ಅಳದಂಗಡಿ : 20ನೇ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ, ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಳದಂಗಡಿ ಇದರ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಡಗಕಾರಂದೂರು, ಸಾಧನ ಜ್ಞಾನವಿಕಾಸ ಕೇಂದ್ರ ಮತ್ತು ಜನಜಾಗೃತಿ ಗ್ರಾಮ ಸಮಿತಿ, ಹಾಗೂ ಶ್ರೀ ಸೋಮನಾಥೇಶ್ವರಿ ಭಜನಾ ಮಂಡಳಿ, ಬಡಗಕಾರಂದೂರು ಇವುಗಳ ಸಹಕಾರದೊಂದಿಗೆ ನಡೆಯಿತು.
ಶ್ರೀ ಸೋಮನಾಥೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಪ್ರಕಾಶ್ ಹೊಳ್ಳರವರ ನೇತ್ರತ್ವ ದಲ್ಲಿ ಪೂಜಾ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು. ಶ್ರೀ ಸೋಮನಾಥೇಶೢರಿ ಭಜನಾ ಮಂಡಲಿ ಅಳದಂಗಡಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕೆ.ವಿ,ಭಟ್ ನಾಳ ಬೆಳ್ತಂಗಡಿ ಧಾರ್ಮಿಕ ಉಪನ್ಯಾಸವನ್ನು ನೀಡಿ ತಾಯಂದಿರು ಮಕ್ಕಳನ್ನು ಯಾವ ರೀತಿ ನೈತಿಕ ಶಿಕ್ಷಣ ನೀಡಿ ಸಾಕಬೇಕು ಎಂಬುದನ್ನು ಸವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷ ರಾಗಿ ಶ್ರೀಮತಿ ಮೀರಾ ನಿತ್ಯಾನಂದ ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಾ. ಕೃ.ಪ.ಸಹಕಾರ ಸಂಘ ಅಳದಂಗಡಿ. ಮುಖ್ಯ ಅತಿಥಿಯಾಗಿ ಯೋಜನಾಧಿಕಾರಿಗಳು ದಯಾನಂದ ಪೂಜಾರಿ, ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ,ಬಿ.ಸಿ.ಟ್ರಸ್ಟ್ ಗುರುವಾಯನಕೆರೆ .ರವರು ಶ್ರೀ ವರಮಹಾಲಕ್ಷ್ಮಿ ವೃತ ಪೂಜೆ ಮಹತ್ವ ದ ಬಗ್ಗೆ ಮಾತನಾಡಿದರು.ವೇದಿಕೆ ಯಲ್ಲಿ ಶ್ರೀ ನಾರಾಯಣ ಸಾಲಿಯಾನ್ ವಲಯ ಜನಜಾಗ್ರ್ರತಿ ಅಧ್ಯಕ್ಷರು, ಶ್ರೀಮತಿ ರೂಪಾ ವಿಶ್ವನಾಥ, ಅಧ್ಯಕ್ಷರು ಶ್ರೀ ವರಮಹಾಲಕ್ಷ್ಮಿ ಪೂಜೆ ಸಮಿತಿ, ಬಡಗಕಾರಂದೂರು, ಶ್ರೀ ಮಂಜುನಾಥ ಆಚಾರ್ಯ, ಎ ಒಕ್ಕೂಟ ಅಧ್ಯಕ್ಷರು ಬಡಗಕಾರಂದೂರು, ಶ್ರೀ ಹರೀಶ್ ಆಚಾರ್ಯ, ಬಿ ಒಕ್ಕೂಟ ಅಧ್ಯಕ್ಷರು ಬಡಗಕಾರಂದೂರು. ಉಪಸ್ತಿತರಿದ್ದರು. ಎ ಒಕ್ಕೂಟ ಅಧ್ಯಕ್ಷರು ಶ್ರೀ ಮಂಜುನಾಥ ಆಚಾರ್ಯ ಸ್ವಾಗತಿಸಿದರು,ಸೇವಾಫ್ರತಿನಿಧಿ ಶ್ರೀಮತಿ ಹೇಮಲತ ವರದಿ ವಾಚಿಸಿದರು, ಶ್ರೀ ಹರೀಶ್ ಆಚಾರ್ಯ ಧನ್ಯವಾದವಿತ್ತರು.