ಬೆಂಗಳೂರು: ಚಂದ್ರಯಾನ 3 ಯೋಜನೆಯ ಭಾಗವಾಗಿರುವ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದು ಇತಿಹಾಸ ಸೃಷ್ಟಿಸಿದೆ.
ಚಂದ್ರಯಾನ-3 ಚಂದ್ರನ ದಕ್ಷಿಣ ಧೃವವನ್ನು ತಲುಪಿದೆ. ಈ ಮೂಲಕ ಚಂದ್ರನ ದಕ್ಷಿಣ ಧ್ರುವ ಪ್ರವೇಶಿಸಿದ ಮೊದಲ ದೇಶವಾಗಿ ಭಾರತ ಗುರುತಿಸಿಕೊಂಡಿದೆ.
ಚಂದ್ರಯಾನ – 3ರ ಕೊನೆಯ ಅವಧಿಯನ್ನು ಇಸ್ರೋ ಆತಂಕದ 17 ನಿಮಿಷ” ಎಂದು ಕರೆದಿತ್ತು. ಆದರೆ ಈ ಆತಂಕದ ಕೊನೆಯ ನಿಮಿಷಗಳನ್ನು ಗೆಲ್ಲುವಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿದೆ. ಭಾರತದ ಧ್ವಜವನ್ನು ಚಂದ್ರನಲ್ಲಿ ಹಾರಿಸಿದೆ. ದೇಶ, ವಿದೇಶದಲ್ಲೂ ಸಂತಸ ಮನೆ ಮಾಡಿದೆ