ಹೊಸಂಗಡಿ: ಇಂದಿರಾಗಾಂಧಿ ವಸತಿ ಶಾಲೆ ಹೊಸಂಗಡಿಯಲ್ಲಿ ನಡೆದ ಪಡ್ಡಂದಡ್ಕ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪೆರಿಂಜೆಯ ವಿದ್ಯಾರ್ಥಿಗಳು ಹಿರಿಯ ಹಾಗೂ ಕಿರಿಯ ಪ್ರಾಥಮಿಕ ವಿಭಾಗದಲ್ಲಿ 8 ಪ್ರಥಮ, 8 ದ್ವಿತೀಯ, 9 ತೃತೀಯ ಬಹುಮಾನ ಪಡೆದು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದು ಚಾಂಪಿಯನ್ ಆಗಿ ಹೊರಹೊಮ್ಮಿತು.
ಪ್ರಥಮ ಸ್ಥಾನ ಗಳಿಸಿದ ರಕ್ಷಾ(ಕಥೆ), ಪ್ರಾಪ್ತಿ(ಅಭಿನಯ ಗೀತೆ), ಮಹಮ್ಮದ್ ಸಲೀಂ (ಧಾರ್ಮಿಕ ಪಠಣ), ಹುದಾ ಮರ್ಯಮ್ (ಇಂಗ್ಲೀಷ್ ಕಂಠಪಾಠ), ಅಕ್ಷತಾ(ಲಘು ಸಂಗೀತ) , ಸಾನ್ವಿ(ಭಕ್ತಿಗೀತೆ), ಅಶ್ವಿತಾ (ಕನ್ನಡ ಕಂಠಪಾಠ), ಅಕ್ಷಿತ್ (ಛದ್ಮವೇಷ)

ದ್ವಿತೀಯ ಸ್ಥಾನ ಹುದಾ ಮರ್ಯಮ್ (ಆಶುಭಾಷಣ), ಅಶ್ವಿತಾ(ಕಥೆ), ಪ್ರಾಪ್ತಿ(ಲಘು ಸಂಗೀತ), ರಶ್ಮಿತಾ(ಹಿಂದಿ ಕಂಠಪಾಠ), ಶರತ್ (ಮಿಮಿಕ್ರಿ), ತನುಷ್ (ಧಾರ್ಮಿಕ ಪಠಣ), ವಿನಿತ್ (ಚಿತ್ರಕಲೆ), ಭುವನ್(ಕ್ಲೇ ಮಾಡೆಲಿಂಗ್),
ತೃತೀಯ ಸ್ಥಾನ ಶಶಾಂಕ್ (ಕ್ಲೇ ಮಾಡೆಲಿಂಗ್), ಹಸನ್ ಸಹದ್ (ಧಾರ್ಮಿಕ ಪಠಣ), ವರ್ಷಿತ್(ಛದ್ಮವೇಷ), ಲಿಖಿತ್ (ಆಶುಭಾಷಣ), ಪ್ರಶ್ಮಾ(ಅಭಿನಯ ಗೀತೆ), ರಜತ್(ಚಿತ್ರಕಲೆ), ತನುಷ್(ಭಕ್ತಿಗೀತೆ), ಸಮೀಕ್ಷಾ.(ಧಾರ್ಮಿಕ ಪಠಣ),
ಅಕ್ಷತಾ (ಕನ್ನಡ ಕಂಠಪಾಠ) ಬಹುಮಾನ ಪಡೆದುಕೊಂಡಿದ್ದಾರೆ.