37.9 C
ಪುತ್ತೂರು, ಬೆಳ್ತಂಗಡಿ
March 6, 2026
ಕ್ರೀಡಾ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉರುವಾಲು: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ

ಉರುವಾಲು: ಇಲ್ಲಿಯ ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಆ.19ರಂದು ಪುಂಜಾಲಕಟ್ಟೆ ವಲಯ ಮಟ್ಟದ ವಾಲಿಬಾಲ್ ಪಂದ್ಯಾಟ ಜರುಗಿತು.

ಶಾಲಾ ಸೇವಾ ಸಮಿತಿಯ ಅಧ್ಯಕ್ಷ ದಿವಾಕರ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀಧರ್ ಭಟ್, ಸುಭಾಷ್ ಚಂದ್ರ, ದೈಹಿಕ ಶಿಕ್ಷಕರು ಮಚ್ಚಿನ ಪ್ರೌಡಶಾಲೆ, ಅಜಿತ್ ಕೊಕ್ರಡಿ, ದೈಹಿಕ ಶಿಕ್ಷಕರು ಗೇರುಕಟ್ಟೆ ಪ್ರೌಡಶಾಲೆ, ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಶೋಭಿತ ಕೆ ಆರ್, ಅನುದಾನಿತ ಶಾಲೆ ಮುಖ್ಯ ಶಿಕ್ಷಕ ಶ್ರೀ ಸಣ್ಣಪ್ಪ , ಕುಪ್ಪೆಟ್ಟಿ ಕ್ಲಸ್ಟರ್ ನ CRP ಶ್ರೀಮತಿ ಸಂಧ್ಯಾ ಶಾಲಿನಿ ಹಾಗೂ ರಕ್ಷಕ ಶಿಕ್ಷಕ ಸಂಘದ ಸದಸ್ಯರಾದ ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ವೀಣಾ, ಶ್ರೀ ವಿಜಯ್,ಶ್ರೀ ಪ್ರಸಾದ್ ಕಡ್ತಿಲ ಮುಂತಾದವರು ವೇದಿಕೆಯಲ್ಲಿ ಹಾಜರಿದ್ದರು.

ಪಂದ್ಯಾಟದಲ್ಲಿ ಒಟ್ಟು 15 ತಂಡಗಳು ಭಾಗವಹಿಸಿದ್ದವು. ಕೊನೆಯಲ್ಲಿ ಪ್ರಥಮ ಬಹುಮಾನವನ್ನು ಪದ್ಮುಂಜ ಪ್ರೌಢ ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡರು. ದ್ವಿತೀಯ ಸ್ಥಾನ ಪೆರ್ಲ ಬೈಪಾಡಿ ಶಾಲಾ ವಿದ್ಯಾರ್ಥಿಗಳು ಪಡೆದುಕೊಂಡರು. ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶೋಭಿತ ಕೆ ಆರ್ ಸ್ವಾಗತಿಸಿದರು. ಸುಭಾಷ್ ಚಂದ್ರ ಪ್ರಾಸ್ತಾವಿಕ ನುಡಿದರು, ಶ್ರೀಮತಿ ದಿವ್ಯ ಧನ್ಯವಾದ ಸಮರ್ಪಿಸಿದರು.ಕಾರ್ಯಕ್ರಮವನ್ನು ಶಿಕ್ಷಕಿ ಪೂರ್ಣಿಮಾ ನೀರುಪಿಸಿದರು.

Related posts

ವೇಣೂರು: ಬರ್ಕಜೆ ದೆತ್ತರ ನದಿಗೆ ಸ್ನಾನಕ್ಕೆ ತೆರಳಿದ ಮೂವರು ವಿದ್ಯಾರ್ಥಿಗಳು ನೀರುಪಾಲು

Suddi Udaya

ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರನ್ನು ಭೇಟಿ ಮಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ

Suddi Udaya

ಕಳೆoಜ: ನಾಟಿ ವೈದ್ಯೆ ಕಮಲ ನಿಧನ

Suddi Udaya

ನಾಲ್ಕೂರು ಬೋವಾಡಿ ದೈವಸ್ಥಾನದಲ್ಲಿ ದೊಂಪದ ಬಲಿ ಉತ್ಸವ: ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ಸೆ.12: ಬೆಳ್ತಂಗಡಿ ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನೂತನ ಉಪ ಕಾರ್ಯನಿರ್ವಹಣಾಧಿಕಾರಿಯಾಗಿ ಸುಂದರ ಗೌಡ ನೇಮಕ

Suddi Udaya
error: Content is protected !!