ಗೇರುಕಟ್ಟೆ: ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ.3 ಸಂಘದ ಸಹಕಾರಿ ಸಭಾಭವನದಲ್ಲಿ ಜರುಗಿತು.
ಸಂಘದ ವಸಂತ ಮಜಲು ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಂಘವು ಪ್ರಸಕ್ತ ಸಾಲಿನಲ್ಲಿ ಈ ಸಾಲಿನಲ್ಲಿ 252.ಕೋಟಿ ವ್ಯವಹಾರ ನಡೆಸಿ, ರೂ.76.10ಲಕ್ಷ ನಿವ್ವಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ.16ಡಿವಿಡೆಂಡ್ ನೀಡುವುದಾಗಿ ಪೋಷಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ನಿರ್ದೇಶಕರಾದ ಹರಿದಾಸ್ ಪಡಂತ್ತಾಯ, ದೇವಣ್ಣ ಮೂಲ್ಯ, ರಾಜೀವ ಗೌಡ, ರಾಜ್ ಪ್ರಕಾಶ್ ಶೆಟ್ಟಿ ಪಡ್ಡಾಯಿಲು, ರತ್ನಾಕರ, ಚಂದ್ರಾವತಿ, ಶಶಿಧರ ಶೆಟ್ಟಿ, ನೋಣಯ್ಯ, ಮಮತಾ ಹಾಗೂ ಸಂಘದ ಸರ್ವ ಸದಸ್ಯರು,ಡಿ.ಸಿ.ಸಿ. ಪ್ರತಿನಿಧಿ ಸಂದೇಶ. ಉಪಸ್ಥಿತರಿದ್ದರು.
ನಿರ್ದೇಶಕ ಶೇಖರ್ ನಾಯ್ಕ ಸ್ವಾಗತಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಶಂಕರ್ ಕೆ.ಜೆ. ವಾರ್ಷಿಕ ವರದಿ ವಾಚಿಸಿದರು. ರಾಜೇಶ್ ಪೆಂರ್ಬಡ ಕಾರ್ಯಕ್ರಮ ನಿರೂಪಿಸಿ, ಸಿಬ್ಬಂದಿ ಸಂತೋಷ್ ಧನ್ಯವಾದವಿತ್ತರು.