
ಬೆಳ್ತಂಗಡಿ : ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜನ್ಮದಿನಾಚರಣೆ ಪ್ರಯುಕ್ತ ಗುರುಜಯಂತಿ ಕಾರ್ಯಕ್ರಮವು ಆ.31 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಕೆ ಬಂಗೇರ ಕಾಶಿಪಟ್ಣ ,ಕೆ.ಎಮ್ ನಾಗೇಶ್ ಕುಮಾರ್ ಗೌಡ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಪೀತಾಂಬರ ಹೇರಾಜೆ, ಪ್ರಮುಖರಾದ ಭಗೀರಥ ಜಿ, ಸಂತೋಷ್ ಕುಮಾರ್ ,ಪಿ.ಟಿ ಸೆಬಾಸ್ಟಿಯನ್, ನಮಿತ ಪೂಜಾರಿ ಹಾಗೂ ಪಕ್ಷದ ಪ್ರಮುಖರು ,ಕಾರ್ಯಕರ್ತರು ಉಪಸ್ಥಿತರಿದ್ದರು.

ಬ್ಲಾಕ್ ಕಾಂಗ್ರೆಸ್ಸಿನ ನಗರ ಮತ್ತು ಗ್ರಾಮೀಣ ಅಧ್ಯಕ್ಷರುಗಳನ್ನು ಹೆರಾಜೆ ಕುಟುಂಬಸ್ಥರ ಪರವಾಗಿ ಪೀತಾಂಬರ ಹೆರಾಜೆ ಅವರು ಅಭಿನಂದಿಸಿದರು.

ಪದ್ಮನಾಭ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿ ,ಹರೀಶ್ ಸಾಲಿಯಾನ್ ವಂದಿಸಿದರು.