24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

ಬೆಳ್ತಂಗಡಿ: ಜೆಸಿಐ ಬೈಂದೂರು ಆತಿಥ್ಯದಲ್ಲಿ ನಡೆದ ವಲಯದ ಮಹಿಳಾ ಮತ್ತು ಜೂನಿಯರ್ ಜೆಸಿ ಸಮ್ಮೇಳನದಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ಹಲವಾರು ಪ್ರಶಸ್ತಿ, ಮನ್ನಣೆಗಳು ದೊರಕಿದೆ.

ಮಹಿಳಾ ವಿಭಾಗ ಮತ್ತು ಜ್ಯೂನಿಯರ್ ಜೆಸಿ ವಿಭಾಗದಿಂದ ಈ ವರ್ಷ ನಡೆದ ಕಾರ್ಯಕ್ರಮಗಳನ್ನ ಗಣನೆಗೆ ತೆಗೆದುಕ್ಕೊಂಡು ಈ ಪ್ರಶಸ್ತಿಗಳನ್ನ ನೀಡಲಾಗಿದ್ದು ಮಹಿಳಾ ವಿಭಾಗಕ್ಕೆ ಟಾಪ್ – 4 ಘಟಕ ಪ್ರಶಸ್ತಿ, ಜೆಸಿಐ ಬೆಳ್ತಂಗಡಿ ಘಟಕದ ಮಹಿಳಾ ಸಂಯೋಜಕಿ ಮಮಿತಾ ಸುಧೀರ್ ಗೆ ಟಾಪ್ – 2 ಪ್ರಶಸ್ತಿ ಲಭಿಸಿದೆ.

ಘಟಕದ ಜೂನಿಯರ್ ಜೆಸಿ ವಿಭಾಗಕ್ಕೆ ಟಾಪ್- 5 ಘಟಕಾಧ್ಯಕ್ಷ ಪ್ರಶಸ್ತಿ, ರಾಷ್ಟ್ರೀಯ ಕಾರ್ಯಕ್ರಮ ಜೂನಿಯರ್ ಜೆಸಿ ಸಪ್ತಾಹ ಯಶಸ್ವಿ ಆಯೋಜನೆಗಾಗಿ ಜೂನಿಯರ್ ಜೆಸಿ ಅಧ್ಯಕ್ಷ ರಾಮಕೃಷ್ಣ ಶರ್ಮಾ ವಿಶೇಷ ಮನ್ನಣೆಗೆ ಪಾತ್ರವಾದರು.

ಸಮ್ಮೇಳನದಲ್ಲಿ ಜೂನಿಯರ್ ಜೆಸಿಗಳಿಗೆ ಆಯೋಜಿಸಲಾದ ಪಿಕ್ ಅಂಡ್ ಆಕ್ಟ್ ಸ್ಪರ್ಧೆಯಲ್ಲಿ ಉಜ್ವಲ್ ದ್ವಿತೀಯ ಸ್ಥಾನ, ಡ್ಯಾನ್ಸಿಂಗ್ ಸ್ಟಾರ್ಸ್ ಸ್ಪರ್ಧೆಯಲ್ಲಿ ಘಟಕ ದ್ವಿತೀಯ ಸ್ಥಾನ ಪಡೆದಿದೆ‌.

ಜೆಸಿಐ ಭಾರತಕ್ಕೆ ವಿದ್ಯಾದಾನಕ್ಕೆ ದೇಣಿಗೆ ನೀಡಿದ ಘಟಕದ ಪೂರ್ವಾಧ್ಯಕ್ಷ ಮತ್ತು ವಲಯದ ನಿರ್ದೇಶಕ ಸ್ವರೂಪ್ ಶೇಖರ್ ರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ವಲಯದ ಪ್ರಥಮ ಕಾರ್ಯಕ್ರಮ ಸ್ವಾಗತ್ ಆಯೋಜನೆಗಾಗಿ ಘಟಕಾಧ್ಯಕ್ಷ ಶಂಕರ್ ರಾವ್ ರನ್ನು ಗೌರವಿಸಲಾಯಿತು.

ಕಾರ್ಯದರ್ಶಿ ಸುಧೀರ್ ಕೆ. ಎನ್, ಉಪಾಧ್ಯಕ್ಷ ಪ್ರೀತಮ್ ಶೆಟ್ಟಿ, ಸದಸ್ಯರುಗಳಾದ ಶೈಲೇಶ್, ಪಿ. ಎಲ್ ಪ್ರಜ್ವಲ್, ವಿನಾಯಕ ಪ್ರಸಾದ್ ಮತ್ತು ರಶ್ಮಿ, ಜೂನಿಯರ್ ಜೆಸಿ ಸದಸ್ಯರು ಗಳಾದ ಕನ್ನಿಕಾ, ದೀಪ್ತಿ, ತ್ರಿಷ, ನೇವಿಲ್ ಮೋರಸ್, ವರ್ಷ ಶೆಟ್ಟಿ, ತೇಜಸ್, ಸಮನ್ವಿತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Related posts

ಬಾರ್ಯ ಗ್ರಾ.ಪಂ. ಅಧ್ಯಕ್ಷರಾಗಿ ಉಸ್ಮಾನ್, ಉಪಾಧ್ಯಕ್ಷರಾಗಿ ಯಶೋಧ ಶೆಟ್ಟಿ ಆಯ್ಕೆ

Suddi Udaya

ಗುರುವಾಯನಕೆರೆ: ಎಕ್ಸೆಲ್ ಕಾಲೇಜಿನಲ್ಲಿ ಅಕ್ಷರೋತ್ಸವ

Suddi Udaya

ಇಂದಬೆಟ್ಟು : ಕಜೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ಬಾಲಮೇಳ ಕಾರ್ಯಕ್ರಮ

Suddi Udaya

ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕುಕ್ಕೇಡಿ ಶಾಲೆಗೆ ಪ್ರಶಸ್ತಿ

Suddi Udaya

ಗೇರುಕಟ್ಟೆ: ಕೊರಂಜ ನಿವಾಸಿ ದೇವಕಿ ಆಳ್ವ ನಿಧನ

Suddi Udaya

ವಾಣಿ ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya
error: Content is protected !!