April 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮದ್ದಡ್ಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯಿಂದ ತುಮಕೂರು ಜಿಲ್ಲೆಯ ಶಿರಾದಲ್ಲಿ ಸುಮಾರು 5೦ ಮಕ್ಕಳಿಗೆ ಉಚಿತ ಭಜನಾ ತರಬೇತಿ

ಬೆಳ್ತಂಗಡಿ: ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಪ್ರಪ್ರಥಮ ಬಾರಿಗೆ 3 ತಿಂಗಳ ಕಾಲ ಭಜನಾ ತರಬೇತಿಯನ್ನು ಪ್ರಾರಂಭಿಸಿದ ಬೆಳ್ತಂಗಡಿ ತಾಲೂಕಿನ ಮದ್ದಡ್ಕದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಭಜನಾ ಸಮಿತಿಯ ಅಧ್ಯಕ್ಷರಾದ ಸಂದೇಶ್ ಅನಿಲ ಇವರು 3500 ಸಾವಿರ ಮಕ್ಕಳಿಗೆ ಭಜನಾ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದು, ಇವರು ತುಮಕೂರು ಜಿಲ್ಲೆಯ ಶಿರಾ ಎಂಬಲ್ಲಿ ಸುಮಾರು 5೦ ಮಕ್ಕಳಿಗೆ ಉಚಿತ ಭಜನಾ ತರಬೇತಿಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಶಿರಾ ಶ್ರೀ ದುರ್ಗಾಂಬಾ ಕುಣಿತ ಭಜನಾ ಮಂಡಳಿಯ ಉದ್ಘಾಟನಾ ಕಾರ್ಯಕ್ರಮವು ಸೆ.2 ರಂದು ನಡೆಯಿತು.

ಓಡೀಲು ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಸದಸ್ಯ ಪ್ರದೀಪ್ ಕುಮಾರ್ , ಪುಂಜಾಲಕಟ್ಟೆ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಸದಸ್ಯರಾದ ಚರಣ್, ಹೇಮಂತ್, ಸಿಂಧೂ, ಪೂರ್ನೇಶ್, ಚಿಂತನ್, ದೀಪಕ್ . ಸುಶಾಂತ್, ಶ್ರೀ ನಾಗಶ್ರೀ ಭಜನಾ ಮಂಡಳಿ ಕೊಜಪ್ಪಾಡಿಯ ಸದಸ್ಯರು ಗಗನ್, ಆಕಾಶ್ , ಶ್ರೀ ಸದಾಶಿವ ಭಜನಾ ಮಂಡಳಿ ಮಲ್ಲಿಪಾಡಿ ಪಡಂಗಡಿ ದೀಕ್ಷಿತ್ , ಭವಿತ್ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ನಾಳ ಇವರು ತರಬೇತಿಯನ್ನು ನೀಡಿದರು.


ಈ ಸಂದರ್ಭದಲ್ಲಿ ಭಜನಾ ತರಬೇತಿಯನ್ನು ನೀಡಿದ ಸಂದೇಶ್ ಅನಿಲ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ತರಬೇತಿಯನ್ನು ನೀಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶ್ರೀ ರಾಘವೇಂದ್ರ ಸ್ವಾಮಿ ಮಠ ಶ್ರೀರಾಘವೇಂದ್ರ ಸ್ವಾಮಿಗಳ ಶೋಭಾಯಾತ್ರೆ ಯೊಂದಿಗೆ ರೊಡ್ ಶೋ ಭಜನಾ ಕಾರ್ಯಕ್ರಮ ನಡೆಯಿತು. ಶ್ರೀ ಭಗವ ರುಧ್ರಗಿರಿ ಇಲ್ಲಿಯ ಸದಸ್ಯರಾದಂತ ಸಚಿನ್, ಕೀರ್ತನ್, ಧನುಷ್, ಮನಿತ್, ಮಾನ್ವಿಷ್, ಸುಕೆಶ್ ಹಾಗೂ ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಾಲಾಡಿ ಇಲ್ಲಿಯ ಸಿಂಚನ್, ಪ್ರಸಾದ್ ಹಾಗೂ ಮಾಯ ಮಾಹೇಶ್ವರ ಭಜನಾ ಮಂಡಳಿ ಮಾಯ ಇಲ್ಲಿಯ ಶೋಭಿತ್ತಯ, ರಂಜನ್ ಭಾಗವಹಿಸಿದರು.

Related posts

ಮಾಲಾಡಿ : ಸಂಪತ್ ರಾಜ್ ಭಟ್ ನಿಧನ

Suddi Udaya

ಬೆಳ್ತಂಗಡಿ ಎಸ್‌ಡಿಪಿಐ ವತಿಯಿಂದ ಗ್ರಾ.ಪಂ. ಉಪಚುನಾವಣೆ ಪೂರ್ವತಯಾರಿ ಸಭೆ

Suddi Udaya

ಕಲ್ಮಂಜ : ದೇವರಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘ ಕಾರ್ಯಾರಂಭ

Suddi Udaya

ಉಜಿರೆ : ಸರ್ವಿಸ್ ಮಾಡಿ ಮನೆ ಬಳಿ ನಿಲ್ಲಿಸಿದ್ದ ಬೈಕ್ ಕಳವು

Suddi Udaya

ಪಡಂಗಡಿ: ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರ ಪರ ಮತಯಾಚನೆ

Suddi Udaya

ಬಾರ್ಯ, ತೆಕ್ಕಾರು ಪುತ್ತಿಲ ಗ್ರಾಮದಲ್ಲಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ

Suddi Udaya
error: Content is protected !!