September 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಧರ್ಮಸ್ಥಳ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ವಿಶ್ವ ಸಂಗೀತ ದಿನಾಚರಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವಸಂಖ್ಯಾತ ದಿನಾಚರಣೆಯನ್ನು ನಡೆಸಲಾಯಿತು.

ಧರ್ಮಸ್ಥಳ ದೇವಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ದಾನಿಗಳು ನೀಡಿದ ತಬಲವನ್ನು ತಬಲ ಗುರುಗಳಾದ ವಿನಾಯಕ ಬಾಳಿಗ, ಹಾರ್ಮೋನಿಯಂ ಅನ್ನು ಲಕ್ಷ್ಮೀನಾರಾಯಣ ರಾವ್ ಹಾಗೂ ಕೀ ಬೋರ್ಡ್ ಇದನ್ನು ಶಾಲಾ ಸಂಚಾಲಕ ಅನಂತಪದ್ಮನಾಭ ಭಟ್ ನುಡಿಸುವುದರ ಮೂಲಕ ಮುಂಬರುವ ದಿನಗಳಲ್ಲಿ ಪಕ್ಕ ವಾದ್ಯಗಳ ತರಬೇತಿಗಳಿಗೂ ಸಹ ವಿದ್ಯುಕ್ತ ಚಾಲನೆಯನ್ನು ನೀಡಿದರು.

ಬಳಿಕ ಮಾತನಾಡಿದ ಅವರುಗಳು ವಿದ್ಯಾರ್ಥಿ ಜೀವನದಲ್ಲಿ ಸಂಗೀತದ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮಹತ್ವವನ್ನು, ಓದಿನ ಜೊತೆಗಿನ ಇಂತಹ ಚಟುವಟಿಕೆಗಳು ಆಧುನಿಕ ಜಗತ್ತಿಗೆ ಯಾಕೆ ಬೇಕು ವಿಚಾರಗಳನ್ನು ವಿವರಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಂಗೀತ ಕಚೇರಿ ಕೊಳಲು ವಾದನ ಹಾಗೂ ಕೀಬೋರ್ಡ್ ನುಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆ ಮೂಲಕ ವಿಶ್ವ ಸಂಗೀತ ದಿನವನ್ನು ಆಚರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಲ್ಲಿನಾಥ್ ಜೈನ್, ಶಂಬು ಶಂಕರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ. ಅವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವಕ್ಕೆ ಚಾಲನೆ: ಗೊನೆ ಮುಹೂರ್ತ, ತೋರಣ ಮುಹೂರ್ತ, ನವಕಕಲಶ, ಧ್ವಜಾರೋಹಣ

Suddi Udaya

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

Suddi Udaya

ಧಾರಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸೇತುವೆಯಿಲ್ಲದೆ ಶಿಶಿಲ- ಒಟ್ಲ ಭಾಗದ ಜನರಿಗೆ ಸಂಕಷ್ಟ: ಸೇತುವೆ ನಿರ್ಮಾಣಕ್ಕೆ ಒಟ್ಲ ಭಾಗದ ಜನರ ಒತ್ತಾಯ

Suddi Udaya

ಇಂದಬೆಟ್ಟು : ಮಾತೃಶ್ರೀ ಮುಗೇರ ಸೇವಾ ಸಂಘದಿಂದ ಪುಸ್ತಕ ವಿತರಣೆ

Suddi Udaya

ಪಡ್ಡ೦ದಡ್ಕ ನುರುಲ್ ಹುದಾ ಮಸೀದಿ ಆದೀನದಲ್ಲಿರುವ ಮುನವಿರುಲ್ ಇಸ್ಲಾಂ ಮದರಸದ ರಕ್ಷಕರ ಸಭೆ

Suddi Udaya

ಜಿಲ್ಲಾ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ಕ್ರೀಡೋತ್ಸವ: ನಡ ಸರಕಾರಿ ಪದವಿ ಪೂರ್ವ ಕಾಲೇಜು ರೇಂಜರ್ಸ್ ವಿದ್ಯಾರ್ಥಿಗಳಿಗೆ ಬಹುಮಾನ

Suddi Udaya
error: Content is protected !!