ನಾರಾವಿ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ವಾಲಿಬಾಲ್ ಪಂದ್ಯಾಟದ ಉದ್ಘಾಟನೆಯನ್ನು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಕೇಳ- ಕಾಶಿಪಟ್ಣ ಇಲ್ಲಿಯ ಆಡಳಿತ ಮೊಕ್ತೇಸರ ಅನಂತ ಅಸ್ರಣ್ಣ ನೆರವೇರಿಸಿದರು.
ಸಭಾಧ್ಯಕ್ಷತೆಯನ್ನು ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ವಹಿಸಿದ್ದರು. ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಶುಭವಿ, ಪಂಚಾಯತ್ ಸದಸ್ಯರು, ಎಸ್ ಡಿ ಎಂ ಸಿ ಉಪಾಧ್ಯಕ್ಷ ಯಶೋಧರ ನಲ್ಲರ ಬೆಟ್ಟು, ಊರ ಹಿರಿಯರಾದ ಶ್ರೀ ರಾಜು ಪೂಜಾರಿ, ಶ್ರೀಧರ ಪೂಜಾರಿ, ಸುಬ್ಬಣ್ಣ ಪೂಜಾರಿ, ಪಿಡಿಒ ಶ್ರೀಮತಿ ಆಶಾಲತಾ,ಪಂದ್ಯಾಟಗಳ ಸಂಯೋಜಕ ಕೋದಂಡರಾಮ, ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸರೀನ್ ತಾಜ್ ಸ್ವಾಗತಿಸಿ, ಶ್ರೀಮತಿ ಹರಿಣಾಕ್ಷಿ ವಂದಿಸಿದರು. ದೇವುದಾಸ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕರಾದ ಶಶಿಧರ್, ಶ್ರೀಮತಿ ಸೌಮ್ಯ, ಶ್ರೀಮತಿ ಸುಜಾತ ಸಹಕರಿಸಿದರು.
ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಸರಕಾರಿ ಪ್ರೌಢಶಾಲೆ ಬಳಂಜ ,ದ್ವಿತೀಯ ಸ್ಥಾನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಪೆರಿಂಜೆ ಇಲ್ಲಿಯ ವಿದ್ಯಾರ್ಥಿಗಳು ಪಡೆದುಕೊಂಡರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕೆ ಎಲ್ಲರಿಗೂ ಶುಭ ಹಾರೈಸಿ ದಾನಿಗಳನ್ನು ಕೃತಜ್ಞತೆಯಿಂದ ನೆನೆದರು. ವೇದಿಕೆಯಲ್ಲಿ ಶಾಲಾ ನಿಕಟಪೂರ್ವ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್, ನಿಕಟಪೂರ್ವ ದ್ವಿತೀಯ ದರ್ಜೆ ಸಹಾಯಕಿ ಶ್ರೀಮತಿ ಸವಿತಾ ಹಾಗೂ ವಲಯದ ದೈಹಿಕ ಶಿಕ್ಷಣ ಶಿಕ್ಷಕರು ಉಪಸ್ಥಿತರಿದ್ದರು.