ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ನೂತನ ಕಟ್ಟಡ ‘ಸುರಭಿ’ ಉದ್ಘಾಟನೆ

Suddi Udaya

ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಇದರ ನೂತನ ಕಟ್ಟಡ ‘ಸುರಭಿ’ಯ ಉದ್ಘಾಟನೆ ಆ.23 ರಂದು ಸುಲ್ಕೇರಿಯಲ್ಲಿ ನಡೆಯಿತು.
ನೂತನ ಕಟ್ಟಡದ ಉದ್ಘಾಟನೆಯನ್ನು, ದ.ಕ.ಸ.ಹಾ ಒಕ್ಕೂಟ, ಮಂಗಳೂರು ಅಧ್ಯಕ್ಷರು ಕೆ.ಪಿ. ಸುಚರಿತ ಶೆಟ್ಟಿ ನೆರವೇರಿಸಿದರು.


ಪಶು ಆಹಾರ ಗೋದಾಮು ಉದ್ಘಾಟನೆಯನ್ನು ದ . ಕ . ಸ . ಹಾ . ಒಕ್ಕೂಟ, ಮಂಗಳೂರು ನಿರ್ದೇಶಕರು ನಿರಂಜನ್ ಬಾವಂತಬೆಟ್ಟು , ವಾಣಿಜ್ಯ ಮಳಿಗೆ ಉದ್ಘಾಟನೆಯನ್ನು ದ .ಕ .ಸ . ಹಾ . ಒಕ್ಕೂಟ ಮಂಗಳೂರು ನಿರ್ದೆಶಕ ಪದ್ಮನಾಭ ಶೆಟ್ಟಿ ಅರ್ಕಜೆ ಹಾಗೂ ಗೋಪೂಜಾ ಗೋದೋಹನ ಕಾರ್ಯಕ್ರಮವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ಮತ್ತು ಶ್ರೀಮತಿ ಮಧುರಾ ಪದ್ಮಪ್ರಸಾದ್ ಅಜಿಲ ರವರು ನೆರವೇರಿಸಿದರು.

ಸಭಾ ಸಮಾರಂಭದ ಉದ್ಘಾಟನೆ ನೆರವೇರಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತಾನಾಡಿ ನೂತನ ಸಂಘದ ಕಟ್ಟಡವಿರುವ ಅಂಗಣಕ್ಕೆ ಇಂಟರ್ ಲಾಕ್ ಅಳವಡಿಸಲು ಸರಕಾರದ ಅನುದಾನದಿಂದ 1 ಲಕ್ಷ ಅನುದಾನ ಮಂಜೂರು ಗೊಳಿಸಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ದ.ಕ.ಸ.ಹಾ. ಒಕ್ಕೂಟ ಮಂಗಳೂರು ನಿರ್ದೇಶಕರಾದ ನಾರಾಯಣ ಪ್ರಕಾಶ್ ಕೆ . , ಶ್ರೀಮತಿ ಸವಿತಾ ಶೆಟ್ಟಿ , ದ.ಕ.ಸ.ಹಾ. ಒಕ್ಕೂಟ ( ನಿ ) , ಮಂಗಳೂರು ವ್ಯವಸ್ಥಾಪಕ ನಿರ್ದೇಶಕ ಡಿ . ಅಶೋಕ , ಶಿವಮೊಗ್ಗ ಕೆ.ಎ.ಎಸ್ ಸ . ಸ . ಜಂಟಿ , ಉಪನಿಬಂಧಕರು , ಡಾ | ನಾಗೇಶ್ ಎಸ್ , ಡೋಂಗ್ರೆ , ಶ್ರೀ ಕ್ಷೇ.ಧ.ಗ್ರಾ.ಯೋ. ಕ್ಷೇತ್ರ ಯೋಜನಾಧಿಕಾರಿ ದಯಾನಂದ ಪೂಜಾರಿ , ಸುಲ್ಕೇರಿ ಗ್ರಾ.ಪಂ.ಅಧ್ಯಕ್ಷೆ ಗಿರಿಜಾ , ಸುಲ್ಕೇರಿ ಗ್ರಾ . ಪಂ . ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ , ಶೇಖರಣೆ ಮತ್ತು ತಾಂತ್ರಿಕ ವಿಭಾಗ , ದ . ಕ . ಸ . ಹಾ ಒಕ್ಕೂಟ ಮಂಗಳೂರು ವ್ಯವಸ್ಥಾಪಕರು ಡಾ | ರಾಮಕೃಷ್ಣ ಭಟ್ , ದ.ಕ.ಸ.ಹಾ. ಒಕ್ಕೂಟ , ಮಂಗಳೂರು ಉಪವ್ಯವಸ್ಥಾಪಕರು ಡಾ | ಡಿ.ಆರ್ ಸತೀಶ್ ರಾವ್ , ಎನ್ ., ನಾರಾವಿ , ವ್ಯ . ಸ .ಸಂಘ ಅಧ್ಯಕ್ಷ ಸುಧಾಕರ ಭಂಡಾರಿ , ನಾರಾವಿ , ವ್ಯ.ಸ.ಬ್ಯಾಂಕ್, ಉಪಾಧ್ಯಕ್ಷ ಸದಾನಂದ ಗೌಡ ,ಸುಲ್ಕೇರಿ ಮಹಾಮ್ಮಾಯಿ ಮಾರಿಗುಡಿ ಅಧ್ಯಕ್ಷ ವಸಂತ ಪೂಜಾರಿ , ಸುಲ್ಕೇರಿ ಶ್ರೀರಾಮ ಶಾಲೆ ಅಧ್ಯಕ್ಷ ರಾಜು ಪೂಜಾರಿ , ಬೆಳ್ತಂಗಡಿ ವಿಸ್ತರಣಾಧಿಕಾರಿ ಶ್ರೀಮತಿ ಸುಚಿತ್ರ ಭಾಗವಹಿಸಿದ್ದರು.


ಸಂಘದ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಗೋರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕುಮಾರಿ ಸತ್ಯಶ್ರೀ ಜೈನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಘದ ಪ್ರಗತಿ ವರದಿ ವಾಚಿಸಿದರು. ಸಂಘದ ಉಪಾಧ್ಯಕ್ಷೆ ಪುಷ್ಪಾವತಿ ಎನ್ ಯೋಗಕ್ಷೇಮ ನಾವರ ಸ್ವಾಗತಿಸಿದರು. ನಿರೀಕ್ಷಾ ಯೋಗ ಕ್ಷೇಮ ನಾವರ ಮತ್ತು ಗೋರೆ ಕಾರ್ಯಕ್ರಮ ನಿರ್ವಹಿಸಿದರು

ಸುಲ್ಕೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಆಡಳಿತ ಮಂಡಳಿ ಸದಸ್ಯರು , ಸಿಬ್ಬಂದಿ ವರ್ಗ ಮತ್ತು ಸರ್ವ ಸದಸ್ಯರು ಹಾಗೂ ವಿವಿಧ ಸಹಕಾರಿ ಸಂಘಗಳ ಅಧ್ಯಕ್ಷರು, ಗ್ರಾ.ಪಂ ಸದಸ್ಯರು, ಪ್ರಗತಿ ಬಂಧು ಒಕ್ಕೂಟ, ಜನಜಾಗೃತಿ ನಾರಾವಿ ವಲಯದ ಅಧ್ಯಕ್ಷ ನಿತ್ಯಾನಂದ ನಾವರ, ಉಪಸ್ಥಿತರಿದ್ದರು.

Leave a Comment

error: Content is protected !!