ಉಜಿರೆ: ಗಣಿತಶಾಸ್ತ್ರವು ಎಲ್ಲಾ ಬಗೆಯ ತಾಂತ್ರಿಕ ಶಿಕ್ಷಣದ ಉಸಿರಾಗಿದೆ. ಯಾವುದೇ ಕ್ಷೇತ್ರದಲ್ಲಿಯೂ ಗಣಿತವು ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿದೆ ಎಂದು ಎಸ್.ಡಿ.ಯಂ. ತಾಂತ್ರಿಕ ಕಾಲೇಜು ಉಜಿರೆಯ ಸಹಪ್ರಾಧ್ಯಾಪಕ ಡಾ.ಸುಬ್ರಹ್ಮಣ್ಯ ಭಟ್ ರವರು ನುಡಿದರು.
ಅವರು ಸೆ.1ರಂದು ಎಸ್.ಡಿ.ಯಂ. ಕಾಲೇಜಿನ ಗಣಿತಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಘಟನೆ ” ಸಿಗ್ಮಾ ಅಸೋಸಿಯೇಷನ್ ” ನ ಕಾರ್ಯ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಗಣೇಶ್ ನಾಯಕ್ ವಹಿಸಿದ್ದರು.
ಈ ಸಂದರ್ಭದಲ್ಲಿ ಡಾ. ಸುಬ್ರಹ್ಮಣ್ಯ ಭಟ್ಟರು ಗಣಿತ ವಿಭಾಗದ ಭಿತ್ತಿ ಪತ್ರಿಕೆಯನ್ನು ಅನಾವರಣಗೊಳಿಸಿ ಸಿಗ್ಮಾ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಶುಭವನ್ನು ಹಾರೈಸಿದರು. ಬಳಿಕ “ಅಪ್ಲಿಕೇಷನ್ ಆಫ್ ಮ್ಯಾಥಮ್ಯಾಟಿಕ್ಸ್ ಇನ್ ಇಂಜಿನಿಯರಿಂಗ್” ವಿಚಾರದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದರು. ಸಭಾ ಕಾರ್ಯಕ್ರಮವನ್ನು ಕಾಲೇಜಿನ ಅಂತಿಮ ಬಿಯಸ್ಸಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ಆಯೋಜಿಸಿ ನೆರವೇರಿಸಿದರು.