27.7 C
ಪುತ್ತೂರು, ಬೆಳ್ತಂಗಡಿ
April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಕುವೆಟ್ಟು ಸ.ಉ.ಹಿ.ಪ್ರಾ. ಶಾಲೆಯಲ್ಲಿ ಗೀತಾ ಗಾಯನ ಸ್ಪರ್ಧೆ

ಕುವೆಟ್ಟು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟು ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಮಡಂತ್ಯಾರು ಇದರ ವತಿಯಿಂದ ಗೀತಾ ಗಾಯನ ಸ್ಪರ್ಧೆ ಮತ್ತು ಷಡ್ಕನಾಯಕರ ತರಬೇತಿಯ ಉದ್ಘಾಟನಾ ಸಮಾರಂಭ ಆ. 23 ರಂದು ನಡೆಯಿತು.

ಉದ್ಘಾಟನೆಯನ್ನು ಕುವೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ಎಸ್ ಶೆಟ್ಟಿ ನೆರವೇರಿಸಿದರು. ಸಮಾರಂಭದ ಅಧ್ಯಕ್ಷ ಸ್ಥಾನವನ್ನು ಹಾಜಿ ಅಬ್ದುಲ್ ಸಾಹೇಬ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಕುವೆಟ್ಟು ಗ್ರಾ ಪಂ ಸದಸ್ಯರುಗಳಾದ ಸುಮಂಗಲ ಪ್ರಭು, ಸಿಲ್ಬಸ್ಟರ್ ಮೋನಿಸ್ , ಅಮೀನ, ಶಾಲಾ ಎಸ್ ಡಿ ಯಂ ಸಿ ಅಧ್ಯಕ್ಷ ಸಿರಾಜ್ ಚಿಲಿಂಬಿ, ಉದ್ಯಮಿ ಉಮರಬ್ಬ ಮದ್ದಡ್ಕ, ಗೋವಿಂದ ಭಟ್, ಹಿರಿಯ ವಿದ್ಯಾರ್ಥಿ ಧನಂಜಯ ಆಲಂದಿಲ, ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಫಿಲೋಮಿನಾ ಲೋಬೊ, ಸ್ಕೌಟ್ ಗೈಡ್ ಸ್ಥಳೀಯ ಸಂಸ್ಥೆ ಇದರ ಕಾರ್ಯದರ್ಶಿ ಶಾಂತರಾಮ ಪ್ರಭು, ಕೋಶಾಧಿಕಾರಿ ಸುಜಾತ ಉಪಸ್ಥಿತರಿದ್ದರು.

ಗೈಡ್ ಕ್ಯಾಪ್ಟನ್ ಪೂರ್ಣಿಮಾ ಸ್ವಾಗತಿಸಿ, ಕೋಶಾಧಿಕಾರಿ ಸುಜಾತ ಧನ್ಯವಾದ ನೀಡಿದರು. ಪುಂಜಾಲಕಟ್ಟೆ ಸ್ಕೌಟ್ ಮಾಸ್ಟರ್ ಧರಣೇಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.

Related posts

ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮ್ ಅವರ ಚುನಾವಣಾ ಕಚೇರಿ ಉದ್ಘಾಟನೆ

Suddi Udaya

ಎಸ್ ಎಸ್ ಎಲ್ ಸಿ ಫಲಿತಾಂಶ: ಕಾಶಿಪಟ್ಣ ಸರಕಾರಿ ಪ್ರೌಢಶಾಲೆಗೆ ಶೇ.100 ಫಲಿತಾಂಶ

Suddi Udaya

ಕೊಡಗು ವಿವಿ ಸಿಂಡಿಕೇಟ್ ಸೆನೆಟ್ ಸದಸ್ಯರಾಗಿ ಕೆ.ಎನ್.ಜನಾರ್ಧನರವರ ನೇಮಕ: ಸಿರಿ ಸಂಸ್ಥೆಯಲ್ಲಿ ವಿಶೇಷ ಅಭಿನಂದನಾ ಕಾರ್ಯಕ್ರಮ

Suddi Udaya

ವೇಣೂರು: ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಕಂಬಳ ಕೂಟದ ಪೂರ್ವಭಾವಿ ಸಭೆ

Suddi Udaya

ಶಿಬಾಜೆ ಭಂಡಿಹೊಳೆಯಲ್ಲಿ ಪ್ರಕೃತಿ ಪ್ರಿಯರಿಂದ ರಸ್ತೆ ಸ್ವಚ್ಛತಾ ಅಭಿಯಾನ

Suddi Udaya

ಬಳಂಜ ಸ.ಉ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ

Suddi Udaya
error: Content is protected !!