್ಯಕರ್ತರ ಸಭೆ

Suddi Udaya
error: Content is protected !!