April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ದ.ಕ. ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘದ ಮಹಾಸಭೆ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಸಂಘ ಬೆಳ್ತಂಗಡಿ ಇದರ ೧೪ನೇ ವರ್ಷದ ಮಹಾಸಭೆಯು ಅಳದಂಗಡಿ ದೀಪಾ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳ್ತಂಗಡಿ ಧನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ಚಂದ್ರಶೇಖರ ಎಂ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಜಿಲ್ಲಾ ಧ್ವನಿವರ್ಧಕ ಮತ್ತು ದೀಪಾಲಂಕಾರ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ಗೌರವ ಅಧ್ಯಕ್ಷ ಸುನಿಲ್ ಲೋಬೋ, ಉಪಾಧ್ಯಕ್ಷರಾದ ಜೋಸೆಫ್ ಕೆ. ಡಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜೀವ ಬಿ. ಯಚ್, ತಾಲೂಕು ಶಾಮಿಯಾನ ಸಂಘದ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ, ಕಾರ್ಯದರ್ಶಿ ವಸಂತ್ ನಾವೂರು ಹಾಗೂ ಕ್ರೀಡಾ ಕಾರ್ಯದರ್ಶಿ ಮಹಮ್ಮದ್ ಸಮೀರ್ ಹಾಜರಿದ್ದರು.
ಸಂಘದ ಹಿರಿಯ ಸದಸ್ಯರಾದ ಲಕ್ಷ್ಮಣ್, ಜೋಸೆಫ್ ಕೆ. ಡಿ, ನಾರಾಯಣ ಗೌಡ ಇವರಿಗೆ ಸಂಘದ ವತಿಯಿಂದ ಸನ್ಮಾನ ಕಾರ್ಯಕ್ರಮ ನಡೆಯಿತು.


ಬಳಿಕ ಜಿಲ್ಲಾ ಸಂಘದ ಅಧ್ಯಕ್ಷ ರಾಜಶೇಖರ ಶೆಟ್ಟಿ ಮಾತಾಡಿ ಜಿಲ್ಲಾ ಸಂಘವು ತಾಲೂಕಿನ ಸಂಘದ ಜೊತೆ ಯಾವತ್ತೂ ಇರುವುದರ ಜೊತೆಗೆ ತಾಲೂಕು ಸಂಘಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ತಾಲೂಕು ಸಂಘ ಅಧ್ಯಕ್ಷ ಚಂದ್ರಶೇಖರ ಎಂ ಮಾತಾಡಿ ಪ್ರತಿಯೊಬ್ಬ ಸದಸ್ಯನೂ ಕಡ್ಡಾಯವಾಗಿ ಸಂಘದ ಸದಸ್ಯತ್ವ ಪಡೆಯಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಲೀಕರಿಂದ ಕೆಲಸಗಾರರಿಗೆ ಪೋಸ್ಟಲ್ ಇನ್ಸೂರೆನ್ಸ್ ಮಾಡಿ ಕೊಡಲಾಯಿತು.
ಗುರುದೇವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ ಕಾರ್ಯಕ್ರಮ ಆರಂಭವಾಯಿತು. ಉಪಾಧ್ಯಕ್ಷರಾದ ಜೋಸೆಫ್ ಕೆ.ಡಿ ಸ್ವಾಗತಿಸಿದರು. ಕೋಶಾಧಿಕಾರಿ ರೋಹಿತ್ ಕುಮಾರ್ ಲೆಕ್ಕಾಚಾರ ಮಂಡಿಸಿದರು. ಕಾರ್ಯದರ್ಶಿ ವಸಂತ್ ನಾವೂರು ಸಂಘದ ವಾರ್ಷಿಕ ವರದಿ ವಾಚಿಸಿದರು. ಸದಸ್ಯರಾದ ಮಾಥುಕುಟ್ಟಿ ಧನ್ಯವಾದವನ್ನಿತ್ತರು.

Related posts

ಉಜಿರೆ: ಎಸ್.ಡಿ.ಎಂ. ಐ.ಟಿ. ಗ್ರಂಥಪಾಲಕರಿಗಾಗಿ ಒಂದು ದಿನದ ಕಾರ್ಯಾಗಾರ

Suddi Udaya

ಮೂರು ದಿನದ ಅಂತರದಲ್ಲಿ ಸಹೋದರರಿಬ್ಬರ ಸಾವು

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ: ನಿಟ್ಟಡೆ ಕುಂಭಶ್ರೀ ವಿದ್ಯಾಸಂಸ್ಥೆ ಚಾಂಪಿಯನ್

Suddi Udaya

ಡಿ.27-28: ಬರೆಂಗಾಯ ಸ.ಉ.ಹಿ.ಪ್ರಾ ಶಾಲಾ ಅಮೃತ ಮಹೋತ್ಸವ

Suddi Udaya

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ

Suddi Udaya

ಬಂದಾರು: ಮಾನಸಿಕ ಅಸ್ವಸ್ಥರಾದ ವೇದಾವತಿರವರನ್ನು ಗುಂಡೂರಿ ಸೇವಾಶ್ರಮಕ್ಕೆ ಸೇರ್ಪಡೆ

Suddi Udaya
error: Content is protected !!