25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕನ್ಯಾಡಿಯ ಶ್ರೀ ಗುರುದೇವ ಮಠದಲ್ಲಿ 169ನೇ ವಷ೯ದ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಬೆಳ್ತಂಗಡಿ: ರಾಷ್ಟ್ರೀಯ ಹಬ್ಬ ಹಾಗೂ ಮಹಾಪುರುಷರ ಜಯಂತಿ ಆಚರಣೆ ತಾಲೂಕು ಸಮಿತಿ ಆಶ್ರಯದಲ್ಲಿ ಕಲ್ಮಂಜದ ಕನ್ಯಾಡಿಯ ಶ್ರೀ ಗುರುದೇವ ಮಠದಲ್ಲಿ ಆ .31ರಂದು ಪೂರ್ವಾಹ್ನ ಬ್ರಹ್ಮಶ್ರೀ ನಾರಾಯಣ ಗುರುಗಳ 169 ನೇ ಜಯಂತಿಯನ್ನು ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಜರುಗಿತು.
ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು .
ತಹಸೀಲ್ದಾರ್ ಟಿ. ಸುರೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪೃಥ್ವಿಸ್ ಧಮ೯ಸ್ಥಳ ದಿನದ ಮಹತ್ವದ ಬಗ್ಗೆ ಮಾತನಾಡಿದರು.


ವೇದಿಕೆಯಲ್ಲಿ ಸಕ೯ಲ್ ಇನ್ಸ್ಪೆಕ್ಟರ್ ನಾಗೇಶ್ ಕದ್ರಿ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಜಯಂತ ಕೋಟ್ಯಾನ್, ನ.ಪಂ ಮುಖ್ಯಾಧಿಕಾರಿ ರಾಜೇಶ್, ಎಡಿಎಲ್ಆರ್ ರೇಣುಕಾ ಪ್ರಸಾದ್, ಚಾತುರ್ಮಾಸ್ಯ ಸಮಿತಿಯ ಸದಾನಂದ ಪೂಜಾರಿ, ಸಹಕಾರಿ ಅಭಿವೃದ್ಧಿ ಅಧಿಕಾರಿ ಸುಪ್ರತಿ ಉಪಸ್ಥಿತರಿದ್ದರು.‌

ತಹಶೀಲ್ದಾರ್ ಸ್ವಾಗತಿಸಿದರು. ಸತ್ಯವತಿ ಕಾಯ೯ಕ್ರಮ ನಿರೂಪಿಸಿದರು. ತಾಲೂಕಿನ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ, ಸದಸ್ಯರು ಹಾಗೂ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು .

Related posts

ಅವೈಜ್ಞಾನಿಕ ಹಾಗೂ ಜನಹಿತಪರವಲ್ಲದ ಕಸ್ತೂರಿರಂಗನ್ ವರದಿ ತಡೆಹಿಡಿದು ವಜಾಮಾಡುವ ತನಕ ಹೋರಾಟವನ್ನು ಮುನ್ನಡೆಸೋಣ : ಫಾ| ಸುನಿಲ್ ಐಸಕ್ ಬೆಂಬಲ

Suddi Udaya

ಬಳಂಜ: ಮುಡಾಯಿಬೆಟ್ಟು ನಿವಾಸಿ ಲಲಿತ ನಿಧನ

Suddi Udaya

ಲಾಯಿಲ ದೊಂಪದ ಬಲಿ ಉತ್ಸವ

Suddi Udaya

ಬೆಳ್ತಂಗಡಿ ಬಿಷಪ್ ಲಾರೆನ್ಸ್ ಮುಕ್ಕುಯಿ ಅವರಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೋರಿದ ಶಾಸಕ ಹರೀಶ್ ಪೂಂಜ

Suddi Udaya

ಕಣಿಯೂರು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಯತೀಶ್ ಶೆಟ್ಟಿ ಪಣೆಕ್ಕರ ಆಯ್ಕೆ

Suddi Udaya

ಬಂಗೇರ ನಿಧನಕ್ಕೆ ಡಾ.ಹೆಗ್ಗಡೆ ಸಂತಾಪ

Suddi Udaya
error: Content is protected !!