22.8 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನ

ಅಪಘಾತವಾದ ಅಂಬುಲೆನ್ಸ್‌ನಲ್ಲಿ‌ದ್ದ‌ ಗಾಯಾಳು ಮಹಿಳೆ ಸಾವು

ಬೆಳ್ತಂಗಡಿ; ಎರಡು ದಿನಗಳ ಹಿಂದೆ ವಗ್ಗ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಂಬುಲೆನ್ಸ್‌ ಅಪಘಾತದಲ್ಲಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದರೆ, ಅದರಲ್ಲಿ ಗಾಯಾಳುವಾಗಿದ್ದ ಅಳದಂಗಡಿ ಸನಿಹದ ಮಹಿಳೆ ಸೋಮವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.


ಆ ಮೂಲಕ ಸದ್ರಿ ಅಪಘಾತದಲ್ಲಿ‌ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ. ಮೃತ ಮಹಿಳೆಯನ್ನು ಅಳದಂಗಡಿ ಸನಿಹದ ಬಡಗಕಾರಂದೂರು ಗ್ರಾಮದ ಸುಂಕದಕಟ್ಟೆ ನಿವಾಸಿ ದಿವಂಗತ ಹಸನ್ ಅವರ ಪತ್ನಿ ಮರಿಯಮ್ಮ ( 80 ) ಎಂಬವರೆಂದು ಗುರುತಿಸಲಾಗಿದೆ.

ಶುಕ್ರವಾರ ದಿನ ಮಹಿಳೆಗೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಗುರುವಾಯನಕೆರೆ ಅಭಯಾ ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ಇಸಿಜಿ ಸಹಿತ ತುರ್ತು‌ಚಿಕಿತ್ಸೆ ನೀಡಿ, ಹೃದಯನಾಳಗಳಲ್ಲಿ ಬ್ಲಾಕ್ ಇರುವುದದಿಂದ ವೈದ್ಯರು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದ್ದರು. ಅಂತೆಯೇ ಶಬೀರ್ ಅವರ ಆಂಬುಲೆನ್ಸ್‌ ನಲ್ಲಿ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ವಗ್ಗ ಬಳಿ ಅಪಘಾತ ನಡೆದಿತ್ತು. ಈ ವೇಳೆ ಚಾಲಕ ಶಬೀರ್ ತೀವ್ರ ಗಾಯಗೊಂಡು ತುಂಬೆ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದರು.

ಅಪಘಾತದಿಂದ ಮಹಿಳೆಯ ತಲೆಗೆ ಗಾಯ:
ಹೃದಯದ ತೊಂದರೆ ಇದ್ದ ಮಹಿಳೆಗೆ ಅಪಘಾತದ ವೇಳೆ ತಲೆಗೆ ಗಾಯಗಳಾಗಿ ರಕ್ತಸ್ರಾವವಾಗಿತ್ತು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೂ ಅಲ್ಲದೆ ಆ ವೇಳೆ ಅಂಬುಲೆನ್ಸ್‌ನಲ್ಲಿ ಅವರ ಜೊತೆ ಇದ್ದ ಅವರ ಪುತ್ರ ರಝಾಕ್ ಅವರಿಗೆ ಕೈಯ ಮೂಳೆಮುರಿತಕ್ಕೊಳಗಾಗಿದ್ದು ಅವರು ಚಿಕಿತ್ಸೆಯಲ್ಲಿದ್ದಾರೆ.
ಮೃತರು ಇದ್ದ ಓರ್ವ ಪುತ್ರ, ಇಬ್ಬರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

Related posts

ಒಕ್ಕಲಿಗರ ಕ್ರಿಕೆಟ್ ಪಂದ್ಯಾಟ: ಪಟ್ರಮೆ ಬ್ರದರ್ಸ್ ತಂಡ ದ್ವಿತೀಯ ಸ್ಥಾನ

Suddi Udaya

ಶಿಶಿಲ: ‘ವೇದ ಕುಸುಮ’ ಶಿಬಿರ ಸಂಪನ್ನ

Suddi Udaya

ರಾಷ್ಟ್ರೀಯ ಟಾರ್ಗೆಟ್ ಬಾಲ್ ಫೆಡರೇಶನ್ ಕಪ್ ಪಂದ್ಯಾಟ: ರಾಷ್ಟ್ರಮಟ್ಟಕ್ಕೆ ಸೇಕ್ರೆಡ್ ಹಾರ್ಟ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಸಿದ್ದಾರ್ಥ್ ಎಂ. ಸಿ ಆಯ್ಕೆ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ : ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ಸಂಸ್ಕೃತ ಸಂಘ ಮತ್ತು ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಪದಾಧಿಕಾರಿಗಳ ಪದಪ್ರದಾನ

Suddi Udaya

ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್, ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಸಹಯೋಗದಲ್ಲಿ ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ ಕಾರ್ಯಕ್ರಮಕ್ಕೆ ಚಾಲನೆ

Suddi Udaya
error: Content is protected !!