25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿಶುಭಾರಂಭ

ಬೆಳ್ತಂಗಡಿ ಯಲ್ಲಿ ಡಾ| ರಂಜನ್ ಕುಮಾರ್ ಅವರ ಅನುಗ್ರಹ ಕ್ಲಿನಿಕ್ ಶುಭಾರಂಭ     

 ಬೆಳ್ತಂಗಡಿ:  ಬೆಳ್ತಂಗಡಿಯ ಬಸ್‌ನಿಲ್ದಾಣ ಮುಂಭಾಗದ  ಸಾಂತೋಮ್ ಟವರ್‍ಸ್‌ನಲ್ಲಿ ಡಾ| ರಂಜನ್ ಕುಮಾರ್ ಅವರ   ಅನುಗ್ರಹ ಕ್ಲಿನಿಕ್  ಜು. 7 ರಂದು ಶುಭಾರಂಭಗೊಂಡಿತು.

ಮುಖ್ಯ ಅತಿಥಿಗಳಾಗಿ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕೇಸ್ತರ ಶರತ್ ಕೃಷ್ಣ ಪಡವೆಟ್ನಾಯ, ಕ್ರೈಸ್ತ ಧರ್ಮಗುರುಗಳಾದ  ಫಾ|ಬಿನೋಯ್  ಮತ್ತು ಲಾಯಿಲ ಮಸೀದಿಯ ಧರ್ಮಗುರುಗಳಾದ  ಹಂಝ ಮದನಿ, ದೀಪ ಪ್ರಜ್ವಲಿಸಿ ಉದ್ಘಾಟಿಸಿ,ಶುಭ ಕೋರಿದರು. 

ಈ ಸಂದರ್ಭದಲ್ಲಿ ತಾಲೂಕಿನ ವೈದ್ಯರುಗಳು ಹಾಗೂ ಹಿತೈಷಿಗಳು ಆಗಮಿಸಿ ನೂತನ ಅನುಗ್ರಹ ಕ್ಲಿನಿಕ್ ಗೆ ಶುಭ ಹಾರೈಸಿದರು. 
ಅತಿಥಿಗಳನ್ನು ಸ್ವಾಗತಿಸಿದ ಡಾ|ರಂಜನ್ ಕುಮಾರ್ ಅವರು ಕಳೆದ 19 ವರ್ಷಗಳಿಂದ ಉಜಿರೆ ಹಾಗು ಬೆಳ್ತಂಗಡಿಯ ಜನತೆಗೆ ವೈದ್ಯಕೀಯ ಸೇವೆ ನೀಡುತ್ತಿದ್ದು ಈ ಹೊಸ ಕ್ಲಿನಿಕ್ ನಲ್ಲಿ  ಬೆಳಗ್ಗೆ 9 ರಿಂದ ಸಾಯಂಕಾಲ 6 ಗಂಟೆಯವರೆಗೆ ಎಲ್ಲಾ ತರಹದ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ಲಭ್ಯವಿರುವುದಾಗಿ ತಿಳಿಸಿದರು.

ಜ್ವರ, ಶೀತ, ಕೆಮ್ಮು, ಬಿಪಿ, ಶುಗರ್ ಮುಂತಾದ ಸಾಮಾನ್ಯ  ಕಾಯಿಲೆಗಳಲ್ಲದೆ ವಿಶೇಷವಾಗಿ ಥೈರೊಯ್ಡ್, ಅಲರ್ಜಿ, ಅಸ್ತಮಾ, ವರ್ಟಿಗೋ, ಮೈಗ್ರೇನ್, ಕ್ಯಾನ್ಸರ್, ಕಿವುಡುತನ, ಕಿವಿ, ಮೂಗು, ಗಂಟಲು ಕಾಯಿಲೆ, ರಕ್ತಹೀನತೆ ಮತ್ತು ಅಪೌಷ್ಟಿಕತೆ, ಧೂಮಪಾನ ಮತ್ತು ಮದ್ಯಪಾನ ಚಟ, ಜನರಲ್ ಹೆಲ್ತ್ ಚೆಕ್ ಅಪ್, ಗರ್ಭಿಣಿ ಮತ್ತು ಮಕ್ಕಳ ತಪಾಸಣೆ, ಮುಟ್ಟಿನ  ಸಮಸ್ಯೆ, ಹಾರ್ಮೋನ್ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಮತ್ತು ಸಲಹೆ,   ನೆಬುಲೈ ಸೇಶನ್, ಗ್ಲುಕೋಸ್ ಡ್ರಿಪ್, ಆಕ್ಸಿಜನ್, ಡೆ-ಕೇರ್ ಇತ್ಯಾದಿ ಸೌಲಭ್ಯವಿದೆ ಎಂದು ತಿಳಿಸಿದರು.

ಡಾ| ಚೈತ್ರಾ ಆರ್ . ಉಪಸ್ಥಿತರಿದ್ದು ಅತಿಥಿಗಳನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಇಡೀ ದಿನ ನಡೆದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಉಚಿತ ಬಿಪಿ, ಶುಗರ್ ,spo2 ತಪಾಸಣೆ ಯಲ್ಲಿ ತಾಲೂಕಿನ ನೂರಾರು ಫಲಾನುಭವಿಗಳು  ಪ್ರಯೋಜನ ಪಡೆದರು.

Related posts

ಕುತ್ಯಾರು ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ಬೆಳ್ತಂಗಡಿ ಪೊಲೀಸ್ ರಿಂದ ತನಿಖೆ

Suddi Udaya

ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಾನಂದ ಪೂಜಾರಿ ಲಾಯಿಲರವರಿಗೆ ಸನ್ಮಾನ

Suddi Udaya

ಬಡಗಕಾರಂದೂರು ಶಾಲೆಯಲ್ಲಿ ಪರಿಸರ ದಿನಾಚರಣೆ – ಪುಸ್ತಕ ಪೂಜೆ

Suddi Udaya

ಹೊಸಂಗಡಿ ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ವಿಜೃಂಭಣೆಯ ಗಣೇಶೋತ್ಸವ

Suddi Udaya

ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಗೆ ‘ಕರ್ನಾಟಕ ಪರಿವರ್ತನೆಯ ರೂವಾರಿ’ ಪ್ರಶಸ್ತಿ

Suddi Udaya

ಮೇ 14-22: ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ

Suddi Udaya
error: Content is protected !!