April 2, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿವರದಿ

ಕಳಿಯ ಪರಪ್ಪು ಬಸ್ಸು ನಿಲ್ದಾಣದ ರಸ್ತೆ ಬದಿಯಲ್ಲಿ ಸತ್ತ ದನವನ್ನು ಎಸೆದು ಹೋದ ಅಕ್ರಮ ದನ ಕಳ್ಳ ಸಾಗಾಟಗಾರರು

ಗೇರುಕಟ್ಟೆ: ಆ.24ರಂದು ಬೆಳಗ್ಗಿನ ಜಾವ ಯಾರೋ ಅಕ್ರಮ ದನ ಸಾಗಾಟಗಾರರು ಕಳಿಯ ಗ್ರಾಮದ ಪರಪ್ಪು ಬಸ್ಸು ನಿಲ್ದಾಣದ ಸ್ವಲ್ಪ ಮುಂದೆ ಗುರುವಾಯನಕೆರೆ ಉಪ್ಪಿನಂಗಡಿ ರಸ್ತೆ ಬದಿಯಲ್ಲಿ ಸಾಗಾಟ ಮಾಡುವಾಗ ಸತ್ತುಹೋಗಿದ್ದ ದನವನ್ನು ಎಸೆದು ಹೋದ ಘಟನೆ ವರದಿಯಾಗಿದೆ.


ಈ ಪ್ರದೇಶದಲ್ಲಿ ಅಕ್ರಮ ದನ ಸಾಗಾಟವು ವ್ಯಾಪಕವಾಗಿ ನಡೆಯುತ್ತಿದೆಯೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಪೋಲಿಸ್ ಇಲಾಖೆಯು ಕೂಡಲೇ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ವಹಿಸುವಂತೆ ಹಾಗೂ ಅವ್ಯಾಹತವಾಗಿ ಅಕ್ರಮ ದನ ಸಾಗಾಟ ಮಾಡುತ್ತಿರುವವರನ್ನು ತಡೆಗಟ್ಟುವಂತೆ ಆಗ್ರಹಿಸುತ್ತಿದ್ದಾರೆ.


ವಿಷಯ ತಿಳಿದ ಬೆಳ್ತಂಗಡಿ ಠಾಣಾ ಉಪನಿರೀಕ್ಷಕರಾದ ಧನರಾಜ್ ಮಾರ್ಗದರ್ಶನದಂತೆ ಕಳಿಯ ಬೀಟ್ ಪೊಲೀಸರಾದ ಚರಣ್ ಕೂಡಲೇ ಸ್ಥಳ ಪರಿಶೀಲನೆ ನಡೆಸಿದರು.

ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ ಲತೀಫ್ ಪರಿಮ, ಮರೀಟಾ ಪಿಂಟೋ ಮತ್ತು ಸಾರ್ವಜನಿಕರು ಸ್ಥಳ ಪರಿಶೀಲನೆ ಮಾಡಿದರು.

Related posts

ಜು.28: ಬೆಳ್ತಂಗಡಿ ತುಳುನಾಡ ಒಕ್ಕೂಟದ ವತಿಯಿಂದ ಚೆನ್ನೆಮಣೆ ಗೊಬ್ಬು ಹಾಗೂ ಸಂಧಿ ಪಾರ್ದನ ಸುಗ್ಗಿಪು

Suddi Udaya

ತುಳುನಾಡ್ ಜವಾನೆರ್ ವೇಣೂರು ಮತ್ತು ಗೋಳಿಯಂಗಡಿ ಕೇದಗೆ ಯುವಕೇಸರಿ ಫ್ರೆಂಡ್ಸ್ ಕ್ಲಬ್‌ನಿಂದ ಪುಸ್ತಕ ವಿತರಣೆ

Suddi Udaya

ಕುರಾಯ ಶ್ರೀ ಸದಾಶಿವ ದೇವಸ್ಥಾನದಲ್ಲಿ, ಜಾತ್ರೋತ್ಸವದ ಪ್ರಯುಕ್ತ ಶ್ರಮದಾನ

Suddi Udaya

ಉಜಿರೆ: ಪೆರ್ಲ ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಸಮರ ಸನ್ನಾಹ ತಾಳಮದ್ದಳೆ

Suddi Udaya

ಜ್ಯೋತಿ ಆಸ್ಪತ್ರೆಗೆ ಆಳ್ವಾಸ್ ಕಾಲೇಜು ಅಡ್ಮಿಸ್ರಶನ್ ವಿಭಾಗದ ವಿದ್ಯಾರ್ಥಿಗಳು ಭೇಟಿ

Suddi Udaya
error: Content is protected !!