April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಣಿ ಕಾಲೇಜು: ಸಮಾನ ನಾಗರಿಕ ಸಂಹಿತೆ ಮಾಹಿತಿ ಉಪನ್ಯಾಸ

ಬೆಳ್ತಂಗಡಿ: ದೇಶದಲ್ಲಿ ಸಂಸ್ಕೃತಿ, ಜನಾಂಗ, ಭಾಷೆ ಮತ್ತು ಕಾನೂನಿನಲ್ಲಿ ಕಂಡುಬರುವ ಗೊಂದಲ ನಿವಾರಣೆಯಾಗಬೇಕಾದರೆ ಸಮಾನ ನಾಗರಿಕ ಸಂಹಿತೆ ಜಾರಿಯಾಗಲೇಬೇಕು ಎಂದು ಬೆಳ್ತಂಗಡಿಯ ನ್ಯಾಯವಾದಿಗಳಾದ ಧನಂಜಯ ರಾವ್ ಬಿ.ಕೆ. ಹೇಳಿದರು.

ಅವರು ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸಾಕ್ಷರತಾ ಸಂಘ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜರುಗಿದ ಸಮಾನ ನಾಗರಿಕ ಸಂಹಿತೆ ವಿಷಯದ ಕುರಿತು ಮಾತನಾಡುತ್ತಾ, ನಮ್ಮ ದೇಶದಲ್ಲಿ ಎಲ್ಲಾ ರೀತಿಯ ಹಕ್ಕುಗಳನ್ನು ತಿಳಿದುಕೊಂಡಂತೆ ಕರ್ತವ್ಯವನ್ನು ಕೂಡ ಪಾಲಿಸಬೇಕು. ರಾಷ್ಟ್ರ, ರಾಷ್ಟ್ರಗೀತೆ, ಸಂವಿಧಾನ, ರಾಷ್ಟ್ರನಾಯಕರು, ಭಾಷೆ, ಸಂಸ್ಕೃತಿ ಇದೆಲ್ಲವನ್ನು ಗೌರವಿಸಿ ನಡೆಯುವುದು ನಮ್ಮ ಕರ್ತವ್ಯವಾಗಿದೆ. ದೇಶದ ಏಕರೂಪವಾಗಿ ಸಹಬಾಳ್ವೆಯಿಂದ ಬದುಕುವ ಅವಕಾಶ ಇರಬೇಕು. ಇದರಿಂದ ದೇಶದಲ್ಲಿ ಸುಭದ್ರತೆ ನೆಲೆಗೊಳ್ಳಲು ಸಾಧ್ಯವಿದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ವಾಣಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಗಣೇಶ್ ಗೌಡ ಉಪಸ್ಥಿತರಿದ್ದರು. ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ ಸ್ವಾಗತಿಸಿದರು. ಕಾನೂನು ಸಾಕ್ಷರತಾ ಸಂಘದ ಸಂಯೋಜಕರಾದ ಶ್ರೀಮತಿ ಮೀನಾಕ್ಷಿ ವಂದಿಸಿದರು. ಕು|ಸನುಷಾ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

Related posts

ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಶ್ರೀ ಶಾಸ್ತಾರ ದೇವರ ಪುನಃಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತಾ ಸಭೆ

Suddi Udaya

ಕಲ್ಮಂಜ : ಬೆರ್ಕೆಯಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಹಾನಿ

Suddi Udaya

ಮುಂಡಾಜೆ: ಕಾನೂನು ಅರಿವು ಕಾರ್ಯಕ್ರಮ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳರೋಗ ತಪಾಸಣಾ ಶಿಬಿರ

Suddi Udaya

ಅಳದಂಗಡಿಯಲ್ಲಿ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

Suddi Udaya

ಉಜಿರೆ: ಎಸ್ ಡಿ ಎಮ್ ಸಂಸ್ಥೆಗಳ ಅಂತರ್ ಪ್ರೌಢಶಾಲಾ ಬಾಲಕ -ಬಾಲಕಿಯರ ಕ್ರೀಡಾಕೂಟ

Suddi Udaya
error: Content is protected !!