April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಬೆಳ್ತಂಗಡಿ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ

ಬೆಳ್ತಂಗಡಿ :ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವ 2 ನೇ ದಿನದ ಅಂಗವಾಗಿ ಭಕ್ತಿ ರಸಂಮಜರಿ ನಡೆಯಿತು.

ನಂತರ ನಡೆದ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪೀತಾಂಬರ ಹೇರಾಜೆ ವಹಿಸಿದ್ದರು.

ನಿವೃತ್ತ ಪ್ರಾಂಶುಪಾಲರಾದ ಎ.ಕೃಷ್ಣಪ್ಪ ಪೂಜಾರಿಯವರು ಧಾರ್ಮಿಕ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಸ್ವಾಮಿ ಪ್ರಸಾದ್ ಕನ್ಸ್ಟ್ರಕ್ಷನ್ ಮಾಲಕ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗೇಶ್ ಕುಮಾರ್, ಬೆಳ್ತಂಗಡಿ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್,ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಅನಂತ ಭಡ್ ಮಚ್ಚಿಮಲೆ,ಪತ್ರಕರ್ತರ ಸಂಘದ ಅಧ್ಯಕ್ಷ ಹೃಷಿಕೇಶ್ ಧರ್ಮಸ್ಥಳ,ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಗೌರವ ಸಲಹೆಗಾರ ಮಂಜುನಾಥ ರೈ ಬೆಳ್ತಂಗಡಿ, ಶ್ರೀ ರಾಘವೇಂದ್ರ ಸೇವಾ ಟ್ರಸ್ಟ್ ಕೋಶಾಧಿಕಾರಿ ವಸಂತ ಸುವರ್ಣ, ಉಪಾಧ್ಯಕ್ಷ ಮಹಾಬಲ ಶೆಟ್ಟಿ ಉಪಸ್ಥಿತರಿದ್ದರು.

ನಿರಂತರ ಧಾರ್ಮಿಕ, ವೈದಿಕ, ಭಕ್ತಿ ರಸಮಂಜರಿ, ಭಜನೆ ಕಾರ್ಯಕ್ರಮಗಳು ನಡೆಯುತ್ತಿದ್ದು, ಪತ್ರಕರ್ತ ಹೃಷಿಕೇಶ್ ಧರ್ಮಸ್ಥಳ ರವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರಿ ರಾಘವೇಂದ್ರ ಪ್ರತಿಷ್ಠಾನದ ಪ್ರಮುಖರಾದ ಕೆ.ವಸಂತ ಬಂಗೇರ, ಶೇಖರ ಬಂಗೇರ,ಕೆ.ಶಂಕರ ಹೆಗ್ಡೆ,ವಿಶ್ವನಾಥ ಆರ್ ನಾಯಕ್,ಜಿ.ಸೋಮೇ ಗೌಡ,ಮೋಹನ್ ರಾವ್ ಉಜಿರೆ,ಮುರಳೀಧರ ರಾವ್,ತಿಮ್ಮಪ್ಪ ಗೌಡ ಪೆರ್ಮಾಣು,ರಾಘ್ನೇಶ್ ಬೆಳ್ತಂಗಡಿ, ನಿಖಿಲ್ ಪೈ ಬೆಳ್ತಂಗಡಿ, ಶ್ರವಣ್ ರಾಜ್ ಹೇರಾಜೆ,ಪ್ರಧಾನ ಆರ್ಚಕ ರಾಘವೇಂದ್ರ ಭಾಂಗಿಣ್ಣಾಯ ಕುಂಠಿಣಿ,ಬಿ.ಎ ಕುಮಾರ ಹೆಗ್ಡೆ ಸಹಕರಿಸಿದರು.

ಇತ್ತೀಚೆಗೆ ನಿಧನರಾದ ಸ್ಪಂದನಾ ವಿಜಯ ರಾಘವೇಂದ್ರರವರಿಗೆ ಕಾರ್ಯಕ್ರಮದಲ್ಲಿ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

Related posts

ಅರಸಿನಮಕ್ಕಿ ಗ್ರಾ.ಪಂ. ಅನುದಾನದಲ್ಲಿ ಹೊಸ್ತೋಟ ಅಂಗನವಾಡಿ ಕೇಂದ್ರಕ್ಕೆ ಸುಣ್ಣ ಬಣ್ಣ, ಗೋಡೆ ಬರಹ, ವರ್ಣ ರಂಜಿತ ಚಿತ್ರ

Suddi Udaya

ಶ್ರೀಮತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬೆಳಾಲು ಪ್ರೌಢಶಾಲೆಯ ಭೇಟಿ, ಮಕ್ಕಳೊಂದಿಗೆ ಮಾತುಕತೆ

Suddi Udaya

ಗುರುವಾಯನಕೆರೆ ಯಕ್ಷಗಾನ ನಾಟ್ಯ ತರಗತಿಗೆ ಚಾಲನೆ

Suddi Udaya

ಉಜಿರೆ ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನೀಯರಿಂಗ್ ವಿದ್ಯಾರ್ಥಿ ಅಭಿಷೇಕ್ ರಿಗೆ ಡಿಪ್ಲೋಮ ಸಿಇಟಿ ಯಲ್ಲಿ ರಾಜ್ಯಕ್ಕೆ 20ನೇ ರ್‍ಯಾಂಕ್

Suddi Udaya

ಸಿರಿ ಕೇಂದ್ರ ಕಛೇರಿಯಲ್ಲಿ ಮಹಿಳಾ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಬೆಳ್ತಂಗಡಿ : ಹಳೆಕೋಟೆಯಲ್ಲಿ ಗೋಲ್ಡನ್ ಬ್ಯೂಟಿ ಪಾರ್ಲರ್ & ಮೇಕಪ್ ಅಕಾಡೆಮಿ (ಫ್ಯಾನ್ಸಿ ಮತ್ತು ಟೈಲರಿಂಗ್) ಶುಭಾರಂಭ

Suddi Udaya
error: Content is protected !!