ಬೆಳ್ತಂಗಡಿ: ಮೇಲಂತಬೆಟ್ಟು ಎಂಬಲ್ಲಿ ರಸ್ತೆ ಬದಿಯ ಕಂದಕಕ್ಕೆ ಟೆಂಪೋವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಚಾಲಕ ಅಪಾಯದಿಂದ ಪಾರಾಗಿದ್ದಾರೆ.


ಉರುಳಿಬಿದ್ದ ಟೆಂಪೋ ವನ್ನು ಇನ್ನೊಂದು ಟೆಂಪೋದ ಸಹಾಯದಿಂದ ಸ್ಧಳೀಯರ ಸಹಕಾರದಿಂದ ಮೇಲೆತ್ತಲಾಯಿತು. ಸಮೀಪದ ಹೈಟೆನ್ಶನ್ ವಿದ್ಯುತ್ ಕಂಬಕ್ಕೆ ತಾಗಿದರೂ ಕಂಬ ತುಂಡಾಗದೇ ಇರುವುದು ಜನರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಇದೇ ಜಾಗದಲ್ಲಿ ಈ ಹಿಂದೆಯೂ ನಾಲ್ಕು ಅವಘಡಗಳು ಸಂಭವಿಸಿದ್ದು ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಮನವಿ ಸಲ್ಲಿಸಿದರೂ ಸ್ಪಂದಿಸದಿರುವುದು ಸ್ಧಳೀಯರ ಅತೃಪ್ತಿಗೆ ಕಾರಣವಾಗಿದೆ.
