ಉಜಿರೆ: ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಸಂಸ್ಕೃತ ಸಂಘ ಹಾಗೂ ಸಂಸ್ಕೃತ ಅಂತರಾಧ್ಯಯನ ವೃತ್ತಮ್ ಇವುಗಳ ಸಹಭಾಗಿತ್ವದಲ್ಲಿ ಸಂಸ್ಕೃತೋತ್ಸವ ಕಾರ್ಯಕ್ರಮ ನಡೆಯಿತು.
ಪ್ರಾಚಾರ್ಯ ಪ್ರಮೋದ್ ಕುಮಾರ್ ಅವರು ಶುಭಾಶಂಸನೆ ಮಾಡಿ ಸಂಸ್ಕೃತ ಭಾಷಾ ಮಹತ್ವ ತಿಳಿಸಿದರು.
ಮಹಾಕವಿ ಕಾಳಿದಾಸನ ಮೇಘದೂತಮ್ ಕಾವ್ಯದ ಅನುಸಂಧಾನ ಕಾರ್ಯಕ್ರಮ ನಡೆಯಿತು. ಅರ್ಥಗಾರಿಕೆಯಲ್ಲಿ ಅಂಜಲಿ , ಲಘ ಶಾಸ್ತ್ರೀಯ ಸಂಗೀತದಲ್ಲಿ ಪ್ರಸೀದಾ ರಾವ್ , ಶ್ಲೋಕದಲ್ಲಿ ಆದಿತ್ಯ ಹೆಗಡೆ , ಶಾಸ್ತ್ರೀಯ ಸಂಗೀತದಲ್ಲಿ ಸಿಂಧೂರ ಶೆಂಡ್ಯೆ, ಯಕ್ಷಗಾನ ಭಾಗವತಿಕೆಯಲ್ಲಿ ಸಿಂಚನಾ, ವರ್ಣ ಚಿತ್ರದಲ್ಲಿ ಸೌಂದರ್ಯ ಅವರು ಮೇಘದೂತಮ್ ಕಾವ್ಯವನ್ನು ಪ್ರಸ್ತುತಪಡಿಸಿದರು. ಅಭಿರಾಮ ಹೆಚ್.ವೈ ಹಾಗೂ ವೈಶಾಖ್ ಪಕ್ಕವಾದ್ಯಗಳಲ್ಲಿ ಸಹಕರಿಸಿದರು.
ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಪ್ರಾಸ್ತಾವಿಕ ಮಾತನಾಡಿದರು. ಚಂದ್ರಮೌಳಿ ಶರ್ಮಾ ಸ್ವಾಗತಿಸಿ, ಶ್ರೀತುಳಸೀ ಭಟ್ ವಂದಿಸಿದರು. ಸಂಸ್ಕೃತ ಸಂಘದ ಅಧ್ಯಕ್ಷ ಆದಿತ್ಯ ಹೆಗಡೆ ನಿರೂಪಿಸಿದರು.